ನಟಿ ರಾಗಿಣಿ ಬೇಲ್ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ!
ನಟಿ ರಾಗಿಣಿ ಬೇಲ್ ಅರ್ಜಿ ವಿಚಾರಣೆ ಗೆ ದಿನಾಂಕ ನಿಗದಿ| ದಿನಾಂಕ ನಿಗದಿ ಪಡಿಸಿದ ಸುಪ್ರೀಂ ಕೋರ್ಟ್| ಜನವರಿ 8 ರಂದು ನಡೆಯಲಿರುವ ವಿಚಾರಣೆ

ಬೆಂಗಳೂರು(ಜ.04): ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿರುವ ರಾಗಿಣಿ ದ್ವಿವೇದಿ ಅದೆಷಞ್ಟೇ ಪ್ರಯತ್ನಪಟ್ಟರೂ ಹೊರಬಾರಲಾಗದೆ ಹೊಸ ವರ್ಷ ಸೇರಿ ಎಲ್ಲಾ ಹಬ್ಬಗಳನ್ನು ಜೈಲಿನಲ್ಲೇ ಆಚರಿಸಬೇಕಾಯ್ತು. ಆದರೀಗ ಕೊನೆಗೂ ನಟಿ ರಾಗಿಣಿಯ ಬೇಲ್ ಅರ್ಜಿ ವಿವಚಾರಣೆಗೆ ಸುಪ್ರೀಂ ಕೋರ್ಟ್ ದಿನಾಂಕ ನಿಗಧಿಪಡಿಸಿದೆ.
"
ಜೈಲಲ್ಲಿರುವ ಮಗಳಿಗಾಗಿ ರಾಗಿಣಿ ತಂದೆ ತಾಯಿ ಅಳಲು : ಬೇಲ್‌ಗಾಗಿ ಸರ್ಕಸ್
ಹೌದು ಜನವರಿ 8ರಂದು ನಟಿ ರಾಗಿಣಿಗೆ ಜಾಮೀನು ಅರ್ಜಿ ವಿಚಾರಣರೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. ಇನ್ನು ಈ ವಿಚಾರಣೆ ವರ್ಚುವಲ್ ಆಗಿ ನಡೆಯಲಿದೆ ಎಂಬುವುದು ವಿಶೇಷ. ಕಳೆದ ಬಾರಿ ಸುಪ್ರೀಂ ಕೋರ್ಟ್ ಸಿಸಿಬಿ ಪೊಲೀಸರಿಗೆ ನೋಟೀಸ್ ನೀಡಿದ್ದ ರು.
ಇನ್ನು ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಾಕೊಂಡ ಇನ್ನಿತರ ಆರೋಪಿಗಳಾದ ಶಿವಪ್ರಕಾಶ್, ಈರಪ್ಪ ಅವರ ಜಾಮೀನು ಅರ್ಜಿ ವಿಚಾರಣೆಯೂ ಜನವರಿ 8ರಂದೇ ನಡೆಯಲಿದೆ. ನ್ಯಾ.ಎಲ್.ನಾಗೇಶ್ವರ ರಾವ್ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ.