ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ದಿನಕ್ಕೆ 100 ರೂ. ಪ್ರೋತ್ಸಾಹಧನ ಆಫರ್ ಘೋಷಿಸಲಾಗಿದೆ. ಸೌರವ್ ಗಂಗೂಲಿ ಚಿಕಿತ್ಸೆ ನೆರವಾಗಲು ದೇವಿಶೆಟ್ಟಿಗೆ ಆಹ್ವಾನ ನೀಡಲಾಗಿದೆ. ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ದಿನಾಂಕ ಫಿಕ್ಸ್ ಮಾಡಿದೆ. ಸಂಕ್ರಾಂತಿ ನಂತರ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಲಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಬಾಸ್ ಮೇಲಿನ ಸಿಟ್ಟಿಗೆ 50 ಕಾರು ಪುಡಿ ಮಾಡಿದ ನೌಕರ, ಸಿಲಿಂಡರ್‌ಗೆ ಡೆಲಿವರಿ ಚಾರ್ಜ್ ಇಲ್ಲ ಸೇರಿದಂತೆ ಜನವರಿ 4ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ದಿನಕ್ಕೆ 100 ರೂ. ಪ್ರೋತ್ಸಾಹಧನ...
ಕೊರೋನಾ ಕಾಲದಲ್ಲಿ ಸರ್ಕಾರಗಳು ಹರಸಾಹಸ ಮಾಡಿ ಶಾಲೆಗಳನ್ನು ರಿ ಓಪನ್ ಮಾಡಿವೆ. ಅಸ್ಸಾಂ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಹೆಣ್ಣು ಮಕ್ಕಳು ಶಾಲೆ ತಪ್ಪಿಸದಿರಲು ನಿರ್ಧಾರವೊಂದನ್ನು ಮಾಡಿದೆ.
ಆಂಧ್ರ ದೇಗುಲ ಧ್ವಂಸ: ದೇವಾಲಯ ಟ್ರಸ್ಟಿ, ಮಾಜಿ ಕೇಂದ್ರ ಸಚಿವ ರಾಜು ವಜಾ!...
ಆಂಧ್ರಪ್ರದೇಶದ ರಾಮತೀರ್ಥದ ಶ್ರೀರಾಮ ವಿಗ್ರಹದ ಶಿರಚ್ಛೇದ ಘಟನೆ ಬಗ್ಗೆ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಮ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳ ಟ್ರಸ್ಟ್ ಅಧ್ಯಕ್ಷರಾಗಿದ್ದ ತೆಲುಗುದೇಶಂ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಅಶೋಕ್ ಗಜಪತಿರಾಜು ಅವರನ್ನು ರಾಜ್ಯ ಸರ್ಕಾರ ವಜಾ ಮಾಡಿದೆ.
ಗಂಗೂಲಿಗೆ ಚಿಕಿತ್ಸೆ: ಕರ್ನಾಟಕದ ಖ್ಯಾತ ವೈದ್ಯ ದೇವಿಶೆಟ್ಟಿಗೆ ಬುಲಾವ್...
ಸೌರವ್ ಗಂಗೂಲಿ ಚಿಕಿತ್ಸೆ ನೆರವಾಗಲು ಕರ್ನಾಟಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ದೇವಿಪ್ರಸಾದ್ ಶೆಟ್ಟಿಗೆ ಬುಲಾವ್ ಬಂದಿದೆ. ಭಾರತ ಕಂಡ ಶ್ರೇಷ್ಠ ನಾಯಕನ ಚಿಕಿತ್ಸೆಗೆ ಇದೀಗ ಕನ್ನಡದ ಖ್ಯಾತ ಸರ್ಜನ್ ಮುಂದಾಗಿದ್ದಾರೆ.
ಅಗಸ್ತ್ಯ ರಾಥೋಡ್ ಜೊತೆ ನಟಿ ಹರಿಪ್ರಿಯಾ ನ್ಯೂ ಇಯರ್ ಪಾರ್ಟಿ; ಇವ್ರು ಏನಾಗಬೇಕು ನಿಮ್ಗೆ?...
ಫ್ಯಾಮಿಲಿ ಪಾರ್ಟಿ ಮೂಲಕ ಹೊಸ ವರ್ಷ ಬರ ಮಾಡಿಕೊಂಡ ನಟಿ ಹರಿಪ್ರಿಯಾ. ಆದರೆ ಅಭಿನವ್ ವಿಶ್ವನಾಥನ್ ಪರಿಚಯ ಹೇಗೆ ಎಂದು ಪ್ರಶ್ನಿಸಿದ ನೆಟ್ಟಿಗರು...
'ಸಿಲಿಂಡರ್ ಡೆಲಿವರಿ ಬಾಯ್‌ಗೆ ‘ಡೆಲಿವರಿ ಚಾರ್ಜ್’ ನೀಡಬೇಕಿಲ್ಲ'...
ಮನೆಗೆ ಗ್ಯಾಸ್ ಸಿಲಿಂಡರ್ ಕೊಡುವ ಡೆಲಿವರಿ ಬಾಯ್‌ಗಳು 30, 40, 50 ರು.ಗಳನ್ನು ‘ಡೆಲಿವರಿ ಚಾಜ್‌ರ್’ ಎಂದು ಹೇಳಿ ಪಡೆಯುವುದು ಮಾಮೂಲು. ಆದರೆ, ‘ಗ್ರಾಹಕರು ಡೆಲಿವರಿ ಬಾಯ್‌ಗಳಿಗೆ ಈ ಹಣ ಕೊಡುವ ಅವಶ್ಯಕತೆ ಇಲ್ಲ’ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ (ಎಚ್‌ಪಿಸಿಎಲ್) ಕಂಪನಿ ಹೇಳಿದೆ.
ಹೊಸ ವರ್ಷದ ಸಂಭ್ರಮದಲ್ಲಿದ್ದ ನೌಕರನಿಗೆ ಶಾಕ್; ಮರ್ಸಿಡೀಸ್ ಕಂಪನಿಯ 50 ಕಾರು ಪುಡಿ ಪುಡಿ!...
2021ರ ಹೊಸ ವರ್ಷ ಆಚರಿಸಲು ಮರ್ಸಿಡೀಸ್-ಡೈಮ್ಲೆರ್ ಕಂಪನಿ ನೌಕರರು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ನೌಕರನೋರ್ವನನ್ನು ಚೇಂಬರ್‌ಗೆ ಕರೆದ ಕಂಪನಿ ಬಾಸ್, ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಸತತ 45 ನಿಮಿಷ ಬಾಸ್ ಬೈಗುಳ ಕೇಳಿದ ನೌಕರನ ಹೊಸ ವರ್ಷದ ಸಂಭ್ರಮವೆಲ್ಲಾ ಕರಗಿ ಹೋಗಿದೆ. ಪರಿಣಾಮ ಕಂಪನಿಯ 50 ಹೆಚ್ಚು ಕಾರುಗಳನ್ನು ಪುಡಿ ಪುಡಿ ಮಾಡಿದ್ದಾನೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಸಂಕ್ರಾಂತಿ ನಂತರ ದೊಡ್ಡ ಮಟ್ಟದಲ್ಲಿ ಬದಲಾವಣೆ: ಹೊಸ ಬಾಂಬ್ ಸಿಡಿಸಿದ ಎಚ್‌ಡಿಕೆ...
ಬಿಜೆಪಿ ಜೊತೆ ಹೊಂದಾಣಿಕೆ ಹಾಗೂ ಕಾಂಗ್ರೆಸ್ ಶಾಲಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಕೋವಿಶೀಲ್ಡ್ ರಫ್ತಿಗೆ ನಿರ್ಭಂಧ: ಲಸಿಕೆ ಆತ್ಮನಿರ್ಭರ ಭಾರತಕ್ಕೆ ಸಿಕ್ಕ ಫಲ!...
ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮಾತ್ರವಲ್ಲ.. ಜಾಗತಿಕ ಸ್ವೀಕಾರವನ್ನೂ ಖಚಿತ ಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಟಿ ರಾಗಿಣಿ ಬೇಲ್ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ!...
ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿರುವ ರಾಗಿಣಿ ದ್ವಿವೇದಿ ಅದೆಷಞ್ಟೇ ಪ್ರಯತ್ನಪಟ್ಟರೂ ಹೊರಬಾರಲಾಗದೆ ಹೊಸ ವರ್ಷ ಸೇರಿ ಎಲ್ಲಾ ಹಬ್ಬಗಳನ್ನು ಜೈಲಿನಲ್ಲೇ ಆಚರಿಸಬೇಕಾಯ್ತು. ಆದರೀಗ ಕೊನೆಗೂ ನಟಿ ರಾಗಿಣಿಯ ಬೇಲ್ ಅರ್ಜಿ ವಿವಚಾರಣೆಗೆ ಸುಪ್ರೀಂ ಕೋರ್ಟ್ ದಿನಾಂಕ ನಿಗಧಿಪಡಿಸಿದೆ.
ಹಿ.ಪ್ರದೇಶದಲ್ಲಿ 1700ಕ್ಕೂ ಅಧಿಕ ವಲಸೆ ಪಕ್ಷಿಗಳ ನಿಗೂಢ ಸಾವು: ಭಾರೀ ಆತಂಕ...
ಕಳೆದ ಒಂದು ವಾರದಲ್ಲಿ ಸುಮಾರು 1700ಕ್ಕೂ ಅಧಿಕ ವಲಸೆ ಪಕ್ಷಿಗಳು ನಿಗೂಢ ರೀತಿಯಲ್ಲಿ ಸಾವು| ಹಿಮಾಚಲ ಪ್ರದೇಶದ ಪಾಂಗ್ ಡ್ಯಾಮ್‌ನಲ್ಲಿ ಘಟನೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 4, 2021, 5:05 PM IST