Asianet Suvarna News Asianet Suvarna News

'ಕೈ' ಸೇರಲು ಶಾಸಕನಿಗೆ ಸಿಕ್ತು ಗ್ರೀನ್ ಸಿಗ್ನಲ್, RCBಗೆ ಬರ್ತಾರಾ ಗೇಲ್? ಅ.13ರ ಟಾಪ್ 10 ಸುದ್ದಿ!

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿ ಮೇಲಿನ ಪೈಶಾಚಿಕ ಕೃತ್ಯದ ಬೆನ್ನಲ್ಲೇ 3 ಅಪ್ರಾಪ್ತೆಯರ ಮೇಲೆ ಆಸಿಡ್ ದಾಳಿ ನಡೆಸಲಾಗಿದೆ. ಬಿಎಸ್‌ವೈ ಸಂಪುಟದಲ್ಲಿ ಖಾತೆ ಬದಲಾವಣೆ ಅಸಮಾಧಾನದ ಕಿಡಿ ಆರಂಭಗೊಂಡಿದೆ.  ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಿಹಾರ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ನಟಿ ಪ್ರಣೀತಾಗೆ ಲಕ್ಷಾಂತರ ರೂಪಾಯಿ ವಂಚನೆ, ಕಾಂಗ್ರೆಸ್ ಸೇರಲು ಹಾಲಿ ಶಾಸಕನಿಗೆ ವೇದಿಕೆ ಸಿದ್ದ ಸೇರಿದಂತೆ ಅಕ್ಟೋಬರ್ 13ರಂದು ಸಂಚಲನ ಮೂಡಿಸಿದಿ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
Sharath Bache Gowda to Chris gayle ipl 2020 top 10 news of October 13 ckm
Author
Bengaluru, First Published Oct 13, 2020, 5:04 PM IST
  • Facebook
  • Twitter
  • Whatsapp

ಹತ್ರಾಸ್ ಬೆನ್ನಲ್ಲೇ ಮತ್ತೊಂದು ಪೈಶಾಚಿಕ ಕೃತ್ಯ: 3 ಅಪ್ರಾಪ್ತೆಯರ ಮೇಲೆ ಆಸಿಡ್ ದಾಳಿ!...

Sharath Bache Gowda to Chris gayle ipl 2020 top 10 news of October 13 ckm

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿ ಮೇಲಿನ ಪೈಶಾಚಿಕ ಕೃತ್ಯದ ಕಹಿ ನೆನಪು ಇನ್ನೂ ಮರೆ ಮಾಚಿಲ್ಲ, ಅದಕ್ಕೂ ಮುನ್ನ ಗೋಂಡಾ ಜಿಲ್ಲೆಯ ಮೂವರು ಅಪ್ರಾಪ್ತ ದಲಿತ ಸಹೋದರಿಯರ ಮೇಲೆ ಆಸಿಡ್ ಎರಚಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತರನ್ನು ಗೋಂಡಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. 

ಸಿಎಂ ಭೇಟಿ ಮಾಡಿ ಮಾತಾಡದೇ ತೆರಳಿದ ಸಚಿವ ಶ್ರೀ ರಾಮುಲು : ಖಾತೆ ಬದಲಿಗೆ ಆಯ್ತಾ ಅಸಮಾಧಾನ?...

Sharath Bache Gowda to Chris gayle ipl 2020 top 10 news of October 13 ckm

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ಉಪ ಚುನಾವಣೆ ಇನ್ನೇನು ಕೆಲ ದಿನಗಳಲ್ಲೇ ನಡೆಯುತ್ತಿದ್ದು, ಇದೇ ವೇಳೆ ಇಬ್ಬರು ಸಚಿವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ. 

ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ: ಟೈಮ್ಸ್ ನೌ ಸಮೀಕ್ಷೆ!...

Sharath Bache Gowda to Chris gayle ipl 2020 top 10 news of October 13 ckm

ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದಾಗಿ ಸಿ-ವೋಟರ್ಸ್‌ ಸಮೀಕ್ಷೆ ಭವಿಷ್ಯ ನುಡಿದಿದೆ.

ಮಿಡ್ ಸೀಸನ್ ಟ್ರಾನ್ಸ್‌ಫರ್‌: ಮತ್ತೆ ಆರ್‌ಸಿಬಿಗೆ ಬರ್ತಾರಾ ಗೇಲ್..?...

Sharath Bache Gowda to Chris gayle ipl 2020 top 10 news of October 13 ckm

ಕ್ರಿಸ್ ಗೇಲ್ ಮತ್ತೆ ಆರ್‌ಸಿಬಿಗೆ ಬರ್ತಾರಾ?, ಬ್ಯಾಟ್‌ಸ್ಮನ್‌ಗಳ ಕೊರತೆ ಎದುರಿಸುತ್ತಿರುವ ಚೆನ್ನೈ ತಂಡಕ್ಕೆ ಅಜಿಂಕ್ಯ ರಹಾನೆ ಸೇರ್ಪಡೆಯಾಗ್ತಾರಾ? ಈ ರೀತಿಯ ಹಲವು ಚರ್ಚೆಗಳು ಶುರುವಾಗಿವೆ. 

ಮುನಿರತ್ನಗೆ ಬಿಗ್ ರಿಲೀಫ್; ಸಂಜೆ ಹೊರಬೀಳಲಿದೆ ಬಿಜೆಪಿ ಟಿಕೆಟ್ ಘೋಷಣೆ...

Sharath Bache Gowda to Chris gayle ipl 2020 top 10 news of October 13 ckm

ಆರ್ ಆರ್ ನಗರ ಚುನಾವಣಾ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ತೀರ್ಪು ಮುನಿರತ್ನಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಹಾದಿಯನ್ನು ಇನ್ನಷ್ಟು ಸುಗಮೊಳಿಸಿದೆ. 

ರಸ್ತೆ ಅಪಘಾತ; ಸಾವು ನೋವಿನ ನಡುವೆ ಹೋರಾಡುತ್ತಿದ್ದಾರಾ ನಟಿ ರಿಷಿಕಾ ಸಿಂಗ್?...

Sharath Bache Gowda to Chris gayle ipl 2020 top 10 news of October 13 ckm

ಜುಲೈ ತಿಂಗಳಿನಲ್ಲಿ ನಡೆದ ರಸ್ತೆ ಅಪಘಾತದಿಂದ ನಟಿ ರಿಷಿಕಾ ಸಿಂಗ್ ಆರೋಗ್ಯ ಚಿಂತಾಜನಕ. ಎರಡೂವರೆ ತಿಂಗಳಾದರೂ ಇನ್ನೂ ಹಾಸಿಗೆಯಲ್ಲಿಯೇ ಇದ್ದಾರೆ. 

ನಟಿ ಪ್ರಣೀತಾರನ್ನು ರಾಯಭಾರಿ ಮಾಡೋದಾಗಿ ಲಕ್ಷಾಂತರ ರೂ. ವಂಚನೆ...

Sharath Bache Gowda to Chris gayle ipl 2020 top 10 news of October 13 ckm

ರಿಯಲ್‌ ಎಸ್ಟೇಟ್‌ ಕಂಪನಿಯೊಂದಕ್ಕೆ ಕನ್ನಡ ಚಲನಚಿತ್ರ ರಂಗ ಖ್ಯಾತ ನಟಿ ಪ್ರಣೀತಾ ಸುಭಾಷ್‌ ಅವರನ್ನು ರಾಯಭಾರಿಯಾಗಿಸುವುದಾಗಿ ನಂಬಿಸಿ ಕಿಡಿಗೇಡಿಗಳು 13.5 ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ಮೂಡಿದ ಒಮ್ಮತ, ಶಾಸಕರೊಬ್ಬರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ವೇದಿಕೆ ಸಿದ್ಧ...

Sharath Bache Gowda to Chris gayle ipl 2020 top 10 news of October 13 ckm

ಬಿಜೆಪಿ ಸಂಸದರ ಪುತ್ರ, ಹಾಲಿ ಶಾಸಕ ಕಾಂಗ್ರೆಸ್ ಸೇರ್ಪಡೆಯಾಗುವುದು ಪಕ್ಕಾ ಆಗಿದೆ. ಇಂದು (ಮಂಗಳವಾರ) ನಡೆದ ಮೀಟಿಂಗ್‌ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮೊಬೈಲ್ ರೇಡಿಯೇಷನ್ ಕಡಿಮೆ ಮಾಡುತ್ತೆ ಸಗಣಿಯ ಈ ಚಿಪ್!...

Sharath Bache Gowda to Chris gayle ipl 2020 top 10 news of October 13 ckm

ರಾಷ್ಟ್ರೀಯ ಕಾಮಧೇನು ಆಯೋಗ ಸೋಮವಾರದಂದು ದನದ ಸಗಣಿಯಿಂದ ಮಾಡಿದ ಚಿಪ್ ಒಂದನ್ನು ಲಾಂಚ್ ಮಾಡಿದೆ. ಈ ಚಿಪ್ ಮೊಬೈಲ್‌ ಫೋನ್‌ ರೇಡಿಯೇಷನ್ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಆಯೋಗದ ಅಧ್ಯಕ್ಷ ವಲ್ಲಭ ಭಾಯಿ ತಿಳಿಸಿದ್ದಾರೆ.

ಕಿಚನ್, ಬಾಥ್‌ರೂಂ, ಟಾಯ್ಲೆಟ್; ಈ ಇನೋವಾ ಕಾರಿನಲ್ಲಿ ಎಲ್ಲವೂ ಇದೆ!...

Sharath Bache Gowda to Chris gayle ipl 2020 top 10 news of October 13 ckm

ಅಡುಗೆ ಕೋಣೆ, ಬೆಡ್ ರೂಂ, ಬಾಥ್ ರೂಂ, ಟಾಯ್ಲೆಟ್ ಎಲ್ಲವೂ ಈ ಇನೋವಾ ಕಾರಿನಲ್ಲಿದೆ. ಒಂದು ಸಣ್ಣ ಮನೆಯಂತೆ ಕಾರನ್ನು ಪರಿವರ್ತಿಸಲಾಗಿದೆ. ಪ್ರವಾಸ ತೆರಳುವರಿಗೆ ಈ ಇನೋವಾ ಕಾರು ಸೂಕ್ತವಾಗಿದೆ. 
 
Follow Us:
Download App:
  • android
  • ios