ಮಧ್ಯರಾತ್ರಿ ಮೂರು ಗಂಟೆಯ ಸಮಯದಲ್ಲಿ ತಾವು ಗೆಳೆಯರು ಜೊತೆ ಏನು ಮಾಡುತ್ತೇವೆ ಎನ್ನುವ ಸೀಕ್ರೇಟ್​ ಅನ್ನು ನಟಿ ಶ್ರುತಿ ಹಾಸನ್​ ರಿವೀಲ್​ ಮಾಡಿದ್ದಾರೆ. 

ಬಾಲಿವುಡ್​ ನಟಿ ಶ್ರುತಿ ಹಾಸನ್​ ಮತ್ತು ಶಂತನು ಹಜಾರಿಕಾ ಅವರ ಸಂಬಂಧ, ಲಿವ್​ ಇನ್​ ರಿಲೇಷನ್​ ಮುರಿದು ಬಿದ್ದಿರುವುದು ಎರಡು ತಿಂಗಳ ಹಿಂದೆ ಕನ್​ಫರ್ಮ್​ ಆಗಿದೆ. ಈ ಕುರಿತು ನಟಿಯೇ ಹೇಳಿಕೊಂಡಿದ್ದರು. ಈ ಮೂಲಕ ಎರಡನೆಯ ಬಾಯ್​ಫ್ರೆಂಡ್​ಗೂ ಶ್ರುತಿ ಗುಡ್​ ಬೈ ಹೇಳುವ ಮೂಲಕ ಆರುಕ್ಕೂ ಅಧಿಕ ಬಾಯ್​ಫ್ರೆಂಡ್ಸ್​ಗಳನ್ನು ತೊರೆದಿದ್ದಾರೆ. ಅಂದಹಾಗೆ ಶಂತನು ಅವರು ಶ್ರುತಿ ಹಾಸನ್​ ಅವರ ಎರಡನೆಯ ಬಾಯ್​ಫ್ರೆಂಡ್​. ಇದೀಗ ಇವರ ಜೊತೆಯೂ ಬ್ರೇಕಪ್​ ಆಗಿದೆ ಎನ್ನಲಾಗಿದೆ. ಶ್ರುತಿ ಅವರು​ ಶಂತನು ಹಜಾರಿಕಾ ಅವರನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದಾಗ, ಶಂತನು ಕೂಡ ಶ್ರುತಿ ಅವರನ್ನು ಕೈಬಿಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆಯಾದಾಗಲೇ ಇವರಿಬ್ಬರೂ ಬ್ರೇಕಪ್​ ಆಗಿರೋ ಸುದ್ದಿ ಹೊರಗಡೆ ಬಂದಿತ್ತು. ಕೆಲ ತಿಂಗಳ ಹಿಂದೆಯೇ ಇವರಿಬ್ಬರೂ ಪ್ರತ್ಯೇಕ ಆಗಿರುವ ಗುಟ್ಟು ರಟ್ಟಾಗಿದೆ. 

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಶ್ರುತಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಚಿಟ್ ಚಾಟ್‌ನಲ್ಲಿ ತೊಡಗುತ್ತಿರುತ್ತಾರೆ. ತಮಾಷೆಯ ಮಾತುಕತೆ ನಡೆಸುತ್ತಿರುತ್ತಾರೆ. ನಟಿ ಇಲ್ಲಿಯವರೆಗೂ ಬ್ರೇಕಪ್ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಿಲ್ಲ, ಆದರೆ ನಾನು ಸಿಂಗಲ್ ಆಗಿದ್ದೇನೆ ಎಂದು ಹೇಳುತ್ತಲೇ ಇರುತ್ತಾರೆ. ಸದ್ಯ ಒಂಟಿಯಾಗಿದ್ದೇನೆ.. ಹೀಗೆ ಖುಷಿಯಾಗಿದ್ದೇನೆ.. ಬೆರೆಯಲು ತಯಾರಿಲ್ಲ ಎಂದೆಲ್ಲಾ ಹೇಳಿಕೊಳ್ಳುತ್ತಾರೆ. ಇದರಿಂದ ಬ್ರೇಕಪ್​ ಆಗಿರುವುದು ನಿಜ ಎಂದು ಎಲ್ಲರಿಗೂ ತಿಳಿದಿದೆ. 

ಮದ್ವೆ ಬೇಡ, ಇವ್ನ ಜೊತೆ ಎಂಜಾಯ್​ ಮಾಡ್ತಿದ್ದೇನೆಂದ ಶ್ರುತಿ ಹಾಸನ್ 2ನೇ ಬಾಯ್​ಫ್ರೆಂಡ್​ಗೂ ಗುಡ್​ಬೈ ಹೇಳಿದ್ರಾ?

ಇದೀಗ ನಟಿ ಮಿಡ್​ನೈಟ್​ ಸೀಕ್ರೇಟ್​ ಬಿಚ್ಚಿಟ್ಟಿದ್ದಾರೆ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನಟಿ, ಬೆಳಗಿನ ಜಾವ ಮೂರಕ್ಕೆ ಎಲ್ಲರೂ ಮಲಗಿದ್ದರೆ ನಾನು ಮಾತ್ರ ಗೆಳೆಯರ ಜೊತೆ ರೀಲು, ಮೀಮ್ಸ್​ ಹಂಚಿಕೊಳ್ಳುತ್ತಿರುತ್ತೇನೆ. ಎಂದಿದ್ದಾರೆ. ನಟಿ ಹಾಕಿರುವ ಪೋಸ್ಟ್ ವೈರಲ್ ಆಗುತ್ತಿರುವಾಗಲೇ ನೆಟ್ಟಿಗರು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ. ಇದಾ ನಿಮ್ಮ ಮಿಡ್​ನೈಟ್​ ಸೀಕ್ರೇಟಾ ಎಂದು ಕೆಲವರು ಕೇಳಿದರೆ, ಏಳನೇ ಬಾಯ್​ಫ್ರೆಂಡ್​​ ಸಿಗಲಿಲ್ವಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ ತರ್ಲೆ ನೆಟ್ಟಿಗರು. ನಡುರಾತ್ರಿ ಮೂರು ಗಂಟೆಯವರೆಗೆ ನಿದ್ದೆ ಬರದಿದ್ದರೆ ಹೇಳಿ, ನಾನು ಬರುವೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. 

ಅಂದಹಾಗೆ, ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​, ಕೆಲ ದಿನಗಳ ಹಿಂದೆ ತಮ್ಮ ಕರಾಳ ಜೀವನದ ಕುರಿತು ಹೇಳಿಕೊಂಡಿದ್ದಾರೆ. ಅಪ್ಪ ಕಮಲ ಹಾಸನ್​ ಮತ್ತು ಅಮ್ಮ ನಟಿ ಸಾರಿಕಾ ಇವರಿಬ್ಬರೂ ಪ್ರೀತಿಸಿ ಮದುವೆಯಾದವರು. ಆದರೆ 2004ರಲ್ಲಿ ಇವರ ವಿಚ್ಛೇದನವಾಗಿತ್ತು. 1986ರಲ್ಲಿ ಹುಟ್ಟಿರೋ ಶ್ರುತಿ ಹಾಸನ್​ ಅವರಿಗೆ ಅಪ್ಪ-ಅಮ್ಮ ಬೇರೆಯಾದಾಗ ಇನ್ನೂ 18 ವರ್ಷ ವಯಸ್ಸು. ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಅಪ್ಪ-ಅಮ್ಮನ ಈ ರೀತಿಯ ಅಗಲಿಕೆಯಿಂದ ತಾವು ಹೇಗೆ ಕುಗ್ಗಿ ಹೋಗಿದ್ದೆ. ಈ ಘಟನೆಗಳಿಂದ ನಾನು ಮದ್ಯವ್ಯಸನಿಯಾಗಿದ್ದೆ. ಖಿನ್ನತೆಗೆ ಜಾರಿ ಹುಚ್ಚಿಯೂ ಆಗಿದ್ದೆ ಎಂದು ನಟಿ ಸಂದರ್ಶನದಲ್ಲಿ ಹೇಳಿದ್ದಾರೆ. ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎನ್ನುವ ಸುದ್ದಿ ಆಗ ಹಬ್ಬಿತ್ತು. ಅದು ನಿಜವೂ ಆಗಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಅಪ್ಪ-ಅಮ್ಮನ ಡಿವೋರ್ಸ್ ವಿಚಾರವೇ ಆಗಿತ್ತು. ಇದು ನನ್ನ ಮನಸ್ಸಿಗೆ ತುಂಬಾ ಘಾಸಿ ಉಂಟು ಮಾಡಿತ್ತು ಎಂದು ಶ್ರುತಿ ಹೇಳಿಕೊಂಡಿದ್ದರು.

ಮದ್ವೆಗೆ 60 ಲಕ್ಷ ಖರ್ಚು ಮಾಡಿಬಿಟ್ಟೆ, ದೊಡ್ಡ ಪಾಠ ಕಲಿಸಿತು ಲೈಫ್‌... ಚಂದನ್‌ ಶೆಟ್ಟಿ ಮನದಾಳದ ಮಾತು...