ಕಾಶ್ಮೀರದ ಸೌಂದರ್ಯಕ್ಕೆ ಕಳಶವಿಟ್ಟ ರೈಲ್ವೆ ಬ್ರಿಡ್ಜ್: ಡ್ರೋಣ್ ಸೆರೆ ಹಿಡಿದ ಅದ್ಭುತ ಫೋಟೋಗಳು
ಜಗತ್ತಿನ ಅತೀ ಎತ್ತರ ರೈಲ್ವೆ ಬ್ರಿಡ್ಜ್‌ನ ನಯನ ಮನೋಹರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಾಶ್ಮೀರದ ಸೌಂದರ್ಯಕ್ಕೆ ಕಳಸವಿಟ್ಟ ಇಂಜಿನಿಯರಿಂಗ್ ಅದ್ಭುತ ಇದಾಗಿದ್ದು, ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಸೇತುವೆ ಒಂದು ಇಂಜಿನಿಯರಿಂಗ್ ಅಧ್ಬುತವಾಗಿದೆ. ಈ ವರ್ಷದ ಕೊನೆಯ ವೇಳೆ ಈ ಸೇತುವೆಯ ನಿರ್ಮಾಣ ಕಾರ್ಯ ಮುಗಿದು ರೈಲು ಓಡಾಡಕ್ಕೆ ಈ ಸೇತುವೆ ಸಿಗಲಿದೆ.
ಕಾಶ್ಮೀರದ ಸೌಂದರ್ಯಕ್ಕೆ ಕಳಸವಿಟ್ಟ ಇಂಜಿನಿಯರಿಂಗ್ ಅದ್ಭುತವಿದು. ಡ್ರೋಣ್ ಕ್ಯಾಮರಾದಲ್ಲಿ ಸೆರೆ ಆಯ್ತು ವಿಶ್ವದ ಅತೀ ಎತ್ತರದ ರೈಲ್ವೆ ಬಿಡ್ಜ್‌ನ ನಯನ ಮನೋಹರ ದೃಶ್ಯ
ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಸೇತುವೆ ಒಂದು ಇಂಜಿನಿಯರಿಂಗ್ ಅಧ್ಬುತ, ಈ ವರ್ಷದ ಕೊನೆಯ ವೇಳೆ ಈ ಸೇತುವೆಯ ನಿರ್ಮಾಣ ಕಾರ್ಯ ಮುಗಿದು ರೈಲು ಓಡಾಡಕ್ಕೆ ಸಿಗಲಿದೆ.
ಟ್ವಿಟ್ಟರ್‌ನಲ್ಲಿ ಈ ರೈಲ್ವೆ ಸೇತುವೆಯ ಅದ್ಭುತ ಫೋಟೋಗಳು ವೈರಲ್ ಆಗಿದೆ. ಡಿಆರ್‌ಡಿಒ ತಂತ್ರಜ್ಞಾನದ ಸಹಕಾರದೊಂದಿಗೆ ಭಾರತದ ರೈಲ್ವೆ ಇಲಾಖೆ ಅಫ್ಕೊನ್ಸ್ ಇನಫ್ರಾ ಸಹಯೋಗದೊಂದಿಗೆ ಈ ಸೇತುವೆಯನ್ನು ನಿರ್ಮಿಸುತ್ತಿದೆ.
ನದಿ ತಳದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಈ ರೈಲ್ವೆ ಸೇತುವೆ, ಪ್ರಯಾಣಿಕರಿಗೆ ಒಂದು ಅದ್ಭುತ ಅನುಭವ ನೀಡುವುದರ ಜೊತೆ ಇಂಜಿನಿಯರಿಂಗ್ ಪವಾಡ ಎನಿಸಿದೆ.
ಡ್ರೋನ್ ಕ್ಯಾಮರಾ ಸೆರೆ ಹಿಡಿದ ಈ ಸೇತುವೆಯ ಅದ್ಭುತ ದೃಶ್ಯ ಎಲ್ಲರ ಮನ ಸೆಳೆಯುತ್ತಿದ್ದು, ಮುಂದೆ ಇದು ಪ್ರವಾಸಿಗರ ತಾಣ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಮೋದಿ ಸರ್ಕಾರದ ಕನಸಿನ ಯೋಜನೆಯೂ ಹೌದು
ವಿಶ್ವದ ಅತೀ ಎತ್ತರದಲ್ಲಿರುವ ಚೆನಾಬ್ ನದಿಗೆ ನಿರ್ಮಿಸಿದ 359 ಅಡಿ ಎತ್ತರದ ಕಮಾನು ಸೇತುವೆಯೂ ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ 30 ಮೀಟರ್ ಎತ್ತರದಲ್ಲಿದೆ.
ಸೇತುವೆಯನ್ನು ನಿರ್ಮಿಸಲು ಬಳಸಲಾದ ಸಂಕೀರ್ಣ ತಂತ್ರಜ್ಞಾನ ಮತ್ತು ಶ್ರಮದಾಯಕ ನಿರ್ಮಾಣ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.