ದೆಹಲಿ(ಮೇ.02): ಹಿಂದೂಗಳ ವಿರುದ್ಧ ಸದಾ ಕಿಡಿ ಕಾರುವ ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಂ ವಿರುದ್ಧ ದೆಹಲಿ ಪೊಲೀಸರು ಸೆಡಿಶನ್ ಕೇಸ್ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೋಮುವಾದ ಪ್ರಚೋದಿಸುವ ಹಾಗೂ ಶಾಂತಿ ಭಂಗ ತರುವ ಬರಹ ಪೋಸ್ಟ್ ಮಾಡಿದ ಕಾರಣ ಝಪರುಲ್ ಇಸ್ಲಾಂ ವಿರುದ್ಧದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಝಫರುಲ್ ಇಸ್ಲಾಂ ವಿರುದ್ಧದ ಭಾರತೀಯ ಪೆನಲ್ ಕೋಡ್ ಪ್ರಕಾರ 124A(ಸೆಡಿಶನ್) 153A ಕೇಸ್ ದಾಖಲಿಸಲಾಗಿದೆ.  

ಎರಡು ಜಿಲ್ಲೆಗಳಿಗೆ ಮುಳುವಾದ ತಬ್ಲಿಘಿಗಳು; ಮಾಡಿರೋ ಎಡವಟ್ಟಿದು!.

ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿರುವ ಝಫರುಲ್ ಇಸ್ಲಾಂ ಏಪ್ರಿಲ್ 28 ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿವಾದಾತ್ಮಕ  ಪೋಸ್ಟ್ ಹಾಕಿದ್ದರು. ಭಾರತೀಯ ಮುಸ್ಲೀಂರ ಬೆಂಬಲಕ್ಕೆ ನಿಂತ ಕುವೈತ್‌ಗೆ ಧನ್ಯವಾದ. ಭಾರತದಲ್ಲಿನ ಮುಸ್ಲೀಂಮರ  ಮೇಲಿನ ದೌರ್ಜನ್ಯದ ಕುರಿತು ಮುಸ್ಲೀಮರು ಹಾಗೂ ಅರಬ್ ರಾಷ್ಟ್ರ ಗಮನ ಹರಿಸುವುದಿಲ್ಲ ಎಂದು ಭಾರತದಲ್ಲಿನ ಬಹುಸಂಖ್ಯಾತ ಹಿಂದುತ್ವ ಧರ್ಮಾಂಧರು ತಿಳಿದುಕೊಂಡಿದ್ದಾರೆ. ಭಾರತದಿಂದ ಪರಾರಿಯಾಗಿರುವ ಝಾಕಿರ್ ನಾಯ್ಕ್‌ರಂತ ಹಲವರು ಮುಸ್ಲೀಂ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇವೆರೆಲ್ಲಾ ಅರಬ್ ಹಾಗೂ ಮುಸ್ಲೀಂ ಜಗತ್ತಿನಲ್ಲಿ ಮನೆಮಾತಾಗಿದ್ದಾರೆ. ಕೇಳಿ ಹಿಂದುತ್ವ ಧರ್ಮಾಂಧರೇ, ನಿಮ್ಮ ದೌರ್ಜನ್ಯ, ಹಲ್ಲೆ ಹಾಗೂ ಮುಸ್ಲೀಮರಿಗಿರುವ ಅಭದ್ರತೆ  ಕುರಿತು ಇಷ್ಟು ದಿನ ಭಾರತೀಯ ಮುಸ್ಲೀಂರು ಅರಬ್ ದೇಶಗಳಿಗೆ ದೂರು ನೀಡಿಲ್ಲ. ಆದರೆ ಯಾವತ್ತೂ ಭಾರತೀಯ ಮುಸ್ಲೀಮರು ಅರಬ್ ಹಾಗೂ ಮುಸ್ಲೀಂ ದೇಶಗಳಿಗೆ ದೂರು ನೀಡುತ್ತೆ, ಅಂದು ಭಾರತದ ಹಿಂದುಗಳಿಗೆ ಕಾದಿದೆ ಮಾರಿ ಹಬ್ಬ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು.

11 ಮಂದಿಗೆ ವೈರಸ್‌: ರಾಜ್ಯಕ್ಕೆ ಮತ್ತೆ ತಬ್ಲೀಘಿ ಸಂಕಷ್ಟ

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷನ ಈ ಪೋಸ್ಟ್‌ಗೆ ಭಾರಿ ಟೀಕೆಗಳು ಕೇಳಿ ಬಂದಿತ್ತು. ಮುಸ್ಲೀಂರ ಎಷ್ಟೇ ಪದವಿ ಪಡೆದರೂ ಅವರ ಹುಟ್ಟುಗುಣ ಬಿಡುವುದಿಲ್ಲ ಎಂಬಂತ ಹಲವು ವಿರೋಧಗಳು ವ್ಯಕ್ತವಾಯಿತು. ಝಫರುಲ್ ಇಸ್ಲಾಂ ಪೋಸ್ಟ್‌ನಿಂದ ಭಾರತದ ಐಕ್ಯತೆಗೆ ಹಾಗೂ ಗೌರವಕ್ಕೆ ಧಕ್ಕೆ ಯಾಗಿದೆ. ಇಷ್ಟೇ ಅಲ್ಲ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಘಯರೊಲ್ ಹಸನ್ ರಿಜ್ವಿ, ಝಫರುಲ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಭಾರತದಲ್ಲಿರುವ ಮುಸ್ಲೀಂರು ಸಂತೋಷವಾಗಿದ್ದಾರೆ. ಅವರಿಗೆ ಯಾವುದೇ ಅಭದ್ರತೆ ಕಾಡುತ್ತಿಲ್ಲ. ಇತರ ದೇಶದಲ್ಲಿರುವ ಮುಸ್ಲೀಮರಿಗೆ ಭಾರತದ ಮುಸ್ಲೀಂಮರಿಗಿರುವ ಸ್ವಾತಂತ್ರ್ಯದ ಅರಿವಿದೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸುಖಾಸುಮ್ಮನೆ ಇಲ್ಲದ ಸಮಸ್ಯೆಗಳನ್ನು ಎಳೆದು ತಂದು ವಿವಾದ ಸೃಷ್ಟಿಸಬೇಡಿ ಎಂದು ಘಯರೊಲ್ ಹಸನ್ ಹೇಳಿದ್ದಾರೆ.

ರಾಷ್ಟ್ಪೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು ಝಫರುಲ್ ಇಸ್ಲಾಂ ಹೇಳಿಕೆ ಖಂಡಿಸಿದಾಗ ಎಚ್ಚೆತ್ತು ಕೊಂಡ ಝಫರುಲ್ ನಾನು ಅಪ್ಪಟ ದೇಶಭಕ್ತ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.