ಪ್ರತಿದಿನ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ದಿನಕ್ಕೆ 100 ರೂ. ಪ್ರೋತ್ಸಾಹಧನ
First Published Jan 4, 2021, 3:51 PM IST
ಗುಹವಾಟಿ (ಜ. 04) ಕೊರೋನಾ ಕಾಲದಲ್ಲಿ ಸರ್ಕಾರಗಳು ಹರಸಾಹಸ ಮಾಡಿ ಶಾಲೆಗಳನ್ನು ರಿ ಓಪನ್ ಮಾಡಿವೆ. ಅಸ್ಸಾಂ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಹೆಣ್ಣು ಮಕ್ಕಳು ಶಾಲೆ ತಪ್ಪಿಸದಿರಲು ನಿರ್ಧಾರವೊಂದನ್ನು ಮಾಡಿದೆ.

ಪ್ರತಿ ದಿನ ಶಾಲೆಗೆ ಹಾಜರಾಗುವ ವಿದ್ಯಾರ್ಥಿನಿಯರಿಗೆ ನೂರು ರೂ. ಪ್ರೋತ್ಸಾಹಧನ ಸಿಗಲಿದೆ. ರಾಜ್ಯ ಶಿಕ್ಷಣ ಸಚಿವ ಹಿಮಂತ್ ಬಿಸ್ವಾ ಶರ್ಮಾ ಈ ಘೋಷಣೆ ಮಾಡಿದ್ದಾರೆ.

ಇದು ಅಲ್ಲದೆ ಪದವಿಪೂರ್ವ ಮಕ್ಕಳ ಹೆಸರಿನಲ್ಲಿ 1500 ರೂ. ಪದವಿ ಮಕ್ಕಳ ಹೆಸರಿನಲ್ಲಿ 2000 ರೂ. ಡಿಪಾಸಿಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಎಲ್ಲರಿಗೂ ಬ್ಯಾಂಕ್ ಖಾತೆ ತೆರದು ನೀಡಲಾಗುವುದು.. ಮಕ್ಕಳ ಕಲಿಕೆಗೆ ಈ ಹಣ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ. ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯೂ ಸಮೀಪಿಸುತ್ತಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?