ಬಿಜೆಪಿ ತೆಕ್ಕೆಗೆ ರಾರಾ- ಶಿರಾ ಕ್ಷೇತ್ರ , ಬಿಹಾರದಲ್ಲಿ ಫಲಿಸಿತಾ ಮೋದಿ ತಂತ್ರ? ನ.10ರ ಟಾಪ್ 10 ಸುದ್ದಿ!
ಉಪಚುನಾವಣೆಯಲ್ಲಿ ರಾಜಾಜಿನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ NDA ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಟ್ರೋಫಿಗಾಗಿ ಹೋರಾಟ ನಡೆಸಲಿದೆ. ಎಲೆಕ್ಷನ್ ಭರಾಟೆಯಲ್ಲಿ ಚಿನ್ನದ ಬೆಲೆ ಕುಸಿತ, ಚುನಾವಣಾ ಆಯೋಗದ ಸೂಚನೆ ಸೇರಿದಂತೆ ನವೆಂಬರ್ 10ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಬಿಹಾರ, ಯುಪಿ, ಗುಜರಾತ್, ಮಣಿಪುರದಲ್ಲಿ ಬಿಜೆಪಿಗೆ ಮುನ್ನಡೆ, ಹರಿಯಾಣ ಕೈ ತೆಕ್ಕೆಗೆ...
ಐದರಲ್ಲಿ ನಾಲ್ಕು ಸ್ಥಾನ ಗೆದ್ದ ಬಿಜೆಪಿ, ಗೆದ್ದ ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ. ತೆಲಂಗಾಣ: ಬಿಜೆಪಿಗೆ ಐತಿಹಾಸಿಕ ಗೆಲವು. ಚುನಾವಣಾ ಫಲಿತಾಂಶ ವಿವರ
ಪ್ರಾಮಾಣಿಕವಾಗಿ ಜನಸೇವೆ ಮಾಡಿ, ಆರ್‌ಆರ್ ನಗರ ಜನರ ಋಣ ತೀರಿಸುತ್ತೇನೆ: ಮುನಿರತ್ನ...
ಆರ್‌ಆರ್ ನಗರ ಗೆಲುವನ್ನು ಮುನಿರತ್ನ ಜನತೆಗೆ ಅರ್ಪಿಸಿದ್ದಾರೆ. ' ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ.ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತೇನೆ. ಇಂದಿನಿಂದ 20 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತೇನೆ' ಎಂದು ಮುನಿರತ್ನ ಭರವಸೆ ನೀಡಿದ್ದಾರೆ.
ಬಿಹಾರ ಚುನಾವಣೆ: ಮುನ್ನಡೆ ಎಂದು ಸಂಭ್ರಮಿಸುವಂತಿಲ್ಲ, ಶಾಕ್ ಕೊಟ್ಟ ಆಯೋಗದ ಮಾಹಿತಿ!...
ಡೀ ದೇಶದ ಗಮನ ಸದ್ಯ ಬಿಹಾರ ಚುನಾವಣಾ ಫಲಿತಾಂಶದ ಮೇಲಿದೆ. ಬಿಹಾರದಲ್ಲಿ ಮುಂದಿನ ಐದು ವರ್ಷ ನಿತೀಶ್ ಕುಮಾರ್ ಅಧಿಕಾರ ನಡೆಸುತ್ತಾರಾ? ಅಥವಾ ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ದಾಖಲೆಯೊಂದಿಗೆ ತೇಜಸ್ವಿ ಸರ್ಕಾರ ರಚಿಸುತ್ತಾರಾ? ಎಂಬ ಕುತೂಹಲ ಮೂಡಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ತೇಜಸ್ವಿ ಸಿಎಂ ಆಗೋದು ಖಚಿತ ಎಂದಿದ್ದರೂ ಆರಂಭಿಕ ಟ್ರೆಂಡ್ ಎನ್‌ಡಿಎ ಸರ್ಕಾರ ರಚಿಸಲಿದೆ ಎಂಬ ಸುಳಿವು ಕೊಟ್ಟಿದೆ
ಮಧ್ಯಂತರ ಜಾಮೀನು ನಿರಾಕರಿಸಿದ ಹೈಕೋರ್ಟ್: ಸುಪ್ರೀಂ ತಲುಪಿದ ಅರ್ನಬ್!...
ಪಬ್ಲಿಕ್ ಮೀಡಿಯಾ ನೆಟ್ವರ್ಕ್‌ನ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ತನ್ನ ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಮಂಗಳವಾರ ಸುಪ್ರೀಂ ಕೋರ್ಟ್ ತಲುಪಿದ್ದಾರೆ. ಸೋಮವಾರದಂದು 2018 ರಲ್ಲಿ ಇಂಟಿರಿಯರ್ ಡಿಸೈನರ್‌ಗೆ ಆತ್ಮಹತ್ಯೆ ಪ್ರಚೋದಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಮಧ್ಯಮತರ ಜಾಮೀನು ನೀಡಲು ನಿರಾಕರಿಸಿತ್ತು.
ಮುಂಬೈ ವಿರುದ್ಧದ ಫೈನಲ್ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!...
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಕಪ್ ಎತ್ತಿ ಹಿಡಿಯುವ ಕನವರಿಕೆಯಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಡೆಲ್ಲಿ ಫೈನಲ್‌ನಲ್ಲೂ ಅಂತಹದ್ದೇ ಪ್ರದರ್ಶನ ತೋರುವ ಲೆಕ್ಕಾಚಾರದಲ್ಲಿದೆ.
ಆಂಟಿ ಅನ್ನಬೇಡಿ, ನಾನಿನ್ನೂ ಚಿಕ್ಕೋಳು: ಪ್ರಿಯಾಂಕ...
ಅಗ್ನಿಸಾಕ್ಷಿ ಧಾರಾವಾಹಿ ನೋಡಿದವರಿಗೆ ಪ್ರಿಯಾಂಕ ಗತ್ತು, ಖದರ್ ಕುರಿತು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಿಗ್‌ಬಾಸ್ ಶೋ ನೋಡಿದವರಿಗೆ ಈಕೆಯ ಪರಿಚಯ ಹೇಳುವ ಅಗತ್ಯವೂ ಇಲ್ಲ. ಸದ್ಯ ನೆಗೆಟಿವ್ ಪಾತ್ರಗಳಿಗೆ ಸುಲಭಕ್ಕೆ ಹೊಂದಿಕೊಳ್ಳುವ ಪ್ರಿಯಾಂಕ, ಒಂಚೂರು ಮುನಿಸಿಕೊಂಡಿದ್ದಾರೆ. ನಗುತ್ತಲೇ ತಮ್ಮ ಮುನಿಸಿಗೆ ಕಾರಣಗಳನ್ನು ‘ಫ್ಯಾಂಟಸಿ’ ಚಿತ್ರೀಕರಣದ ಸೆಟ್‌ನಲ್ಲಿ ಹೇಳಿಕೊಂಡಿದ್ದಾರೆ.
ವಿಜಯೇಂದ್ರ ತಂತ್ರಗಳ ಫಲ: ಮೊದಲ ಬಾರಿಗೆ ಶಿರಾದಲ್ಲಿ ಅರಳಿದ ಕಮಲ...
ರಾಜ್ಯ ಬಿಜೆಪಿ ಉಪಾಧ್ಯಕ್ಷ , ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಅವರ ಕಾರ್ಯತಂತ್ರದಿಂದ ಇದೇ ಮೊದಲ ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ಎಲೆಕ್ಷನ್ ಭರಾಟೆ ಮಧ್ಯೆ ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಗ್ರಾಹಕರ ಮುಖದಲ್ಲಿ ಆನಂದ!...
ಅತ್ತ ಬಿಹಾರ ಹಾಗೂ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ, ಇತ್ತ ಕರ್ನಾಟಕದ ವಿಧಾನ ಪರಿಷತ್ತು ಹಾಗೂ ಆರ್. ಆರ್. ನಗರ ಹಾಗೂ ಶಿರಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಹೀಗೆ ಇಂದು ಅನೇಕ ಮಂದಿಯ ಗಮನ ಯಾರು ಗೆಲ್ಲುತ್ತಾರೆ ಎಂಬುವುದರ ಮೇಲಿದೆ. ಈ ಭರಾಟೆ ಮಧ್ಯೆ ಏರಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ದಿಢೀರನೆ ಕುಯಸಿದಿದ್ದು, ಗ್ರಾಹಕರನ್ನು ಚಿನ್ನ ಖರೀದಿಸಲು ಪ್ರೇರೇಪಿಸಿದೆ. ಅಷ್ಟಕ್ಕೂ ಇಂದಿನ ದರವೇನು ಅನ್ನೋರಿಗೆ ಇಲ್ಲಿದೆ ನೋಡಿ ನ. 10ರ ಗೋಲ್ಡ್ ಹಾಗೂ ಸಿಲ್ವರ್ ರೇಟ್
BS6 ಹೀರೋ Xtreme 200 ಬೈಕ್ ಬಿಡುಗಡೆ!...
ಹೀರೋ ಮೋಟಾರ್‌ಕಾರ್ಪ್ ಅಪ್‌ಗ್ರೇಡೆಡ್ BS6 ಹೀರೋ Xtreme 200 ಬೈಕ್ ಬಿಡುಗಡೆ ಮಾಡಿದೆ. ಎಂಜಿನ್ ಸೇರಿದಂತೆ ಹಲವು ಫೀಚರ್ಸ್ ಅಪ್‌ಗ್ರೇಡ್ ಮೂಲಕ ನೂತನ ಬೈಕ್ ಬಿಡುಗಡೆಯಾಗಿದೆ.