ಬೆಂಗಳೂರು(ಮೇ.02): ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಲ್ಲದೇ, ಈ ಬಗ್ಗೆ ಪ್ರಶ್ನಿಸಿದ ಯುವತಿಯ ತಾಯಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ವೈಯಾಲಿಕಾವಲ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೈಯಾಲಿಕಾವಲ್‌ನ ಈಜುಕೊಳ ಬಡಾವಣೆಯ ನಿವಾಸಿ ಅಖಿಲ್‌ (25) ಎಂಬ ಯುವಕ ಕೃತ್ಯ ಎಸಗಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಹಾಲು ತರುವ ನೆಪದಲ್ಲಿ ಸೊಸೆಯನ್ನು ಹೊರ ಹಾಕಿದ ಅತ್ತೆ..!

ನಿಖಿಲ್‌ ಹಾಗೂ ಸಂತ್ರಸ್ತೆ ಅಕ್ಕ-ಪಕ್ಕದ ನಿವಾಸಿಗಳಾಗಿದ್ದಾರೆ. ಆರೋಪಿ ಕೆಲ ತಿಂಗಳಿಂದ ಯುವತಿಗೆ ಕೈ ಸನ್ನೆ ಮಾಡುತ್ತಾ ಅಶ್ಲೀಲವಾಗಿ ವರ್ತಿಸುತ್ತಿದ್ದ. ಯುವತಿ ಆರೋಪಿಯನ್ನು ಗಮನಿಸದೇ ಇದ್ದಾಗ ಆತ ಆಕೆಯ ಹೆಸರನ್ನು ಜೋರಾಗಿ ಕೂಗಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದ. ಏ.29ರಂದು ಯುವತಿ ಸಂಜೆ 5 ಗಂಟೆ ಸುಮಾರಿಗೆ ಮಹಡಿ ಮೇಲೆ ಬಟ್ಟೆ ಒಣಗಿಸಲು ಹೋದಾಗ ಆರೋಪಿ ಪ್ಯಾಂಟ್‌ ಬಿಚ್ಚಿ ಕೆಟ್ಟದಾಗಿ ವರ್ತಿಸಿದ್ದ. ಆರೋಪಿ ವರ್ತನೆ ಬಗ್ಗೆ ಯುವತಿ ತಾಯಿ ಬಳಿ ಹೇಳಿಕೊಂಡಿದ್ದಳು.

ಈ ಬಗ್ಗೆ ಯುವತಿಯ ತಾಯಿ ಆರೋಪಿ ಯುವಕನನ್ನು ಏಕೆ ಈ ರೀತಿ ಮಾಡುತ್ತೀಯಾ ಎಂದು ಪ್ರಶ್ನೆ ಮಾಡಿದಾಗ ತಲೆಗೆ ಡಿಚ್ಚಿ ಹೊಡೆದು, ಕೊಲೆ ಮಾಡಿ ತುಮಕೂರಿಗೆ ಪಾರ್ಸಲ್‌ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ. ಅಲ್ಲದೆ, ಮನೆಗೆ ಬರುವ ಅತಿಥಿಗಳ ಜತೆ ಕೂಡ ಇದೇ ರೀತಿ ಕೆಟ್ಟದಾಗಿ ಸನ್ನೆ ಮಾಡುತ್ತಿದ್ದ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅನೈತಿಕ ಸಂಬಂಧ, ಮಾರಕಾಸ್ತ್ರದಿಂದ ಕೊಚ್ಚಿ ಪತ್ನಿಯ ಕೊಲೆ: ಪತಿಯೂ ಆತ್ಮಹತ್ಯೆ

ದೂರಿನ ಅನ್ವಯ ಆರೋಪಿ ವಿರುದ್ಧ ಲೈಂಗಿಕ ಕಿರುಕುಳ, ಜೀವ ಬೆದರಿಕೆ ಪ್ರಕರಣದಡಿ ದೂರು ದಾಖಲಿಸಿಕೊಂಡು ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.