8 ತಬ್ಲೀಘಿ ಮೇಲೆ ಮರ್ಡರ್ ಕೇಸ್, ಅಲಿಯಾ ನೀಡಿದ್ರಾ iಫೋನ್ ಪೋಸ್? ಮೇ.2ರ ಟಾಪ್ 10 ಸುದ್ದಿ!
ದೆಹಲಿ ತಬ್ಲೀಘಿ ಜಮಾತ್‌ನಲ್ಲಿ ಪಾಲ್ಗೊಂಡ 8 ಮಂದಿ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ. ಕಾರ್ಮಿಕರನ್ನು ಸರ್ಕಾರ ಉಚಿತವಾಗಿ ಹಾಗೂ ಸುರಕ್ಷಿತವಾಗಿ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾರ್ಗಸೂಚಿ ಪ್ರಕಟವಾಗಿದೆ. ಅತ್ತ ರಿಷಿ ಕಪೂರ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ನಟಿ ಆಲಿಯಾ ಭಟ್ ಟ್ರೋಲ್ ಆಗಿದ್ದಾರೆ. ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರ ಮೊದಲ ವೇತನ ಹಾಗೂ ಈತನ ವೇತನ, ಗ್ಯಾಸ್ ಬೆಲೆ ಇಳಿಕೆ ಸೇರಿದಂತೆ ಮೇ.02ರ ಟಾಪ್ 10 ಸುದ್ದಿ ಇಲ್ಲಿವೆ.
ದೆಹಲಿ ಮರ್ಕಝ್‌ನಲ್ಲಿ ಪಾಲ್ಗೊಂಡ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್!...
ದೆಹಲಿ ಮರ್ಕಝ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಭಾರತದಲ್ಲಿ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಕೊರೋನಾ ಹರಡುವಿಕೆಯಲ್ಲಿ ತಬ್ಲೀಘಿಗಳ ಪಾಲು ಎಷ್ಟಿದೆ ಅನ್ನೋದು ಈಗಾಗಲೇ ಅಂಕಿ ಅಂಶಗಳಿಂದ ಬಯಲಾಗಿದೆ. ತಬ್ಲೀಘಿ ಜಮಾತ್ ತೆರಳಿದವರು ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದರೂ ಬಹತೇಕರು ತಲೆಮೆರೆಸಿಕೊಂಡು ಓಡಾಡುತ್ತಿದ್ದಾರೆ. ಹೀಗೆ ಪೊಲೀಸರ ಸೂಚನೆ ಪಾಲಿಸದೇ ಗೌಪ್ಯವಾಗಿ ಓಡಾಡುತ್ತಿದ್ದ 8 ತಬ್ಲೀಘಿಗಳ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ.
ಲಾಕ್‌ಡೌನ್ ನಡುವೆ ನೆರೆಮನೆ ಯುವಕನಿಂದ ಲೈಂಗಿಕ ಕಿರುಕುಳ!...
ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಲ್ಲದೇ, ಈ ಬಗ್ಗೆ ಪ್ರಶ್ನಿಸಿದ ಯುವತಿಯ ತಾಯಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೈಯಾಲಿಕಾವಲ್‌ನ ಈಜುಕೊಳ ಬಡಾವಣೆಯ ನಿವಾಸಿ ಅಖಿಲ್ (25) ಎಂಬ ಯುವಕ ಕೃತ್ಯ ಎಸಗಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಸರ್ಕಾರ ಉಚಿತವಾಗಿ ಕಾರ್ಮಿಕರನ್ನು ಊರಿಗೆ ಕಳಿಸಬೇಕು: ಸಿದ್ದರಾಮಯ್ಯ
ಕಾರ್ಮಿಕರು ಊರಿಗೆ ಹೋಗಬೇಕಿದೆ. ಅವರ ಬಳಿ ಬಸ್ ಚಾರ್ಜ್ ಕೊಡಲು ಹಣವೆಲ್ಲಿದೆ. ಅವರನ್ನೆಲ್ಲ ಸರ್ಕಾರವೇ ಉಚಿತವಾಗಿ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಬಿಟ್ಟು ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಧೋನಿಯಿಂದ ಕೊಹ್ಲಿ: ಮೊದಲ ಸಂಬಳವೆಷ್ಟು? ಈಗಿನ ಸಂಬಳವೆಷ್ಟು?
ಐಪಿಎಲ್ ಯಶಸ್ವಿ ನಾಯಕರಾದ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಯ ಆರಂಭಿಕ ಸಂಬಳ ಎಷ್ಟಿತ್ತು? ಈಗ ಎಷ್ಟಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ರಿಷಿ ಕಪೂರ್ ಸಂಸ್ಕಾರದಲ್ಲಿ ಆಲಿಯಾ ಭಟ್ ಟ್ರೋಲ್; Iphone ಅಂತ ಪೋಸ್ ಕೊಡ್ತಿದ್ದೀರಾ?
ಬಾಲಿವುಡ್ ನಟ ರಿಷಿ ಕಪೂರ್ ಅಂತಿಮ ಸಂಸ್ಕಾರದಲ್ಲಿ ಆಪ್ತರಿಗೆ ಆಲಿಯಾ ಭಟ್ ವಿಡಿಯೋ ಕಾಲ್. ಕೈಯಲ್ಲಿ ಮೊಬೈಲ್ ನೋಡಿ ಸುರಿದು ಬಂತು ನೆಟ್ಟಿಗರ ನೆಗೆಟಿವ್ ಕಾಮೆಂಟ್ಸ್.
ಸಬ್ಸಿಡಿ ರಹಿತ LPG ಗ್ಯಾಸ್ ದರ ದಾಖಲೆಯ ಇಳಿಕೆ!...
ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಹೈರಾಣಾಗಿರುವ ಜನರಿಗೆ ಒಂದು ಸಂತಸದ ಸುದ್ದಿ. ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್ (ಎಲ್‌ಪಿಜಿ) ದರವನ್ನು ದಾಖಲೆಯ 162.50 ರು.ನಷ್ಟುಶುಕ್ರವಾರ ಇಳಿಸಲಾಗಿದೆ.
ಫೇಸ್‌ಬುಕ್‌ನಲ್ಲಿ ಹುಚ್ಚಾಟ; ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ವಿರುದ್ಧ ಸೆಡಿಶನ್ ಕೇಸ್...
ಧರ್ಮಾಂದ ಹಿಂದುಗಳೇ ಗಮನವಿಟ್ಟು ಕೇಳಿ, ಭಾರತದ ಮುಸ್ಲೀಮರು ಅರಬ್ ಹಾಗೂ ಮುಸ್ಲೀಂ ರಾಷ್ಟ್ರಗಳಿಗೆ ದೂರು ನೀಡಿದರೆ ನಿಮ್ಮ ಸ್ಥಿತಿ ಊಹಿಸಲು ಅಸಾಧ್ಯ. ಹೀಗೆ ತನ್ನ ಪ್ರಖರ ಪದಗಳಿಂದ ಕೋಮು ಪ್ರಚೋದನೆ ನೀಡಿದ ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷನ ಝಫರುಲ್ ಇಸ್ಲಾಂ ವಿರುದ್ಧ ಪ್ರಕಣ ದಾಖಲಾಗಿದೆ. ಝಫರುಲ್ ಇಸ್ಲಾಂ ಹುಚ್ಚಾಟದ ವಿವರ ಇಲ್ಲಿದೆ.
'Dear Sathya'ಚಿತ್ರದಲ್ಲಿ ಮಿಂಚುತ್ತಿರುವ ರಂಗಭೂಮಿ ಕಲಾವಿದೆ ಅರ್ಚನಾ!
'ಕಿರಿಕ್ ಪಾರ್ಟಿ' ಕಾಮಿಡಿ ಶೋ ಹಾಗೂ ಕಲರ್ಸ್ ಕನ್ನಡ ಅನುಬಂಧ ರೆಡ್ ಕಾರ್ಪೆಟ್‌ನಲ್ಲಿ ನಿರೂಪಕಿಯಾಗಿ 'ಅರಣ್ಯ ಕಂಡ' ಚಿತ್ರದ ಮೂಲಕ ನಾಯಕಿಯಾಗಿ, ಕನ್ನಡ ಚಿತ್ರಂಗಕ್ಕೆ ಕಾಲಿಟ್ಟ ಮಾಡಿರುವ ಅರ್ಚನಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು
ಮೇ 4 ರಿಂದ ರಾಜ್ಯದಲ್ಲಿ ಬೇರೆ ಗೈಡ್‌ಲೈನ್ಸ್
ಲಾಕ್‌ಡೌನ್ 3.0 ಮೇ 17 ರವರೆಗೆ ಮುಂದುವರೆದಿದೆ. ರಾಜ್ಯವನ್ನು ರೆಡ್ ಝೋನ್, ಅರೆಂಜ್ ಝೋನ್ ಹಾಗೂ ಗ್ರೀನ್ ಝೋನ್‌ಗಳಾಗಗಿ ವಿಂಗಡಿಸಿ ಅದಕ್ಕೆ ತಕ್ಕಂತೆ ಒಂದಷ್ಟು ವಿನಾಯಿತಿಯನ್ನೂ ನೀಡಲಾಗಿದೆ. ಇಂದು ಎಲ್ಲಾ ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚೆ ನಡೆಸಿದ್ದಾರೆ. ಜೊತೆಗೆ ಇತರ ಸಚಿವರೊಂದಿಗೂ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಭಾಗಿಯಾದ ಕಂದಾಯ ಸಚಿವ ಆರ್ ಅಶೋಕ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಬಾಡಿ ಬಿಲ್ಡರ್ಸ್ ಫೇವರೇಟ್ ಆಯ್ತು ಕರಾಬು ಸಾಂಗ್; 15 ಮಿಲಿಯನ್ ವೀಕ್ಷಣೆ!
ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಮೂರು ವರ್ಷಕ್ಕೆ ಒಂದು ಚಿತ್ರದಲ್ಲಿ ನಟಿಸಿದ್ರೂ, ಫ್ಯಾನ್ಸ್ ನಿರೀಕ್ಷೆಗೆ ತಕ್ಕಂತೆ ಇರುತ್ತೆ. ಧ್ರುವಾ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಚಿತ್ರ ತೆರೆಗೆ ಬರೋದು ಲೇಟ್ ಆದ್ರೆ ಸಾಂಗ್ ಬೇಗ ರಿಲೀಸ್ ಆಗಿದೆ ಅನ್ನೋ ಖುಷಿಯಲ್ಲಿ ಸದಾ ಆ ಹಾಡನ್ನು ಪದೆ ಪದೇ ನೋಡುತ್ತಾ ಹೊಸ ದಾಖಲೆ ಸೃಷ್ಟಿಸುತ್ತಾರೆ.