ಶಿಮ್ಲಾ(ಜ.04): ಕಳೆದ ಒಂದು ವಾರದಲ್ಲಿ ಸುಮಾರು 1700ಕ್ಕೂ ಅಧಿಕ ವಲಸೆ ಪಕ್ಷಿಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಪಾಂಗ್‌ ಡ್ಯಾಮ್‌ನಲ್ಲಿ ನಡೆದಿದೆ.

ಮೃತ ಪಕ್ಷಿಗಳ ಪೈಕಿ ಅಳಿವಿನಂಚಿನಲ್ಲಿರುವ ಹೆಬ್ಬಾತುಕೋಳಿ, ಕಪ್ಪು ತಲೆಯ ಗಾವಿಲ, ರಿವರ್‌ ಟರ್ನ್‌, ಕಾಮನ್‌ ಟೀಲ್‌ ಮತ್ತಿತರ ಪಕ್ಷಿಗಳು ಸೇರಿವೆ. ಹಕ್ಕಿಗಳ ಸರಣಿ ಸಾವಿಗೆ ಕಾರಣ ಪತ್ತೆ ಹಚ್ಚಲು ಅವುಗಳ ಮೃತ ದೇಹವನ್ನು ಬರೇಲಿಯಲ್ಲಿರುವ ಭಾರತೀಯ ಪ್ರಾಣಿ ಸಂಶೋಧನಾ ಸಂಸ್ಥೆ ಮತ್ತು ಜಲಂಧರ್‌ನಲ್ಲಿರುವ ಪ್ರಾದೇಶಿಕ ರೋಗ ನಿಯಂತ್ರಣ ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದೆ.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ವಿಷಸೇವಿಸಿ ಪಕ್ಷಿಗಳು ಮೃತಪಟ್ಟಿಲ್ಲ ಎಂದು ತಿಳಿದುಬಂದಿದೆ.

ಗ್‌ ಡ್ಯಾಮ್‌ ಸುಮಾರು 18,000 ಹೆಕ್ಟೇರ್‌ ವಿಸ್ತಾರವಾಗಿದ್ದು, ಡಿಸೆಂಬರ್‌ ತಿಂಗಳಿನಲ್ಲಿ ಸುಮಾರು 57,000 ವಲಸೆ ಪಕ್ಷಿಗಳು ಧಾವಿಸಿದ್ದವು. ಪ್ರತಿ ಚಳಿಗಾಲದ ಸಮಯದಲ್ಲಿ ಸುಮಾರು 1.5 ಲಕ್ಷ ವಲಸೆ ಪಕ್ಷಿಗಳು ಇಲ್ಲಿಗೆ ಧಾವಿಸುತ್ತವೆ.