ಸ್ಪೇನ್(ಜ.04) ಕಳೆದ ವರ್ಷ ಅಂದರೆ 2020 ಬಹುತೇಕರಿಗೆ ಕರಾಳ ವರ್ಷವಾಗಿದೆ. ಸಂಭ್ರಮ ಮರೆಯಾದ ವರ್ಷವಾಗಿದೆ. ಇದಕ್ಕೆ ಕಾರಣ ಕೊರೋನಾ ವೈರಸ್. ಹೀಗಾಗಿ 2021ನೇ ಹೊಸ ವರ್ಷ ಸಂತಸ ತರಲಿ ಎಂದು ಎಲ್ಲರೂ ಆತ್ಮೀಯವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಹೀಗೆ ಹೊಸ ವರ್ಷ ಸ್ವಾಗತಕ್ಕೆ ರೆಡಿಯಾಗಿದ್ದ ಮರ್ಸಿಡೀಸಸ್ ಡೈಮ್ಲೇರ್ ನೌಕರನಿಗೆ 2021 ಆರಂಭವೇ ಕರಾಳವಾಗಿದೆ.

ಬಾಸ್ ಫೆರಾರಿ ಕಾರಿನ ಮೇಲೆ ಟ್ರಕ್ ಹತ್ತಿಸಿ ಸೇಡು ತೀರಿಸಿಕೊಂಡ ಉದ್ಯೋಗಿ!..

2020ನೇ ವರ್ಷದ ಕೊನೆಯ ದಿನ ಸ್ಪೇನ್‌ ಮರ್ಸಿಡೀಸ್-ಡೈಮ್ಲೇರ್ ವಿಕ್ಟೋರಿಯಾ ಘಟಕದ ಉದ್ಯೋಗಿಯನ್ನು ಕಂಪನಿ ಬಾಸ್ ಚೇಂಬರ್‌ಗೆ ಕರೆಸಿದ್ದಾರೆ. ಸತತ 45 ನಿಮಿಷ ಹಿಗ್ಗಾಮುಗ್ಗ ಜಾಡಿಸಿದ ಬಾಸ್, ಕೊನೆಗೆ ನಾಳೆಯಿಂದ ನಿನ್ನ ಅವಶ್ಯಕತೆ ಕಂಪನಿಗಿಲ್ಲ ಎಂದಿದ್ದಾರೆ. ಒಂದೆಡೆ ಹೊಸ ವರ್ಷ ಸ್ವಾಗತಿಸುವ ಆರಂಭದಲ್ಲೇ ಕಂಪನಿ ಬಾಸ್‌ನಿಂದ ಬೈಗುಳ ಜೊತೆಗೆ ಉದ್ಯೋಗವೂ ಕಳೆದುಕೊಂಡ ನೌಕರ ಹತಾಶೆಗೊಂಡಿದ್ದಾನೆ.

ತನ್ನ ಆಕ್ರೋಶ ಹೆಚ್ಚಾದಾಗ, ಮರ್ಸಿಡೀಶ್ ಘಟಕದಲ್ಲಿದ್ದ 50 ಕಾರುಗಳನ್ನು ಪುಡಿ ಪುಡಿ ಮಾಡಿದ್ದಾನೆ. ಘಟಕದ ಪಕ್ಕದ ಕಂಪನಿಯಲ್ಲಿದ್ದ ಜೆಸಿಬಿ ರೀತಿಯ ಕ್ಯಾಟರ್‌ಪಿಲ್ಲರ ವಾಹನ ಕದ್ದು ತಂದ ನೌಕರ, ಮರ್ಸಿಡೀಸ್ ಡೈಮ್ಲೇರ್ ಘಟಕದಲ್ಲಿ ನಿಲ್ಲಿಸಿದ್ದ 50ಕ್ಕೂ ಹೆಚ್ಚು ವಾಹನಗಳ ಮೇಲೆ ಹತ್ತಿಸಿದ್ದಾನೆ. ಇನ್ನು ಕೆಲ ವಾಹನಗಳನ್ನು ಸುಮಾರು 21 ಕಿ.ಮೀ ದಾರಿಯಲ್ಲಿ ಎಳೆದೊಯ್ದಿದ್ದಾನೆ.

ನೌಕರನ ಆಕ್ರೋಶಕ್ಕೆ ಮರ್ಸೀಡ್ ಬೆಂಝ್ ಕಂಪನಿಯ 50ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾಗಿದೆ. ವಿಕ್ಟೋರಿಯಾ ಘಟಕದ ಸುತ್ತಮುತ್ತಲಿನ ಕಂಪನಿಗಳಲ್ಲಿ ಹೊಸ ಸಂಭ್ರಮ ಆರಂಭಗೊಳ್ಳುತ್ತಿದ್ದ, ಮರ್ಸಿಡೀಸ್ ಬೆಂಝ್ ಕಂಪನಿ ಮಾತ್ರ ಆತಂಕದಲ್ಲಿತ್ತು. ರಾತ್ರಿ 1 ಗಂಟೆಗೆ ನೌಕರನ ಆಕ್ರೋಶ ಸ್ಫೋಟಗೊಂಡಿದೆ. ಕಂಪನಿ ಭದ್ರತಾ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡಿ ಹಾರಿಸಿ ಬೆದರಿಸಿದ್ದಾರೆ.

ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ನೌಕರನನ್ನು ಆರೆಸ್ಟ್ ಮಾಡಿದ್ದಾರೆ. ಆದರೆ ಉದ್ಯೋಗ ಕಳೆದುಕೊಂಡ ನೌಕರನಿಗೆ ಮಾತ್ರವಲ್ಲ, ವಿಕ್ಟೋರಿಯಾದ ಮರ್ಸಿಡೀಸ್ ಘಟಕ್ಕೂ 2021ರ ಆರಂಭ ಕರಾಳವಾಗಿತ್ತು.