ದೆಹಲಿ ಮರ್ಕಝ್‌ನಲ್ಲಿ ಪಾಲ್ಗೊಂಡ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್!
ದೆಹಲಿ ಮರ್ಕಝ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಭಾರತದಲ್ಲಿ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಕೊರೋನಾ ಹರಡುವಿಕೆಯಲ್ಲಿ ತಬ್ಲೀಘಿಗಳ ಪಾಲು ಎಷ್ಟಿದೆ ಅನ್ನೋದು ಈಗಾಗಲೇ ಅಂಕಿ ಅಂಶಗಳಿಂದ ಬಯಲಾಗಿದೆ. ತಬ್ಲೀಘಿ ಜಮಾತ್ ತೆರಳಿದವರು ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದರೂ ಬಹತೇಕರು ತಲೆಮೆರೆಸಿಕೊಂಡು ಓಡಾಡುತ್ತಿದ್ದಾರೆ. ಹೀಗೆ ಪೊಲೀಸರ ಸೂಚನೆ ಪಾಲಿಸದೇ ಗೌಪ್ಯವಾಗಿ ಓಡಾಡುತ್ತಿದ್ದ 8 ತಬ್ಲೀಘಿಗಳ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ.
ಉತ್ತರಖಂಡ(ಮೇ.02): ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಯಲು ಜನತಾ ಕರ್ಫ್ಯೂ ಬಳಿಕ ಲಾಕ್‌ಡೌನ್ ಕೂಡ ಹೇರಲಾಗಿತ್ತು. ಆದರೆ ಧಾರ್ಮಿಕ ಸಭೆ ಹೆಸರಲ್ಲಿ ದೆಹಲಿ ಮರ್ಕಝ್‌ನಲ್ಲಿ ತಬ್ಲೀಘಿಗಳು ಒಟ್ಟು ಸೇರಿದ್ದರು. ಬಾಂಗ್ಲಾದೇಶ, ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಂದ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಈ ಸಭೆಯಿಂದ ಇಡೀ ಭಾರತಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿತು. ಪ್ರತಿ ಜೆಲ್ಲೆಗಳಿಂದ ದೆಹಲಿ ತಬ್ಲೀಘಿ ಜಮಾತ್‌ಗೆ ತೆರಳಿದವರನ್ನು ಪತ್ತೆ ಹಚ್ಚಿ ತಾಪಸಣೆ ನಡೆಸುವುದು ರಾಜ್ಯ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿತು. ಹೀಗಾಗಿ ಉತ್ತರಖಂಡ ಸರ್ಕಾರ ಸ್ವಯಂ ಪ್ರೇರತರಾಗಿ ಬಂದು ತಪಾಸಣೆ ನಡೆಸುವಂತೆ ಕೋರಲಾಗಿತ್ತು. ಆದರೆ ಈ ಆದೇಶಕ್ಕೆ ಕ್ಯಾರೇ ಎನ್ನದ ತಬ್ಲೀಘಿ ಮೇಲೆ ಇದೀಗ ಮರ್ಡರ್ ಕೇಸ್ ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿ ಹುಚ್ಚಾಟ; ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ವಿರುದ್ಧ ಸೆಡಿಶನ್ ಕೇಸ್
ಉತ್ತರಖಂಡದಿಂದ ದೆಹಲಿ ತಬ್ಲೀಘಿ ಜಮಾತ್‌ನಲ್ಲಿ ಪಾಲ್ಗೊಂಡ ಬಹುತೇಕರ ಹೆಸರನ್ನು ಸರ್ಕಾರ ಪ್ರಕಟಿಸಿತ್ತು. ಇಷ್ಟೇ ಅಲ್ಲ ಗೌಪ್ಯವಾಗಿ ಓಡಾಡುತ್ತಿರುವ ಹಲವು ತಬ್ಲೀಘಿಗಳು ಹಾಗೂ ಈಗಾಗಲೆ ಹೆಸರು ಪ್ರಕಟಿಸಲಾದ ತಬ್ಲೀಘಿಗಳು ಸ್ವಯಂ ಪ್ರೇರತರಾಗಿ ಬಂದು ಕೊರೋನಾ ಪರೀಕ್ಷೆ ನಡೆಸಲು ಮನವಿ ಮಾಡಲಾಗಿತ್ತು. ಪೊಲೀಸರು ಪ್ರತಿ ಗ್ರಾಮ ಗ್ರಾಮಗಳಿಗೆ ತೆರಳಿ ಮನವಿ ಮಾಡಿದ್ದರು. ಯಾರೂ ಆದೇಶ ದಿಕ್ಕರಿಸುತ್ತಾರೆ ಅವರ ಮೇಲೆ ಮರ್ಡರ್ ಕೇಸ್ ದಾಖಲಿಸುವುದಾಗಿ ಉತ್ತರಖಂಡ ಪೊಲೀಸರು ಸೂಚಿಸಿದ್ದರು.
ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್ ವಿರುದ್ಧ ದೂರು
ಹೀಗೆ ಪೊಲೀಸರ ಸೂಚನೆ ದಿಕ್ಕರಿಸಿದ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್ ದಾಖಲಿಸಲಾಗಿದೆ. ಈ ಮೂಲಕ ಉತ್ತರಖಂಡದಲ್ಲಿ ಮರ್ಡರ್ ಕೇಸ್ ದಾಖಲಾದ ತಬ್ಲೀಘಿಗಳ ಸಂಖ್ಯೆ 16ಕ್ಕೇರಿಕೆಯಾಗಿದೆ. ಈಗಾಗಲೇ 35 ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಉತ್ತರಖಂಡದಲ್ಲಿ ಇದುವರೆಗೆ ಲಾಕ್‌ಡೌನ್ ಉಲ್ಲಂಘಿಸಿದ ಒಟ್ಟು 2,431 ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. 12081 ಮಂದಿಯನ್ನು ಆರೆಸ್ಟ್ ಮಾಡಲಾಗಿದೆ. 5,748 ವಾಹನಗಳಿಗೆ ಇ ಚಲನ್ ನೀಡಲಾಗಿದೆ. ಒಟ್ಟು 1.47 ಕೋಟಿ ರೂಪಾಯಿ ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಉತ್ತರಖಂಡ್ ಡೈರೆಕ್ಟರ್ ಜನರಲ್ ಪೊಲೀಸ್ ಅಶೋಕ್ ಕುಮಾರ್ ಹೇಳಿದ್ದಾರೆ.
ನಾನ್‌ವೆಜ್ ಆಹಾರ ಕೊಡಿ: ಕಾನ್ಪುರ ಆಸ್ಪತ್ರೆಯಲ್ಲಿ ತಬ್ಲೀಘಿ ದಾಂಧಲೆ!
ಇದುವರಗೆ ಉತ್ತರಖಂಡದಲ್ಲಿ 57 ಕೊರೋನಾ ಕೇಸ್ ಪತ್ತೆಯಾಗಿದ್ದು. ಇದರಲ್ಲಿ 36 ಮಂದಿ ಗುಣಮುಖರಾಗಿದ್ದಾರೆ.