2020ರಲ್ಲಿ ಎದುರಿಸಿದ ಸಂಕಷ್ಟ ಕಂಡು ಪ್ರತಿಯೊಬ್ಬರೂ ಹೊಸ ವರ್ಷವನ್ನು ಸಂತೋಷದಿಂದ ಬರ ಮಾಡಿಕೊಳ್ಳಬೇಕೆಂದು ಕುಟುಂಬ ಹಾಗೂ ಸ್ನೇಹಿತರ ಜೊತೆ ಸಂಭ್ರಮಿಸಿದ್ದರು. ಪಾರ್ಟಿ ಮಾಡುತ್ತಾ ಕೆಲವರು ಫೋಟೋ ಶೇರ್ ಮಾಡಿದರೆ, ಇನ್ನೂ ಕೆಲವರು ಪಾರ್ಟಿ ಮುಗಿದ ಮೇಲೆ ಶೇರ್ ಮಾಡಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಶೇರ್ ಮಾಡಿಕೊಂಡ ಫೋಟೋ ಅಭಿಮಾನಿಗಳಲ್ಲಿ ಕೊಂಚ ಗೊಂದಲ ಸೃಷ್ಟಿಸಿದೆ..

ನಿರ್ದೇಶಕರಿಗೆ ನಿರ್ದೇಶಕಿಯಾದ ಹರಿಪ್ರಿಯಾ; ಶೂಟಿಂಗ್‌ನಲ್ಲಿ ಏನಾಯ್ತು ನೋಡಿ! 

ಹರಿಪ್ರಿಯಾ ಪೋಸ್ಟ್:
'2021ರ ಮೊದಲ ಪೋಸ್ಟ್.  ನಾನು ತಡವಾಗಿ ಶುಭಾಶಯಗಳನ್ನು ತಿಳಿಸುತ್ತಿರುವೆ. ಆದರೆ ನೀವೆಲ್ಲರೂ ನನ್ನ ಹೃದಯದಲ್ಲಿ ಇದ್ದೀರಾ. ಇಡೀ ವರ್ಷ ಖಂಡಿತವಾಗಿಯೂ ನಮ್ಮ ಪರ ಇರುತ್ತದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು,' ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ. ಫ್ಯಾಮಿಲಿ ಹಾಗೂ ಫ್ರೆಂಡ್ಸ್‌ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಆದರೆ ಫೋಟೋವೊಂದರಲ್ಲಿ ಕಿರುತೆರೆ ನಟನೊಂದಿಗೆ ನೀರ್‌ದೋಸೆ ಬೆಡಗಿಯನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನನ್ನ ಅರಸಿ ರಾಧೆ' ನಟ ಅಭಿನವ್ ವಿಶ್ವನಾಥನ್‌ ಹರಿಪ್ರಿಯಾ ಜೊತೆ ಕೇಕ್‌ ಮುಂದೆ ಕುಳಿತು ಪೋಸ್ಟ್ ಕೊಟ್ಟಿದ್ದಾರೆ. ಕಿರುತೆರೆ ನಟನಿಗೂ ಬೆಳ್ಳಿತೆರೆ ನಟಿಗೂ ಹೇಗೆ ಪರಿಚಯ ಎಂಬುದು ಜನರ ಪ್ರಶ್ನೆ. 'ಅಗಸ್ತ್ಯ ರಾಥೋಡ್ ನಿಮಗೆ ಹೇಗೆ ಪರಿಚಯ?' ಎಂದು ಕೆಲವರು ಕಮೆಂಟ್‌ನಲ್ಲಿ ಕೇಳಿದ್ದಾರೆ. ಆದರೆ ಇದರ ಬಗ್ಗೆ ಹರಿಪ್ರಿಯಾ ಎಲ್ಲಿಯೂ ಉತ್ತರ ನೀಡಿಲ್ಲ.

ಮೈಸೂರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಟಿ ಹರಿಪ್ರಿಯಾ; 'ಪೆಟ್ರೋಮ್ಯಾಕ್ಸ್' ಪಯಣ! 

 
 
 
 
 
 
 
 
 
 
 
 
 
 
 

A post shared by Hariprriya (@iamhariprriya)