ಪ್ರಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಇತ್ತೀಚೆಗಷ್ಟೇ 50 ಕೋಟಿ ಇನ್ಸ್ಟಾಗ್ರಾಮ್ ಫಾಲೋವರ್ಗಳನ್ನು ಹೊಂದಿದ ಜಗತ್ತಿನ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಹೌದು, 50 ಕೋಟಿ ಜನ ಇವರನ್ನು ಫಾಲೋ ಮಾಡುತ್ತಾರೆ ಅಂದರೆ ಸುಮ್ನೆಯೇ. ಇದೇ ರೀತಿ, ಜಗತ್ತಿನ ಇನ್ಸ್ಟಾಗ್ರಾಮ್ ಬಳಕೆದಾರರಲ್ಲಿ ಟಾಪ್ 10 ಫಾಲೋವರ್ಸ್ಗಳನ್ನು ಹೊಂದಿರುವವರ ವಿವರ ಇಲ್ಲಿದೆ ನೋಡಿ. ಅಂದ ಹಾಗೆ, ರೊನಾಲ್ಡೋ ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿದ ಮೊದಲ ವ್ಯಕ್ತಿ ಎನಿಸಿದರೂ, ಈ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ ದೊರಕಿದೆ. ಏಕೆಂದರೆ, ಕ್ರಿಶ್ಚಿಯಾನೋ ರೊನಾಲ್ಡೋ ಅವರಿಗಿಂತ ಇನ್ಸ್ಟಾಗ್ರಾಮ್ನ ಅಧಿಕೃತ ಖಾತೆಯನ್ನು ಹೆಚ್ಚು ಜನ ಫಾಲೋ ಮಾಡ್ತಾರೆ. ಆದರೆ, ಇದು ವೈಯಕ್ತಿಕ ಬಳಕೆದಾರರ ಸಾಲಿಗೆ ಸೇರುವುದಿಲ್ಲವಾದ್ದರಿಂದ ಹೆಚ್ಚು ಫಾಲೋವರ್ಗಳನ್ನು ಫುಟ್ಬಾಲ್ ಆಟಗಾರ ಹೊಂದಿದ್ದಾರೆ. ಜಗತ್ತಿನ ಟಾಪ್ 10 ಇನ್ಸಾಗ್ರಾಮ್ ಫಾಲೋವರ್ಸ್ಗಳ ವಿವರ ಹೀಗಿದೆ ನೋಡಿ..