ಸಬ್ಸಿಡಿ ರಹಿತ LPG ಗ್ಯಾಸ್ ದರ ದಾಖಲೆಯ ಇಳಿಕೆ!

ಸಬ್ಸಿಡಿರಹಿತ ಎಲ್‌ಪಿಜಿ ದರ ದಾಖಲೆಯ 162 ಇಳಿಕೆ| 3 ತಿಂಗಳಲ್ಲಿ 277 ಕಡಿತ| 600ಕ್ಕಿಂತ ಕೆಳಗಿಳಿದ ದರ

Cooking LPG gas gets cheaper by Rs 162

ನವದೆಹಲಿ(ಮೇ.02): ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಹೈರಾಣಾಗಿರುವ ಜನರಿಗೆ ಒಂದು ಸಂತಸದ ಸುದ್ದಿ. ಸಬ್ಸಿಡಿರಹಿತ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ದರವನ್ನು ದಾಖಲೆಯ 162.50 ರು.ನಷ್ಟುಶುಕ್ರವಾರ ಇಳಿಸಲಾಗಿದೆ.

ಇದರೊಂದಿಗೆ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್‌ ದರವು ದಿಲ್ಲಿಯಲ್ಲಿ 162.50 ರು.ನಷ್ಟುಇಳಿದು 581.50 ರು. ಆಗಲಿದೆ. ಬೆಂಗಳೂರಿನಲ್ಲಿ 159 ರು.ನಷ್ಟುಇಳಿದು 585 ರು. ಆಗಲಿದೆ. ಕಳೆದ ತಿಂಗಳು ಇದರ ಬೆಲೆ 744 ರು. ಇತ್ತು.

ಉಜ್ವಲ ಯೋಜನೆ: 3 ತಿಂಗಳು ಉಚಿತ LPG ಗ್ಯಾಸ್‌!

ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು 2 ದಶಕದ ಕನಿಷ್ಠಕ್ಕೆ (ಹಾಲಿ ದರ ಬ್ಯಾರಲ್‌ಗೆ 15.98 ಡಾಲರ್‌) ಇಳಿದ ಕಾರಣ ಈ ಕ್ರಮ ಜರುಗಿಸಲಾಗಿದೆ. ಸಬ್ಸಿಡಿರಹಿತ ಎಲ್‌ಪಿಜಿ ದರ ಇಳಿಕೆ ಆಗುತ್ತಿರುವುದು ಇದು ಸತತ 3ನೇ ತಿಂಗಳಾಗಿದೆ. 2019ರ ಜನವರಿಯಲ್ಲಿ 150.5 ರು.ಗೆ ಇಳಿಸಲಾಗಿತ್ತು. ಈ ದಾಖಲೆಯನ್ನು ಈಗಿನ ದರ ಇಳಿಕೆಯು ಅಳಿಸಿ ಹಾಕಿದೆ.

ಸಿಲಿಂಡರ್‌ ದರ ಏಪ್ರಿಲ್‌ನಲ್ಲಿ 61.50 ಹಾಗೂ ಮಾಚ್‌ರ್‍ನಲ್ಲಿ 53 ರು. ಇಳಿಕೆಯಾಗಿತ್ತು. ಹೀಗಾಗಿ ಮೂರು ತಿಂಗಳ ಅವಧಿಯಲ್ಲಿ ಬೆಲೆ ಒಟ್ಟಾರೆ 277 ರು. ಇಳಿದಂತಾಗಿದೆ.

Latest Videos
Follow Us:
Download App:
  • android
  • ios