'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!
ಕನ್ನಡದಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೊಗ್ಗಿನ ಮನಸು ಚಿತ್ರ ಬಂದಿತ್ತು ನೆನಪಿದೆಯಲ್ಲ. ಅದೇ ರೀತಿಯ ರಿಯಲ್ ಲೈಫ್ ಕಥೆ ಇದು. 20 ವರ್ಷದ ವಿದ್ಯಾರ್ಥಿನಿಯೊಬ್ಬಳು 52 ವರ್ಷದ ಶಿಕ್ಷಕನ್ನು ಪ್ರೀತಿಸಿದ್ದು ಮಾತ್ರವಲ್ಲ, ಅವರನ್ನೇ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.
ನವದೆಹಲಿ (ಅ. 29): ಇತ್ತೀಚೆಗೆ ಪಾಕಿಸ್ತಾನದಲ್ಲಿ ವಯಸ್ಸಿನ ಅಂತರದ ಮದುವೆಗಳು ಜಾಸ್ತಿ ಆಗುತ್ತಿವೆ. ಚಿಕ್ಕ ವಯಸ್ಸಿನ ಹುಡುಗಿ ಅಜ್ಜನ ವಯಸ್ಸಿನ ವ್ಯಕ್ತಿಯೊಂದಿಗೆ, ಚಿಕ್ಕ ವಯಸ್ಸಿನ ಹುಡುಗ ಅಜ್ಜಿಯ ವಯಸ್ಸಿನವರೊಂದಿಗೆ ಮದುವೆಯಾಗಿರುವ ಸಾಕಷ್ಟು ಸುದ್ದಿಗಳು ವರದಿ ಆಗುತ್ತಿವೆ. ಇದೂ ಕೂಡ ಅಂಥದ್ದೇ ಒಂದು ಕಥೆ. ಸೇಮ್ ಟು ಸೇಮ್ ಕನ್ನಡದ ಮೊಗ್ಗಿನ ಮನಸ್ಸು ಚಿತ್ರದ ಕಥೆ. ಮೊಗ್ಗಿನ ಮನಸ್ಸು ಚಿತ್ರದಲ್ಲಿ ರಾಧಿಕಾ ಪಂಡಿತ್ ತನ್ನ ಶಿಕ್ಷಕನಾಗಿದ್ದ ರಾಜೇಶ್ ನಟರಂಗಗೆ ಲವ್ ಲೆಟರ್ ನೀಡ್ತಾರೆ. ಆದರೆ, ಶಿಕ್ಷಕ ಪಾತ್ರದಲ್ಲಿದ್ದ ರಾಜೇಶ್ ನಟರಂಗ ಹೇಳುವ ಮಾತುಗಳು ಆಕೆಗೆ ತಾಕಿ ಬದಲಾಗೋದು ನಂತರದ ಕಥೆ. ಇಲ್ಲಿ ಹಾಗಾಗಿಲ್ಲ. 20 ವರ್ಷದ ವಿದ್ಯಾರ್ಥಿನಿ, 52 ವರ್ಷದ ಶಿಕ್ಷಕನನ್ನು ಪ್ರೀತಿ ಮಾಡಿದ್ದಾರೆ. ಬಳಿಕ ಇಬ್ಬರೂ ವಿವಾಹವಾಗಿದ್ದು ಸುಖ ಸಂಸಾರ ನಡೆಸುತ್ತಿದ್ದಾರೆ. 52 ವರ್ಷದ ಶಿಕ್ಷಕ ಹಾಗೂ 20 ವರ್ಷದ ವಿದ್ಯಾರ್ಥಿನಿಯ ಲವ್ ಮ್ಯಾರೇಜ್ ಪಾಕಿಸ್ತಾನದ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಶಿಕ್ಷಕನ ಲುಕ್ ಹಾಗೂ ವ್ಯಕ್ತಿತ್ವ ನನಗೆ ಬಹಳ ಇಷ್ಟವಾಗಿತ್ತು. ಕೊನೆಗೆ ಇದೇ ಪ್ರೀತಿಗೆ ತಿರುಗಿತು. 32 ವರ್ಷಗಳ ಅಂತರ ನಮ್ಮ ನಡುವೆ ಇದ್ದ ಕಾರಣ, ನಮ್ಮ ಸಂಬಂಧಿಗಳು ಈ ಮದುವೆಗ ಒಪ್ಪಿರಲಿಲ್ಲ. ಕೊನೆಗೆ ಅವರೇ ತೀರ್ಮಾನ ಮಾಡಿ ಮದುವೆಯಾಗಲು ತೀರ್ಮಾನಿಸಿದ್ದರು.
ಈ ಕಥೆಯು ಪಾಕಿಸ್ತಾನಿ ದಂಪತಿಗಳ ಕುರಿತಾಗಿದೆ. 20 ವರ್ಷದ ಜೋಯಾ ನೂರ್ 52 ವರ್ಷದ ಸಾಜಿದ್ ಅಲಿಯನ್ನು ಪ್ರೀತಿಸುತ್ತಿದ್ದಳು. ಜೋಯಾ ನೂರ್ ಬಿ.ಕಾಂ ಓದುತ್ತಿದ್ದ ಕಾಲೇಜಿನಲ್ಲಿ ಸಾಜಿದ್ ಅಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಾಜಿದ್ ಅಲಿಯ ನೋಟ ಹಾಗೂ ವ್ಯಕ್ತಿತ್ವ ಜೋಯಾ ನೋರ್ ಮೇಳೆ ಬಹಳ ಪ್ರಭಾವ ಬೀರಿತ್ತು. ಆಕರ್ಷಣೆಯಿಂದ ಆರಂಭವಾಯಿತಾದರೂ ಕೊನೆಗೆ ಇದು ಪ್ರೀತಿಗೆ ತಿರುಗಿತ್ತು.
ಸಂದರ್ಶನವೊಂದರಲ್ಲಿ ತನ್ನ ಪ್ರೇಮಕಥೆಯನ್ನು ವಿವರಿಸಿರುವ ಜೋಯಾ, ಆರಂಭದಲ್ಲಿ ಸಾಜಿದ್ ನನ್ನನ್ನು ತುಂಬಾ ಕಡೆಗಣಿಸಿದ್ದರು. ಆದರೆ ಒಂದು ದಿನ ನಾನು ಸಾಜಿದ್‌ಗೆ ಪ್ರೀತಿಯನ್ನು ವ್ಯಕ್ತಪಡಿಸಿದೆ. ನೀವು ನನಗೆ ಬಹಳ ಇಷ್ಟವಾಗಿದ್ದೀರಿ, ನಾನು ನಿಮ್ಮನ್ನ ಮದುವೆಯಾಗಲು ಬಯಸಿದ್ದೇನೆ ಎಂದು ಅವರಿಗೆ ಹೇಳಿದ್ದೆ' ಎಂದಿದ್ದಾರೆ. ಜೋಯಾ ಅವರ ಮದುವೆಯ ಪ್ರಸ್ತಾಪಕ್ಕೆ ವಯಸ್ಸಿನ ದೊಡ್ಡ ವ್ಯತ್ಯಾಸದ ಬಗ್ಗೆ ಯೋಚಿಸಲು ಸಾಜಿದ್ ಒಂದು ವಾರದ ಸಮಯವನ್ನು ಕೇಳಿದರು. ಈ ಒಂದು ವಾರದಲ್ಲಿ ಸಾಜಿದ್ ಕೂಡ ಜೋಯಾಳನ್ನು ಪ್ರೀತಿಸತೊಡಗಿದ. ನಂತರ ಇಬ್ಬರೂ ಮದುವೆಯಾಗಿದ್ದಾರೆ.
67 ವರ್ಷದ ವ್ಯಕ್ತಿ ಬೆಲೆಬಾಳುವ ಗಿಫ್ಟ್ ಕೊಟ್ಟ, 31 ವರ್ಷದ ಯುವತಿ ಹೃದಯ ಕೊಟ್ಟಳು!
ಸಂಬಂಧದ ಬಗ್ಗೆ ಸಂಬಂಧಿಕರ ಅಸಮಾಧಾನವನ್ನು ವಿವರಿಸುತ್ತಾ ಹೇಳಿದ ಸಾಜಿದ್, ಅನೇಕ ಸಂಬಂಧಿಕರು ಕೋಪಗೊಂಡರು. ನೀನು ತುಂಬಾ ಹ್ಯಾಂಡ್‌ಸಮ್. ಹಾಗಾಗಿ ಇಂಥ ಹುಡುಗಿಯನ್ನು ಸಿಕ್ಕಿದ್ದಾಳೆ ಎಂದು ಹೇಳುತ್ತಿದ್ದರು. ಅದೇ ಸಮಯದಲ್ಲಿ, ಕೆಲ ಸಂಬಂಧಿಕರು ಆಕ್ಷೇಪಿಸಿದ್ದಾರೆ. ಆದರೆ, ಜೋಯಾ ನೂರ್ ಮಾತ್ರ, ಪ್ರೀತಿ ಮಾಡುತ್ತಿದ್ದರೆ ಮದುವೆಯಾಗಲೇಬೇಕು ಎಂದು ಹೇಳಿದ್ದಳು ಎಂದರು. ಸಾಜಿದ್‌ನ ಗುಣಗಳನ್ನು ವಿವರಿಸಿದ ಜೋಯಾ, ಅವರು ಈ ಪ್ರದೇಶದ ಅತ್ಯುತ್ತಮ ಶಿಕ್ಷಕರು, ಅದು ಅವರಲ್ಲಿ ನನಗೆ ಇಷ್ಟವಾದ ಗುಣ. ಅವರು ವಿವರಿಸುವ ರೀತಿಗೆ ನಾನು ಅವರ ದೊಡ್ಡ ಅಭಿಮಾನಿ. ಮತ್ತೊಂದೆಡೆ, ಸಾಜಿದ್, ಜೋಯಾ ಅವರ ಉತ್ತಮ ಅಭ್ಯಾಸಗಳನ್ನು ವಿವರಿಸುತ್ತಾ, ಅವಳು ಮನೆಯಿಂದ ಒಳ್ಳೆಯ ಆಹಾರವನ್ನು ಮಾಡುತ್ತಾಳೆ ಮತ್ತು ಕಚೇರಿಯಲ್ಲಿ ಚಹಾವನ್ನು ತುಂಬಾ ಚೆನ್ನಾಗಿ ಮಾಡುತ್ತಾಳೆ ಎಂದಿದ್ದಾರೆ.
61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್ ಸ್ಟೋರಿ!
ಈ ಸಂದರ್ಶನದ ವಿಡಿಯೋಗೆ ಜನರು ದಂಪತಿಗಳನ್ನು ಅಭಿನಂದಿಸಿದ್ದಾರೆ. ಅದ್ಭುತವಾಗಿದೆ! ಶಿಕ್ಷಕ ಮತ್ತು ವಿದ್ಯಾರ್ಥಿಯ ವಿವಾಹ ಶ್ಲಾಘನೀಯ ಎಂದು ಬರೆದಿದ್ದರೆ,, ಶಿಕ್ಷಕ ಮತ್ತು ಶಿಷ್ಯರ ನಡುವಿನ ಸಂಬಂಧವು ತುಂಬಾ ಪವಿತ್ರವಾಗಿದೆ. ಈ ರೀತಿ ಆಗಿರುವುದು ಬೇಸರ ತಂದಿದೆ ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ, ಅಭಿನಂದನೆಗಳು, ಅಲ್ಲಾ ನಿಮ್ಮಿಬ್ಬರನ್ನೂ ಸಂತೋಷವಾಗಿಟ್ಟಿರಲಿ ಎಂದಿದ್ದಾರೆ.