Asianet Suvarna News Asianet Suvarna News

Love Beyond Borders: 28 ವರ್ಷದ ಪ್ರಿಯಕರನ ವರಿಸಲು ಗಡಿ ದಾಟಿ ಬಂದ 83 ವರ್ಷದ ಮಹಿಳೆ

ಪ್ರೀತಿಗೆ ಜಾತಿ, ಧರ್ಮ, ವಯಸ್ಸು, ಬಣ್ಣ, ರಾಜ್ಯ, ದೇಶ ಯಾವುದರ ಹಂಗೂ ಇಲ್ಲ. ಹಾಗೇ ಸುಮ್ಮನೆ ಪ್ರೀತಿಯಾಗಿ ಬಿಡುತ್ತದೆಯಷ್ಟೆ. ಆ ಪ್ರೀತಿಗಾಗಿ ವ್ಯಕ್ತಿ ಏನು ಮಾಡಲು ಸಹ ಸಿದ್ಧನಾಗಿ ಬಿಡುತ್ತಾನೆ. ಹಾಗೇ ಪೋಲಿಶ್‌ನ 83 ವರ್ಷದ ಮಹಿಳೆಯೊಬ್ಬಳು ಪಾಕಿಸ್ತಾನದಲ್ಲಿರುವ 28 ವರ್ಷದ ಪ್ರೇಮಿಗಳು ಮದ್ವೆಯಾಗೋಕೆ ತನ್ನ ದೇಶದಿಂದ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾಳೆ. ಆ ಇಂಟ್ರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ.

83 Year old Polish Woman Travels To Pakistan To marry 28 year old Auto Mechanic Vin
Author
First Published Nov 6, 2022, 12:45 PM IST

ಪ್ರೀತಿಯೆಂಬುದೇ ಹಾಗೆ. ಅದೊಂದು ಅದ್ಭುತ ಶಕ್ತಿ. ಅದಕ್ಕೆ ಎಲ್ಲವನ್ನೂ ಮೀರಿ ಬೆಳೆಯುವ ಶಕ್ತಿಯಿದೆ. ಜಾತಿ, ಧರ್ಮ, ಬಣ್ಣ, ಭಾಷೆ ಎಲ್ಲವೂ ಇಲ್ಲಿ ನಗಣ್ಯ. ಪರಿಶುದ್ಧ ಪ್ರೀತಿಗೆ ರಾಜ್ಯ, ದೇಶಗಳ ಗಡಿಯನ್ನು ದಾಟಿ ಬಿಡುವ ಸಾಮರ್ಥ್ಯವಿದೆ. ಅಪ್ಪಟ ಪ್ರೀತಿ ವಿದ್ಯೆ, ಅಂತಸ್ತು ಯಾವುದನ್ನೂ ನೋಡುವುದಿಲ್ಲ. ಶ್ರೀಮಂತ ಮಹಿಳೆಗೆ ಮುರುಕು ಗುಡಿಸಲಿನ ವ್ಯಕ್ತಿಯ ಮೇಲೆ ಪ್ರೀತಿ ಹುಟ್ಟುತ್ತದೆ, ದೊಡ್ಡ ಕಂಪೆನಿಯ ಬಾಸ್, ಕೆಲಸದಾಕೆಗೆ ಮನಸ್ಸು ನೀಡುತ್ತೇನೆ. ಪ್ರೀತಿಯಲ್ಲಿ ಎಲ್ಲವೂ ನಿಮಿತ್ತ. ಅಲ್ಲಿ ಪರಿಗಣನೆಗೆ ಬರುವುದು ಪ್ರೀತಿ ಮಾತ್ರ. ಹಾಗೆಯೇ, 83 ವರ್ಷದ ಪೋಲಿಷ್ ಮಹಿಳೆ ತನ್ನ 28 ವರ್ಷದ ಗೆಳೆಯನನ್ನು ಮದುವೆಯಾಗಲು ತನ್ನ ದೇಶದಿಂದ ಪಾಕಿಸ್ತಾನದಿಂದ ಪ್ರಯಾಣ ಬೆಳೆಸಿದ್ದಾಳೆ.

ಮೆಕ್ಯಾನಿಕ್ ಪ್ರಿಯಕರನನ್ನು ವರಿಸಲು ಪೋಲಿಶ್ ಟು ಪಾಕಿಸ್ತಾನ ಪಯಣ
60 ವರ್ಷಗಳ ವಯಸ್ಸಿನ ಅಂತರದ (Age gap)  ಅಸಾಮಾನ್ಯ ಸಂಬಂಧವು ಎರಡೂ ಕುಟುಂಬಗಳಿಂದ ಒಪ್ಪಿಗೆಯೊಂದಿಗೆ ಮದುವೆಯಲ್ಲಿ ಒಂದಾಯಿತು. ಬ್ರೋಮಾ ಎಂದು ಗುರುತಿಸಲ್ಪಟ್ಟ ಮಹಿಳೆ (Woman), ವೃತ್ತಿಯಲ್ಲಿ ಆಟೋ ಮೆಕ್ಯಾನಿಕ್ ಆಗಿರುವ ಹಫೀಜ್ ಮುಹಮ್ಮದ್ ನದೀಮ್ ಅವರನ್ನು ಮದುವೆಯಾಗಲು ಪೋಲಿಷ್‌ ನಿಂದ ಪಾಕಿಸ್ತಾನದ ಹಫೀಜಾಬಾದ್ ತಲುಪಿದರು. ಆರು ವರ್ಷಗಳ ಹಿಂದೆ ಬ್ರೋಮ್ ಅವರೊಂದಿಗೆ ಮೊದಲ ಬಾರಿಗೆ ಮಾತನಾಡಿದ್ದೇನೆ ಎಂದು ನದೀಮ್ ತಿಳಿಸಿದರು. ಸಂವಹನವು ಸ್ನೇಹವನ್ನು ಹುಟ್ಟುಹಾಕಿತು, ಅದು ಅಂತಿಮವಾಗಿ ಪ್ರೀತಿಗೆ (Love) ತಿರುಗಿತು. ಸಾಂಪ್ರದಾಯಿಕ ಸಮಾರಂಭದಲ್ಲಿ ಮದುವೆ (Marriage)ಯಾಗುವ ಮೊದಲು ಅವರು ಪರಸ್ಪರ ವೈಯಕ್ತಿಕವಾಗಿ ಭೇಟಿ (Meet)ಯಾಗಿರಲಿಲ್ಲ.

ಅಬ್ಬಬ್ಬಾ..88ನೇ ಬಾರಿ ಮದ್ವೆಯಾಗ್ತಿರೋ ವ್ಯಕ್ತಿ, ವಧು ಮತ್ಯಾರೂ ಅಲ್ಲ ಮಾಜಿ ಪತ್ನಿ!

ಗಡಿ ಮೀರಿದ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬ್ರೋಮಾ ಕೆಂಪು ಬಣ್ಣದ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದರು ಮತ್ತು ಸಮಾರಂಭಕ್ಕಾಗಿ ತನ್ನ ಕೈಯಲ್ಲಿ ಗೋರಂಟಿ ಧರಿಸಿದ್ದರು. ಇಸ್ಲಾಮಿಕ್ ಕಾನೂನು ಮತ್ತು ಕಸ್ಟಮ್ಸ್ ಅಡಿಯಲ್ಲಿ ಕಡ್ಡಾಯ ಪಾವತಿಯಾದ ಹಕ್ ಮೆಹರ್ ಅನ್ನು ಅವರು ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಬ್ರೋಮಾ ಅವರೊಂದಿಗಿನ ಸಂಬಂಧ (Relationship)ವಿರದಿದ್ದಲ್ಲಿ ನದೀಮ್ ತನ್ನ ಸೋದರ ಸಂಬಂಧಿಯನ್ನು ಮದುವೆಯಾಗಬೇಕಿತ್ತು ಎಂದು ನದೀಮ್ ಅವರ ಕುಟುಂಬ ಸದಸ್ಯರು ಬಹಿರಂಗಪಡಿಸಿದರು. ವಿಭಿನ್ನ ಸಂಸ್ಕೃತಿಗಳ ಅಥವಾ ದೊಡ್ಡ ವಯಸ್ಸಿನ ವ್ಯತ್ಯಾಸದ ನಡುವೆಯೇ ಇಬ್ಬರು ಒಂದಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಡಿಫರೆಂಟ್ ಲವ್‌ಸ್ಟೋರಿ ಎಲ್ಲರ ಗಮನ ಸೆಳೆದಿದೆ. 

ಕಳೆದ ತಿಂಗಳು, ಫಿಲಿಪೈನ್ಸ್‌ನಲ್ಲಿ 78 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಹುಡುಗಿಯನ್ನು ಮದುವೆಯಾಗಿದ್ದರು. ನಿವೃತ್ತ ರೈತನಾಗಿರುವ ಸೆಪ್ಟುಜೆನೇರಿಯನ್ ರಶಾದ್ ಮಂಗಾಕೋಪ್, ಹದಿಹರೆಯದ ಹಲೀಮಾ ಅಬ್ದುಲ್ಲಾಳನ್ನು ವಿವಾಹವಾದರು, ಅವರು ಕೇವಲ 15 ವರ್ಷದವರಾಗಿದ್ದಾಗ ಕಗಾಯಾನ್ ಪ್ರಾಂತ್ಯದ ಔತಣಕೂಟದಲ್ಲಿ ಹಲೀಮಾರನ್ನು ಮೊದಲ ಬಾರಿಗೆ ಭೇಟಿಯಾದರು. ರಶೆದ್ ಅವರು ಮೊದಲು ಮದುವೆಯಾಗಿರಲಿಲ್ಲ ಅಥವಾ ಪ್ರೇಮಿಯನ್ನು ಹೊಂದಿರಲಿಲ್ಲ. ಆಗಸ್ಟ್ 25 ರಂದು ಇಸ್ಲಾಮಿಕ್ ಸಮಾರಂಭದಲ್ಲಿ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗಿದ್ದರು.

'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!

ಅಕ್ಟೋಬರ್‌ನಲ್ಲಿ, ಮಹಿಳೆಯೊಬ್ಬರು ತನಗಿಂತ 30 ವರ್ಷ ಕಿರಿಯ ಮಸಾಯಿ ಬುಡಕಟ್ಟು ಜನಾಂಗದವರನ್ನು ಮದುವೆಯಾಗಲು ತನ್ನ ಮನೆಯಿಂದ 14,400 ಕಿ.ಮೀ ದೂರ ಬಂದಿದ್ದರು. 60 ವರ್ಷ ವಯಸ್ಸಿನ ಡೆಬೋರಾ ಬಾಬು, ಕಿರಿಯ ವ್ಯಕ್ತಿಯೊಂದಿಗೆ ತನ್ನ ಸಂಬಂಧಕ್ಕಾಗಿ ಟೀಕೆಗೆ ಒಳಗಾದ ಹೊರತಾಗಿಯೂ ತಾನು ಆತನಿಲ್ಲದೆ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು. ಅಕ್ಟೋಬರ್ 2017 ರಲ್ಲಿ ತನ್ನ ಮಗಳೊಂದಿಗೆ ಟಾಂಜಾನಿಯಾದಲ್ಲಿ ಪ್ರಯಾಣಿಸುತ್ತಿದ್ದಾಗ ಸೈಟೋಟಿ ಬಾಬು ಅವರನ್ನು ಭೇಟಿಯಾದರು. ಅದೇನೆ ಇರ್ಲಿ ಗಡಿಗಳ ಹಂಗಿಲ್ಲದ ಈ ಪ್ರೀತಿ ಒಂದು ಮ್ಯಾಜಿಕ್ ಅಂತಾನೇ ಹೇಳ್ಬಹುದು.

Follow Us:
Download App:
  • android
  • ios