ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಜುಲೈ 30ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಸುಮಾರು ಎರಡೂವರೆ ತಿಂಗಳಾದರೂ ಹಾಸಿಗೆ ಹಿಡಿದು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಬಗ್ಗೆ ರಿಶಿಕಾ ಸಿಂಗ್ ಆಪ್ತರಿಂದ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ಅತಿ ವೇಗದಿಂದ ಮರಕ್ಕೆ ಕಾರು ಡಿಕ್ಕಿ: ರಾಜೇಂದ್ರ ಸಿಂಗ್‌ ಪುತ್ರಿಗೆ ಪೆಟ್ಟು

ಹೆಸರುಘಟ್ಟದ ಗೆಳೆಯರ ಮನೆಯಿಂದ ಮುಂಜಾನೆ 6 ಗಂಟೆ ಸಮಯದಲ್ಲಿ ಹೊರಟ ನಟಿ ರಿಷಿಕಾ ಸಿಂಗ್, ಗೆಳತಿ ಅರ್ಪಿತಾ ಹಾಗೂ ಕಾರು ಚಾಲಕ ಆರ್ಯ ಗಾಯಗೊಂಡಿದ್ದರು. ಅತಿ ವೇಗವಾಗಿ ಚಾಲಕ ಕಾರು ಚಲಾಯಿಸಿದ ಕಾರಣ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು.  ರಿಷಿಕಾ ಹಾಗೂ ಅರ್ಪಿತಾಗೆ ಸಣ್ಣಪುಟ್ಟ ಗಾಯ ಹಾಗೂ ಚಾಲಕ ಗಂಭೀರ ಸ್ಥಿತಿಯಲ್ಲಿದ್ದ ಎನ್ನಲಾಗಿತ್ತು. ಆದರೀಗ ರಿಷಿಕಾ ಅವರ ಆರೋಗ್ಯವಿನ್ನೂ ಸುಧಾರಿಸಿಲ್ಲ ಎನ್ನಲಾಗುತ್ತಿದೆ. 

ಅಪಘಾತದಲ್ಲಿ ರಿಷಿಕಾ ಸಿಂಗ್ ಬೆನ್ನು ಹುರಿಗೆ ಪೆಟ್ಟು ಬಿದ್ದಿತ್ತು. ಸಾವು ನೋವಿನ ನಡುವೆ ಹೋರಾಡುತ್ತಿರುವ ರಿಷಿಕಾ  ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಇರೊ ಸಕ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ ಎನ್ನಲಾಗಿದೆ. ಲಕ್ಷಾಂತರ ರೂಪಾಯಿ ಕರ್ಚು ಮಾಡಿದ್ದರೂ, ರಿಷಿಕಾ ನಿರೀಕ್ಷಿತ ಮಟ್ಟದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ನಿಧಾನವಾಗಿ ಗುಣಮುಖರಾಗಿದ್ದಾರೆ, ಎನ್ನಲಾಗಿದೆ. ಈ ಕಾರಣದಿಂದಾಗಿ ಅವರ ಕೈಯಲ್ಲಿರುವ ಎರಡು ಸಿನಿಮಾ ಆಫರ್‌ಗಳನ್ನು ಕೈ ಬಿಡಬೇಕಾಗಿದೆ.  ವೆಬ್ ಸೀರಿಸ್ ಮತ್ತು ಇನ್ನೂ ಹೆಸರಿಡದ ಸಿನಿಮಾವೊಂದಕ್ಕೆ ರಿಶಿಕಾ ಸಿಂಗ್ ಸಹಿ ಮಾಡಿದ್ರು. ಆದರೆ ಅಪಘಾತದಿಂದ ರಿಶಿಕಾ ಸಿಂಗ್ ಶೂಟಿಂಗ್ ಗೆ ಬರೋದು ಕಷ್ಟವಿದೆ ಎಂದು ಆಪ್ತರು ತಿಳಿಸಿದ್ದಾರೆ.

ಕಂಠೀರವ, ಕಳ್ಳ ಮಳ್ಳ ಸುಳ್ಳ, ಕಠಾರಿ ವೀರ ಸುರ ಸುಂದರಾಂಗಿ, ಬೆಂಕಿ ಬಿರುಗಾಳಿ, ಮಾಣಿಕ್ಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದ ರಿಶಿಕಾ ಸಿಂಗ್ ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಟಿ. ಅವರು ಆದಷ್ಟು ಬೇಗ ಗುಣಮುಖರಾಗಲಿ.