ಮುಂಬೈ(ನ.10): ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್‌ನ ಎಡಿಟರ್‌ ಇನ್ ಚೀಫ್ ಅರ್ನಬ್ ಗೋಸ್ವಾಮಿ ತನ್ನ ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್‌ ತೀರ್ಪಿನ ವಿರುದ್ಧ ಮಂಗಳವಾರ ಸುಪ್ರೀಂ ಕೋರ್ಟ್‌ ತಲುಪಿದ್ದಾರೆ. ಸೋಮವಾರದಂದು 2018 ರಲ್ಲಿ ಇಂಟಿರಿಯರ್ ಡಿಸೈನರ್‌ಗೆ ಆತ್ಮಹತ್ಯೆ ಪ್ರಚೋದಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಮಧ್ಯಮತರ ಜಾಮೀನು ನೀಡಲು ನಿರಾಕರಿಸಿತ್ತು. 

ಅರ್ನಬ್ ಗೋಸ್ವಾಮಿಯನ್ನು ನವೆಂಬರ್ 4 ರಂದು 14ರಂದು ನ್ಯಾಯಾಂಗ ಬಧನಕ್ಕೊಳಪಡಿಸಿತ್ತು. ಹೀಗಾಗಿ ಅವರನ್ನು ಭಾನುವಾರದಂದು ಆಲೀಭಾಗ್‌ನಿಂದ ತಲೋಜಾ ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಆಲೀಭಾಗ್ ಕ್ವಾರಂಟೈನ್ ಕೇಂದ್ರದಲ್ಲಿ ಅವರು ಫೋನ್ ಬಳಸುತ್ತಿದ್ದರು ಎಂಬುವುದು ಪೊಲೀಸರ ಆರೋಪವಾಗಿದೆ.