ಮಿಡ್ ಸೀಸನ್ ಟ್ರಾನ್ಸ್‌ಫರ್: ಮತ್ತೆ ಆರ್‌ಸಿಬಿಗೆ ಬರ್ತಾರಾ ಗೇಲ್..?
ಬೆಂಗಳೂರು: ಕ್ರಿಸ್ ಗೇಲ್ ಮತ್ತೆ ಆರ್‌ಸಿಬಿಗೆ ಬರ್ತಾರಾ?, ಬ್ಯಾಟ್‌ಸ್ಮನ್‌ಗಳ ಕೊರತೆ ಎದುರಿಸುತ್ತಿರುವ ಚೆನ್ನೈ ತಂಡಕ್ಕೆ ಅಜಿಂಕ್ಯ ರಹಾನೆ ಸೇರ್ಪಡೆಯಾಗ್ತಾರಾ? ಈ ರೀತಿಯ ಹಲವು ಚರ್ಚೆಗಳು ಶುರುವಾಗಿವೆ. ಇದಕ್ಕೆ ಕಾರಣ, ಐಪಿಎಲ್ ಆರಂಭಗೊಂಡು 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಿಸಿಸಿಐ, ಒಂದು ತಂಡದ ಪರ ಆಡಿದ ಆಟಗಾರರನ್ನು ಮತ್ತೊಂದು ತಂಡ ಟೂರ್ನಿ ಮಧ್ಯೆಯೇ ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.

ಮಂಗಳವಾರ(ಅ.12)ದಿಂದ ಮಿಡ್ ಸೀಸನ್ ಟ್ರಾನ್ಸ್ಫರ್ (ಮಧ್ಯಂತರ ವರ್ಗಾವಣೆ) ಆರಂಭಗೊಳ್ಳಲಿದ್ದು, ತಂಡಗಳಿಗೆ 5 ದಿನಗಳ ಕಾಲ ಸಮಯಾವಕಾಶವಿದೆ.

ಎಲ್ಲಾ ತಂಡಗಳು ತಲಾ 7 ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ತಮ್ಮ ತಂಡದ ಸಮತೋಲನಕ್ಕೆ ಅಗತ್ಯವಿರುವ ಆಟಗಾರರನ್ನು ಪಡೆದುಕೊಳ್ಳಬಹುದಾಗಿದೆ.

ಆದರೆ ಕೆಲ ಷರತ್ತುಗಳು ಅನ್ವಯವಾಗಲಿವೆ. ಆಟಗಾರರನ್ನು ಬದಲಿಸಿಕೊಳ್ಳಲು ಇಚ್ಛಿಸುವ ಫ್ರಾಂಚೈಸಿಗಳು ಪರಸ್ಪರ ಒಪ್ಪಿಗೆ ಸೂಚಿಸಬೇಕು. ಅಂತಿಮ ನಿರ್ಧಾರ ಆಟಗಾರನನ್ನು ಹೊಂದಿರುವ ತಂಡದ್ದೇ ಆಗಿರಲಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಆವೃತ್ತಿಯಲ್ಲಿ ಆಟಗಾರ ಗರಿಷ್ಠ 2 ಪಂದ್ಯಗಳನ್ನಷ್ಟೇ ಆಡಿರಬೇಕು. 2ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿದರೆ ಆತ ಇನ್ನೊಂದು ತಂಡ ಮಧ್ಯದಲ್ಲಿಯೇ ಸೇರಿಕೊಳ್ಳಲು ಸಾಧ್ಯವಿಲ್ಲ.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮಿಡ್ ಸೀಸನ್ ವರ್ಗಾವಣೆಗೆ ಲಭ್ಯವಿರುವ ಕೆಲ ಪ್ರಮುಖ ಆಟಗಾರರ ಪಟ್ಟಿ ಇಂತಿದೆ.

ಸಿಎಸ್‌ಕೆ: ಇಮ್ರಾನ್ ತಾಹಿರ್, ಜೋಶ್ ಹೇಜಲ್‌ವುಡ್, ಋತುರಾಜ್ ಗಾಯಕ್ವಾಡ್.

ಮುಂಬೈ ಇಂಡಿಯನ್ಸ್: ಆದಿತ್ಯ ತಾರೆ, ಮಿಚೆಲ್ ಮೆಕ್ಲನಾಘನ್, ಕ್ರಿಸ್ ಲಿನ್, ಧವಳ್ ಕುಲಕರ್ಣಿ.

ಡೆಲ್ಲಿ: ಅಜಿಂಕ್ಯ ರಹಾನೆ, ಮೋಹಿತ್ ಶರ್ಮಾ, ಕೀಮೋ ಪೌಲ್, ಅಲೆಕ್ಸ್ ಕ್ಯಾರಿ.

ಸನ್‌ರೈಸರ್ಸ್: ವೃದ್ಧಿಮಾನ್ ಸಾಹ, ವಿಜಯ್ ಶಂಕರ್, ಮೊಹಮದ್ ನಬಿ, ಬಿಲ್ಲಿ ಸ್ಟ್ಯಾನ್‌ಲೇಕ್.

ಪಂಜಾಬ್: ಕ್ರಿಸ್ ಗೇಲ್, ಕ್ರಿಸ್ ಜೋರ್ಡನ್, ಮನ್‌ದೀಪ್ ಸಿಂಗ್.

ರಾಜಸ್ಥಾನ:ವರುಣ್ ಆ್ಯರೋನ್, ಯಶಸ್ವಿ ಜೈಸ್ವಾಲ್, ಡೇವಿಡ್ ಮಿಲ್ಲರ್.

ಆರ್‌ಸಿಬಿ: ಡೇಲ್ ಸ್ಟೇನ್, ಪಾರ್ಥಿವ್ ಪಟೇಲ್, ಮೋಯಿನ್ ಅಲಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.