Asianet Suvarna News

ರಿಷಿ ಕಪೂರ್‌ ಸಂಸ್ಕಾರದಲ್ಲಿ ಆಲಿಯಾ ಭಟ್ ಟ್ರೋಲ್; Iphone ಅಂತ ಪೋಸ್‌ ಕೊಡ್ತಿದ್ದೀರಾ?

ಬಾಲಿವುಡ್ ನಟ ರಿಷಿ ಕಪೂರ್‌ ಅಂತಿಮ ಸಂಸ್ಕಾರದಲ್ಲಿ ಆಪ್ತರಿಗೆ ಆಲಿಯಾ ಭಟ್ ವಿಡಿಯೋ ಕಾಲ್‌. ಕೈಯಲ್ಲಿ ಮೊಬೈಲ್‌ ನೋಡಿ ಸುರಿದು ಬಂತು ನೆಟ್ಟಿಗರ ನೆಗೆಟಿವ್ ಕಾಮೆಂಟ್ಸ್, ಆದರೆ...

Bollywood Alia bhatt trolled for holding up her phone in Rishi kapoor cremation
Author
Bangalore, First Published May 2, 2020, 11:46 AM IST
  • Facebook
  • Twitter
  • Whatsapp

ಬಾಲಿವುಡ್‌ ದಿಗ್ಗಜ ನಟರಾಗಿದ್ದ ಇರ್ಫಾನ್‌ ಖಾನ್‌ ಹಾಗೂ ರಿಷಿ ಕಪೂರ್‌ ಇನ್ನು ನೆನಪು ಮಾತ್ರ. ಅವರನ್ನು ಇನ್ನು ಮುಂದೆ ಅಭಿನಯ ಹಾಗೂ ನಿರ್ದೇಶನ ನೋಡಲು ಆಗುವುದಿಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಅಭಿಮಾನಿಗಳಿಗೆ ಕಷ್ಟ. ಕೊರೋನಾ ವೈರಸ್‌ ಲಾಕ್‌ಡೌನ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದ ಕಾರಣ ಆಪ್ತರು ಮಾತ್ರ  ಈ ಅದ್ಭುತ ಬಾಲಿವುಡ್ ನಟರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು.

ಕೊನೆಗೂ ಈಡೇರಲೇ ಇಲ್ಲ ರಿಷಿ ಕಪೂರ್ ಕಡೇ ಆಸೆ!

ರಿಷಿ ಕಪೂರ್ ಆಪ್ತರು ಹಾಗೂ ಚಿತ್ರರಂಗದ ಅನೇಕರು ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಳಲು ಸಾಧ್ಯವಾಗದ ಕಾರಣ ಅನೇಕರು ವಿಡಿಯೋ ಕಾಲ್ ಮೂಲಕ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ನಟಿ ಆಲಿಯಾ ಭಟ್‌ ಕೈಯಲ್ಲಿ ಪೋನ್‌ ಹಿಡಿದು ನಿಂತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗಿದೆ. ಯಾರಾದ್ರೂ ಪಾರ್ಥಿವ ಶರೀರದ ಮುಂದೆ ಈ ರೀತಿ ವರ್ತಿಸುತ್ತಾರಾ? ಈ ಸಂದರ್ಭದಲ್ಲಿ ಕೈಯಲ್ಲೇಕೆ ಆಲಿಯಾಗೆ ಫೋನ್ ಎಂದು ಸಹಜವಾಗಿಯೇ ಎದ್ದೇಳುವ ಪ್ರಶ್ನೆಯಾಗಿತ್ತು? ಆದರೆ,

ಆಲಿಯಾ ಕೈಯಲ್ಲಿ ಫೋನ್‌ ಇದ್ದಿದ್ದು ಏಕೆ?

ರಿಷಿ ಕಪೂರ್‌ಗೆ ಇಬ್ಬರು ಮುದ್ದಾದ ಮಕ್ಕಳು. ಬಾಲಿವುಡ್‌ ಚಿತ್ರರಂಗದಲ್ಲಿ ಮಿಂಚುತ್ತಿರುವ ಪುತ್ರ ರಣ್ಬೀರ್‌ ಕಪೂರ್ ಹಾಗೂ ಫ್ಯಾಷನ್ ಡಿಸೈನಿಂಗ್ ಹಾಗೂ ಗೃಹ ವಿನ್ಯಾಸದಲ್ಲಿ ತೊಡಗಿಸಿಕೊಂಡಿರುವ ಪುತ್ರಿ ರಿಧಿಮಾ ಕಪೂರ್. ದೆಹಲಿಯಲ್ಲಿ ನೆಲೆಸಿರುವ ರಿಧಿಮಾ ಲಾಕ್‌ಡೌನ್‌ನಿಂದ ತಂದೆಯ ಅಂತಿಮ ದರ್ಶನ ಪಡೆಯಲು ಮುಂಬೈಗೆ ಬರಲು ಪಾಸ್ ಸಿಕ್ಕಿತ್ತು. ಆದರೆ ವಿಮಾನಯಾನ ಇಲ್ಲದ ಕಾರಿನಲ್ಲಿ ಸಮಯಕ್ಕೆ ರಾಜಧಾನಿ ದೆಹಲಿಯಿಂದ ವಾಣಿಜ್ಯ ನಗರಿ ಮುಂಬೈ ತಲುಪಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಆಲಿಯಾ ಭಟ್‌ ವಿಡಿಯೋ ಕಾಲ್‌ ಮಾಡಿ, ರಿಷಿ ಕಪೂರ್ ಅವರ ಅಂತಿಮ ವಿಧಿ ವಿಧಾನಗಳನ್ನು ನೋಡುವಂತೆ ಮಗಳು ರಿಧಿಮಾಗೆ ಸಹಕರಿಸಿದರು.

ಹರಿದಾಡುತ್ತಿರುವ ಫೋಟೋ ಎಲ್ಲರ ಮನಕಲುಕುವಂತಿತ್ತು.  ರಿಷಿ ಪತ್ನಿ ನೀತಾ ಅಳುತ್ತಾ ನಿಂತಿದ್ದರೆ, ಆಲಿಯಾ ಅಳುತ್ತಲೇ ವಿಡಿಯೋ ಮಾಡಿಕೊಂಡು ವಿದಾಯ ಹೇಳುತ್ತಿದ್ದರು. ಮತ್ತೊಂದು ಫೋಟೋದಲ್ಲಿ ರಣ್ಬೀರ್‌ ತಂದೆಯನ್ನು ನೋಡಿಕೊಂಡು ನಿಂತಿದ್ದ ಫೋಟೋ ಎಂಥವರಲ್ಲೂ ಕಣ್ಣೀರು ತರಿಸುವಂತಿತ್ತು. 

ಗರ್ಭಿಣಿ ಪತ್ನಿನೇ ಡಿಪ್ರೆಶನ್‌ಗೆ ಕಾರಣ; ರಿಷಿ ಕಪೂರ್‌ ನಿಜಕ್ಕೂ ಹೀಗ್ ಹೇಳಿದ್ರಾ?

ಆಲಿಯಾ ಭಟ್ ಟ್ರೋಲ್:

ಆಲಿಯಾ ಭಟ್‌ ಏನೇ ಮಾಡಿದರೂ, ಏನೇ ಹೇಳಿದರೂ ಟ್ರೋಲ್‌ ಆಗುವುದು ಖಂಡಿತಾ. ಕೊನೆ ಕ್ಷಣದಲ್ಲಿ ರಿಷಿ ಪುತ್ರಿ ರಿಧಿಮಾಳಿಗೆ ತಂದೆಯ ಅಂತಿಮ ದರ್ಶನ ಮಾಡಿಸಿದ ಆಲಿಯಾಗೆ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. 'ನೀವು ಐ ಫೋಸ್‌ 11 ಬಳಸುತ್ತಿದ್ದೀರಾ ಎಂದು ನಮಗೆ ಗೊತ್ತಿದೆ' , ನೀವು ಆ ಕುಟುಂಬಕ್ಕೆ ಕಾಲಿಟ್ಟ ಗಳಿಗೇನೇ ಸರಿ ಇಲ್ಲ,' ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ರಣ್ಬೀರ್‌ ಕಪೂರ್‌ನನ್ನು ಪ್ರೀತಿಸಲು ಶುರು ಮಾಡಿದಾಗಿನಿಂದಲೂ ಆಲಿಯಾ ಕಪೂರ್‌ ಫ್ಯಾಮಿಲಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾಮಾನ್ಯವಾಗಿ ಫೋಟೋಗಳಲ್ಲಿ ಆಲಿಯಾ ಸದಾ ರಿಷಿ ಕಪೂರ್ ಪಕ್ಕದಲ್ಲಿಯೇ ನಿಲ್ಲುತ್ತಿದ್ದರು. ಸಾಕಷ್ಟು ಪಾರ್ಟಿ ಹಾಗೂ ಅವಾರ್ಡ್‌ ಕಾರ್ಯಕ್ರಮಗಳಲ್ಲಿಯೂ ಈ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.  

ಆಸ್ಪತ್ರೆಯಲ್ಲಿದ್ದ ಬಾಲಿವುಡ್ ನಟ ರಿಷಿ ಕಪೂರ್ ವಿಡಿಯೋ ವೈರಲ್!

2020 ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ತೀರ್ಮಾನಿಸಿದ ರಣ್ಬೀರ್ ಮತ್ತಯ ಅಲಿಯಾ ಭಟ್‌ ಕೊರೋನಾ ವೈರಲ್‌ ಲಾಕ್‌ಡೌನ್‌ನಿಂದಾಗಿ ದಿನಾಂಕವನ್ನು ಮುಂದೂಡಿದ್ದರು ಎನ್ನಲಾಗುತ್ತಿತ್ತು. ಇದೀಗ ರಿಷಿ ಸಾವಿನಿಂದ ಈ ಮಂಗಲ ಕಾರ್ಯ ಮತ್ತಷ್ಟು ಮುಂದೆ ಹೋಗುವ ಸಾಧ್ಯತೆ ಇದೆ. ಮಗನ ಮದುವೆಯನ್ನು ಕಣ್ತುಂಬಿಕೊಳ್ಳಬೇಕೆಂದು ಬಾಲಿವುಡ್ ಎವರ್‌‌ಗ್ರೀನ್ ಹಾರ್ಟ್ ಥ್ರಾಬ್ ಬಯಸಿದ್ದರು. ಆದರದು ಈಡೇರುವ ಮುನ್ನವೇ ಲುಕೇಮಿಯಾದಿಂದ ಬಳಲುತ್ತಿದ್ದ ರಿಷಿ ಕೊನೆಯುಸಿರೆಳೆದಿದ್ದಾರೆ. ಪುತ್ರನ ಮದುವೆ ನೋಡಲು ರಿಷಿ ಇಲ್ಲವಾದರೂ ಬಿ-ಟೌನ್‌ ಹಿರಿಯರ ಆಶೀರ್ವಾದವಿರುತ್ತದೆ.

Follow Us:
Download App:
  • android
  • ios