ಈ ಸಿಂಪಲ್ ಟಿಪ್ಸ್ ಬಳಸಿದ್ರೆ ಮಾತ್ರ ಕರಿಬೇವಿನ ಗಿಡ ಪೊದೆ ಥರ ಬೆಳೆಯೋದು!
kitchen Mar 01 2026
Author: Padmashree Bhat Image Credits:instagram
Kannada
ಕುಂಡದ ಆಯ್ಕೆ
ಕರಿಬೇವು ದೊಡ್ಡ ಗಿಡ ಆಗುತ್ತದೆ. ಕನಿಷ್ಠ 12 ರಿಂದ 15 ಇಂಚು ಆಳ ಮತ್ತು ಅಗಲವಿರುವ ಮಣ್ಣಿನ ಅಥವಾ ಪ್ಲಾಸ್ಟಿಕ್ ಕುಂಡ ಆಯ್ಕೆ ಮಾಡಿ. ಆಮೇಲೆ ಪಾಟ್ ಕೆಳಗಡೆ ಒಂದು ತೂತು ಇರಬೇಕು, ಆಗ ಸರಿಯಾಗಿ ನೀರು ಹೋಗುವುದು.
Image credits: instagram
Kannada
ಮಣ್ಣು
ಸಾಮಾನ್ಯ ಕೆಂಪು ಮಣ್ಣು ಹಾಗೂ ಸಾವಯವ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ಹಾಕಿ. ಮರಳು ಅಥವಾ ತೆಂಗಿನ ನಾರು 20% ಹಾಕಿದರೆ, ಇದು ಕುಂಡದಿಂದ ನೀರು ನಿಲ್ಲದಂತೆ ತಡೆಯುತ್ತದೆ.
Image credits: instagram
Kannada
ಗಿಡ ಅಥವಾ ಬೀಜ ನಾಟಿ
ನರ್ಸರಿಯಿಂದ ಅಥವಾ ಒಳ್ಳೆಯ ಗಿಡ ತಂದು ನೆಡುವುದು ಸುಲಭ. ಬೀಜದಿಂದ ಕರಿಬೇವು ತರೋದಾದರೆ ಹಣ್ಣಾದ (ಕಪ್ಪು ಬಣ್ಣದ) ಕರಿಬೇವು ಹಣ್ಣಿನ ಬೀಜವನ್ನು ಮಾತ್ರ ಬಳಸಿ. ಒಣಗಿದ ಬೀಜಗಳು ಗಿಡ ಆಗೋದಿಲ್ಲ.
Image credits: instagram
Kannada
ಬಿಸಿಲು
ಕರಿಬೇವಿಗೆ ದಿನಕ್ಕೆ ಕನಿಷ್ಠ 6 ರಿಂದ 7 ಗಂಟೆಗಳ ಬಿಸಿಲು ಬೇಕು. ಬಿಸಿಲು ಚೆನ್ನಾಗಿ ಬೀಳುವ ಕಡೆ ಮಾತ್ರ ಪಾಟ್ ಇಡಿ.
Image credits: Getty
Kannada
ನೀರು, ಗೊಬ್ಬರ
ಮಣ್ಣಿನ ಮೇಲ್ಪದರ ಒಣಗಿದಾಗ ಮಾತ್ರ ನೀರು ಹಾಕಿ. ಸುಮ್ಮನೆ ನೀರು ಹಾಕುತ್ತಿರಬೇಡಿ. ಹೆಚ್ಚು ನೀರು ಹಾಕಿದರೆ ಬೇರು ಕೊಳೆಯುತ್ತದೆ. ತಿಂಗಳಿಗೊಮ್ಮೆ ಒಂದು ಹಿಡಿ ಕೊಟ್ಟಿಗೆ ಗೊಬ್ಬರ ಅಥವಾ ವರ್ಮಿ ಕಾಂಪೋಸ್ಟ್ ಹಾಕಬೇಕು.
Image credits: Getty
Kannada
ಮಜ್ಜಿಗೆ ನೀರು
ಮನೆಯಲ್ಲಿರುವ ಹುಳಿ ಮಜ್ಜಿಗೆಯನ್ನು ಹದಿನೈದು ಹಾಗೆ ಬಿಟ್ಟು, ನೀರಿಗೆ ಬೆರೆಸಿ ವಾರಕ್ಕೊಮ್ಮೆ ಗಿಡಕ್ಕೆ ಹಾಕಬೇಕು.
Image credits: Getty
Kannada
ಟ್ರಿಮ್ಮಿಂಗ್
ಗಿಡ ಸ್ವಲ್ಪ ಎತ್ತರ ಬೆಳೆದಮೇಲೆ ಮೇಲ್ಭಾಗದ ಚಿಗುರನ್ನು ಕತ್ತರಿಸಿ. ಆಗ ಗಿಡ ಒಂದೇ ಕಡ್ಡಿಯಂತೆ ಬೆಳೆಯುವ ಬದಲು ಪಕ್ಕದ ರೆಂಬೆಗಳು ಬಂದು ಬೆಳೆಯುತ್ತದೆ.
Image credits: instagram
Kannada
ಕೀಟಗಳ ನಿಯಂತ್ರಣ
ಕರಿಬೇವು ಎಲೆಗಳ ಮೇಲೆ ಬಿಳಿ ಮಚ್ಚೆ ಅಥವಾ ಕಪ್ಪು ಕೀಟಗಳು ಕಾಣಿಸಿದರೆ, ವಾರಕ್ಕೊಮ್ಮೆ ಬೇವಿನ ಎಣ್ಣೆಯನ್ನು ನೀರಿಗೆ ಬೆರೆಸಿ ಸ್ಪ್ರೇ ಮಾಡಿ
Image credits: Our own
Kannada
ನೀರು
ಅಕ್ಕಿ ತೊಳೆದ ನೀರು ಅಥವಾ ಬೇಳೆ ತೊಳೆದ ನೀರನ್ನು ಗಿಡಕ್ಕೆ ಹಾಕುವುದರಿಂದ ಕರಿಬೇವು ಬೇಗ ಚಿಗುರುತ್ತದೆ.