ಆಂಟಿ ಅನ್ನಬೇಡಿ, ನಾನಿನ್ನೂ ಚಿಕ್ಕೋಳು: ಪ್ರಿಯಾಂಕ
ಅಗ್ನಿಸಾಕ್ಷಿ ಧಾರಾವಾಹಿ ನೋಡಿದವರಿಗೆ ಪ್ರಿಯಾಂಕ ಗತ್ತು, ಖದರ್ ಕುರಿತು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಿಗ್‌ಬಾಸ್ ಶೋ ನೋಡಿದವರಿಗೆ ಈಕೆಯ ಪರಿಚಯ ಹೇಳುವ ಅಗತ್ಯವೂ ಇಲ್ಲ. ಸದ್ಯ ನೆಗೆಟಿವ್ ಪಾತ್ರಗಳಿಗೆ ಸುಲಭಕ್ಕೆ ಹೊಂದಿಕೊಳ್ಳುವ ಪ್ರಿಯಾಂಕ, ಒಂಚೂರು ಮುನಿಸಿಕೊಂಡಿದ್ದಾರೆ. ನಗುತ್ತಲೇ ತಮ್ಮ ಮುನಿಸಿಗೆ ಕಾರಣಗಳನ್ನು ‘ಫ್ಯಾಂಟಸಿ’ ಚಿತ್ರೀಕರಣದ ಸೆಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಹಿರಿತೆರೆಯಲ್ಲೂ ಸಕತ್ ಮೆಚೂರ್ಡ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ?
ಮೆಚ್ಯೂರ್ಡೋ ಇನ್ನೋಸೆಂಟೋ ಅದು ಬೇರೆ ಮಾತು. ಆದರೆ, ನಾನು ನನ್ನ ವಯಸ್ಸಿಗೆ ಮೀರಿ ಪಾತ್ರಗಳನ್ನು ಮಾಡುವುದೇ ತಪ್ಪಾಗಿದೆ ಅನಿಸುತ್ತಿದೆ ನೋಡಿ!
ಫ್ಯಾಂಟಸಿ ಸಿನಿಮಾದಲ್ಲಿ ಬಿಗ್‌ಬಾಸ್ ಪ್ರಿಯಾಂಕ;ಹಿರಿತೆರೆಯಲ್ಲೂ ಅಗ್ನಿಸಾಕ್ಷಿ ಧಾರಾವಾಹಿ ವಿಲನ್ ಹವಾ
ಹೇಗೆ, ಯಾಕೆ?
ನೋಡಿ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಾನು ವಿಲನ್. ಅದು ನನ್ನ ವಯಸ್ಸಿಗೆ ಮೀರಿದ್ದು. ಆ ಧಾರಾವಾಹಿಯಲ್ಲಿ ನನ್ನ ಪಾತ್ರ ನೋಡಿದರು ತುಂಬಾ ಮೆಚ್ಚಿಕೊಂಡರು. ಪ್ರಬುದ್ಧವಾಗಿ ನಟಿಸುತ್ತೀರಿ ಎಂದು ಹೊಗಳಿದರು. ಈ ಪ್ರಬುದ್ಧ- ಮೆಚ್ಯೂರ್ಡ್ ಅನ್ನೋದು ಮುಂದೆ ನನ್ನ ಆಂಟಿ ಎನ್ನುವ ಮಟ್ಟಿಗೆ ಹೋಗಿದೆ. ಹೀಗಾಗಿ ನನ್ನ ಯಾರೂ ಆಂಟಿ ಅಂತ ಕರೆಯಬೇಡಿ. ನಾನು ದೊಡ್ಡ ವಯಸ್ಸಿನ ಮಹಿಳೆ ಎಂದುಕೊಳ್ಳಬೇಡಿ. ನಾನಿನ್ನೂ ಚಿಕ್ಕವಳು.
ಅಂದರೆ ನಿಮ್ಮನ್ನು ಎಲ್ರು ಅಂಟಿ ಅಂತಾರೆಯೇ?
ಅನ್ನೋದು ಏನು. ನನಗೆ ಆಂಟಿ ವಯಸ್ಸಾಗಿದೆ ಭಾವಿಸಿದ್ದಾರೆ. ಇಲ್ಲಪ್ಪ ನಾನು ಚಿಕ್ಕ ಹುಡುಗಿ ಅಂದ್ರೂ ಕೇಳಲ್ಲ. ಏನ್ ಮಾಡೋದು, ನಾನು ಮಾಡೋ ಪಾತ್ರ ನನ್ನ ವಯಸ್ಸು ಜಾಸ್ತಿ ಮಾಡಿಸಿದೆ.
ನಿಮ್ಮನ್ನು ಹಾಗೆ ಕರೆಯುತ್ತಾರೆ ಎಂದರೆ ಆ ಪಾತ್ರ ಪ್ರೇಕ್ಷಕರ ಮೇಲೆ ಆ ಮಟ್ಟಿಗೆ ಪ್ರಭಾವ ಬೀರಿದೆ ಎಂದರ್ಥವಲ್ಲವೇ?
ಆ ಕಾರಣಕ್ಕೆ ನನಗೂ ಖುಷಿ ಇದೆ. ಹಾಗಂತ ನನ್ನ ಒಂದೇ ರೀತಿಯ ಪಾತ್ರದಲ್ಲಿ ನೋಡಬೇಡಿ. ಕಲಾವಿದೆ ಎಂದ ಮೇಲೆ ಎಲ್ಲ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಆಸೆ. ನನಗೂ ಹಾಗೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ಕೊಡಿ.
ಬಿಗ್ ಬಾಸ್ ಮನೆ ಹೊರಗೂ ಭಲೇ ಜೋಡಿ, ಪ್ರಿಯಾಂಕಾ-ಕುರಿ ಎಲ್ಲೆಲ್ಲೂ ಮೋಡಿ!
ಸರಿ, ಯಾವ ರೀತಿಯ ಪಾತ್ರಗಳು ಸೂಕ್ತ ನಿಮಗೆ?
ಈಗ ನಾನು ‘ಅಗ್ನಿಸಾಕ್ಷಿ’ ನಂತರ ಒಪ್ಪಿಕೊಂಡಿರುವ ಈ ‘ಫ್ಯಾಂಟಸಿ’ ಚಿತ್ರದಲ್ಲೂ ನೆಗೆಟಿವ್ ಪಾತ್ರ ಮಾಡುತ್ತಿದ್ದೇನೆ. ನನ್ನ ಹೆಚ್ಚು ನೆಗೆಟಿವ್‌ಗೆ ಬ್ರಾಂಡ್ ಮಾಡುದು ಬೇಡ. ನಾನೂ ಕೂಡ ಗ್ಲಾಮರ್ ಪಾತ್ರ ಮಾಡಬಲ್ಲೆ. ನಟನೆಗೆ ಸ್ಕೋಪ್ ಇರುವ ಯಾವುದೇ ರೀತಿಯ ಪಾತ್ರ ನನಗೆ ಓಕೆ.
ಅಂದರೆ ‘ಫ್ಯಾಂಟಸಿ’ ಚಿತ್ರದಲ್ಲೂ ಖಳನಾಯಕಿನಾ?
ಈ ಚಿತ್ರದಲ್ಲಿ ನನ್ನದು ನೆಗೆಟಿವ್ ಪಾತ್ರ ನಿಜ. ಜತೆಗೆ ನನ್ನ ವಯಸ್ಸಿಗೆ ತಕ್ಕಂತಹ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಪವನ್ ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ರೂಪಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಕತೆಯೇ ಮುಖ್ಯ. ಆ ಕತೆಯಲ್ಲಿ ನಾನು ವಿಲನ್.
ಬಹುಬೇಗ ಶೂಟಿಂಗ್ ಮುಗಿಸಿದ್ದೀರಲ್ಲ?
ನಿರ್ದೇಶಕರು ಮಾಡಿಕೊಂಡಿದ್ದ ಪ್ಲಾನ್‌ಗೆ ಸಲ್ಲಬೇಕಾದ ಕ್ರೆಡಿಟ್ಟು. ಕೊರೋನಾ ಭಯ ಜನರಲ್ಲಿ ಹೋಗಿಲ್ಲ. ಆದರೂ ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಎಲ್ಲೂ ಯಾರಿಗೂ ಸಮಸ್ಯೆ ಆಗದಂತೆ ಶೂಟಿಂಗ್ ಮುಗಿಸಿದ್ದೇವೆ. ಇಷ್ಟುಬೇಗ ಶೂಟಿಂಗ್ ಮುಗಿಯಿತಾ ಎನ್ನಿಸುತ್ತಿದೆ.