Asianet Suvarna News Asianet Suvarna News

ಬಿಹಾರ ಚುನಾವಣೆ: ಮುನ್ನಡೆ ಎಂದು ಸಂಭ್ರಮಿಸುವಂತಿಲ್ಲ, ಶಾಕ್ ಕೊಟ್ಟ ಆಯೋಗದ ಮಾಹಿತಿ!

ಇಡೀ ದೇಶದ ಗಮನ ಸದ್ಯ ಬಿಹಾರ ಚುನಾವಣಾ ಫಲಿತಾಂಶದ ಮೇಲೆ| ಬಿಹಾರದಲ್ಲಿ ಮುಂದಿನ ಐದು ವರ್ಷ ನಿತೀಶ್ ಕುಮಾರ್| ಯಾವೊಂದೂ ಪಕ್ಷವೂ ಸಂಭ್ರಮಿಸುವಂತಿಲ್ಲ. ಯಾಕೆಂದರೆ ಈ ಫಲಿತಾಂಶ ಯಾವಾಗ ಬೇಕಾದರೂ ಬದಲಾಗಬಹುದು.

Bihar Elections No Party Can Celebrate As Result Trend Can Change At Any Time pod
Author
Bangalore, First Published Nov 10, 2020, 2:34 PM IST

ಪಾಟ್ನಾ(ನ.10): ಇಡೀ ದೇಶದ ಗಮನ ಸದ್ಯ ಬಿಹಾರ ಚುನಾವಣಾ ಫಲಿತಾಂಶದ ಮೇಲಿದೆ. ಬಿಹಾರದಲ್ಲಿ ಮುಂದಿನ ಐದು ವರ್ಷ ನಿತೀಶ್ ಕುಮಾರ್ ಅಧಿಕಾರ ನಡೆಸುತ್ತಾರಾ? ಅಥವಾ ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ದಾಖಲೆಯೊಂದಿಗೆ ತೇಜಸ್ವಿ ಸರ್ಕಾರ ರಚಿಸುತ್ತಾರಾ? ಎಂಬ ಕುತೂಹಲ ಮೂಡಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ತೇಜಸ್ವಿ ಸಿಎಂ ಆಗೋದು ಖಚಿತ ಎಂದಿದ್ದರೂ ಆರಂಭಿಕ ಟ್ರೆಂಡ್ ಎನ್‌ಡಿಎ ಸರ್ಕಾರ ರಚಿಸಲಿದೆ ಎಂಬ ಸುಳಿವು ಕೊಟ್ಟಿದೆ. ಹೀಗಿದ್ದರೂ ಯಾವೊಂದೂ ಪಕ್ಷವೂ ಸಂಭ್ರಮಿಸುವಂತಿಲ್ಲ. ಯಾಕೆಂದರೆ ಈ ಫಲಿತಾಂಶ ಯಾವಾಗ ಬೇಕಾದರೂ ಬದಲಾಗಬಹುದು.

ಹೌದು ಮುನ್ನಡೆ ಕಾಯ್ದುಕೊಂಡಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಹಾರ ಚುನಾವಣೆ ಆಯೋಗ ಅಚ್ಚರಿಯ ವಿವರ ಬಹಿರಂಗಪಡಿಸಿದೆ.

* 8 ಕ್ಷೇತ್ರಗಳಲ್ಲಿ ಕೇವಲ 200 ಮತಗಳ ವ್ಯತ್ಯಾಸ

* 80 ಕ್ಷೇತ್ರಗಳಲ್ಲಿ 2000 ಮತಗಳ ಅಂತರದ ಮುನ್ನಡೆ

* 52 ಕ್ಷೇತ್ರಗಳಲ್ಲಿ 1000 ಮತಗಳ ಅಂತರದ ಹಣಾಹಣಿ

* 23 ಕ್ಷೇತ್ರಗಳಲ್ಲಿ ಕೇವಲ 500 ಮತಗಳ  ವ್ಯತ್ಯಾಸ

* 2015 ಕ್ಕೆ ಹೋಲಿಸಿದ್ರೆ, ಈ ಸಲದ ಚುನಾವಣೆ ಫಲಿತಾಂಶ ತಡವಾಗಲಿದೆ

* 20% ಮತಗಳನ್ನು ಮಾತ್ರ ಇದುವರೆಗೆ ಎಣಿಕೆ ಮಾಡಲಾಗಿದೆ

* 34 ಸಾವಿರ ಮತಗಟ್ಟೆಗಳು ಈ ಸಲ ಹೆಚ್ಚಾಗಿದೆ

* 45% ಇವಿಎಂ ಮಷಿನ್ ಗಳು ಈ ಬಾರಿ ಹೆಚ್ಚು ಬಳಕೆ ಮಾಡಲಾಗಿದೆ

* ಇನ್ನೂ ಹಲವು ಸುತ್ತಿನ ಮತಗಳ ಎಣಿಕೆ ಬಾಕಿ ಇದೆ

ಬಿಹಾರದಲ್ಲಿ ಒಟ್ಟು ನಾಲ್ಕು ಕೋಟಿ ಮತ ಚಲಾವಣೆಯಾಗಿದ್ದು, ಈತನಕ 87 ಲಕ್ಷ ಮತಗಳ ಎಣಿಕೆಯಾಗಿದೆ. ಈವರೆಗೂ ಶೇ 30ರಷ್ಟು ಮತಗಳ ಎಣಿಕೆಯಾಗಿದೆ.
 

Follow Us:
Download App:
  • android
  • ios