ಎಲೆಕ್ಷನ್ ಭರಾಟೆ ಮಧ್ಯೆ ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಗ್ರಾಹಕರ ಮುಖದಲ್ಲಿ ಆನಂದ!
ಅತ್ತ ಬಿಹಾರ ಹಾಗೂ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ, ಇತ್ತ ಕರ್ನಾಟಕದ ವಿಧಾನ ಪರಿಷತ್ತು ಹಾಗೂ ಆರ್. ಆರ್. ನಗರ ಹಾಗೂ ಶಿರಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಹೀಗೆ ಇಂದು ಅನೇಕ ಮಂದಿಯ ಗಮನ ಯಾರು ಗೆಲ್ಲುತ್ತಾರೆ ಎಂಬುವುದರ ಮೇಲಿದೆ. ಈ ಭರಾಟೆ ಮಧ್ಯೆ ಏರಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ದಿಢೀರನೆ ಕುಯಸಿದಿದ್ದು, ಗ್ರಾಹಕರನ್ನು ಚಿನ್ನ ಖರೀದಿಸಲು ಪ್ರೇರೇಪಿಸಿದೆ. ಅಷ್ಟಕ್ಕೂ ಇಂದಿನ ದರವೇನು ಅನ್ನೋರಿಗೆ ಇಲ್ಲಿದೆ ನೋಡಿ ನ. 10ರ ಗೋಲ್ಡ್ ಹಾಗೂ ಸಿಲ್ವರ್ ರೇಟ್
ಹೌದು ದೇಶದಲ್ಲಿ ಕೊರೋನಾ ಅಬ್ಬರ ಆರಂಭವಾದಾಗಿನಿಂದ ಚಿನ್ನ ಪ್ರಿಯರಿಗೆ ಇದರ ಬೆಲೆಯಲ್ಲಾಗುತ್ತಿರುವ ಏರಿಳಿತ ಭಾರೀ ಆತಂಕ ಸೃಷ್ಟಿಸಿದೆ.
ಕೊರೋನಾ ಹಾವಳಿ ನಡುವೆ ಸಾರ್ವಕಾಲಿಕ ದಾಖಲೆ ಕಂಡಿದ್ದ ಚಿನ್ನದ ದರ ಬಳಿಕ ಕೊಂಚ ಇಳಿಕೆ ಕಂಡಿತ್ತಾದರೂ ತನ್ನ ಹಾವೇಣಿ ಆಟ ಮುಂದುವರೆಸಿ ಗ್ರಾಹಕರನ್ನು ಗೊಂದಲಕ್ಕೀಡು ಮಾಡಿತ್ತು.
ಚಿನ್ನದ ಈ ಆಟ ಮದುವೆ ಕಾರ್ಯಕ್ರಮ ಮೊದಲಾದವನ್ನು ನಿಗಧಿಗೊಳಿಸಿದ್ದವರನ್ನು ಭಾರೀ ಚಿಂತೆಗೆ ದೂಡಿತ್ತು. ಬೇರಾವುದೇ ಹಾದಿ ಕಾಣದ ಹಲವು ಮಂದಿ ಅನಿವಾರ್ಯತೆಯಿಂದ ಚಿನ್ನ ಖರೀದಿಸಿದ್ದರು.
ಕೊರೋನಾ ಮಧ್ಯೆ ಉದ್ಯಮ ನೆಲಕಚ್ಚಿದ ಪರಿಣಾಮ ಅನೇಕ ಮಂದಿ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದ್ದರು. ಹೀಗಾಗೇ ಚಿನ್ನದ ದರ ಭಾರೀ ಏರಿಕೆ ಕಂಡಿತ್ತು.
ಹೀಗಿರುವಾಗಲೇ ಅತ್ತ ಲಾಕ್‌ಡೌನ್‌ನಿಂದ ಅನೇಕ ಮಂದಿ ಕೆಲಸ ಕಳೆದುಕೊಂಡು ತಮ್ಮ ಊರು ಸೇರಿದ್ದು, ಉದ್ಯೋಗ ಕಳೆದುಕೊಂಡು ಭಾರೀ ಪರದಾಡಿದ್ದರು. ಇವೆಲ್ಲದರ ಪರಿಣಾಮ ಚಿನ್ನದ ದರ ಗಗನಕ್ಕೇರಿತ್ತು.
ಇಂತಹ ಪರಿಸ್ಥಿತಿಯಲ್ಲಿ ಸದ್ಯ ಇಂದು ನ. 10ರಂದು ಚಿನ್ನದ ದರ ಗ್ರಾಹಕರನ್ನು ಸಂತಸಕ್ಕೀಡು ಮಾಡಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ 1,500 ರೂ. ಕುಸಿದು 47,100 ರೂಪಾಯಿ ಆಗಿದೆ.
ಇನ್ನು ಇತ್ತ 24 ಕ್ಯಾರೆಟ್ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.10 ಗ್ರಾಂ ಚಿನ್ನದ ದರದಲ್ಲೂ 53,020 ರೂಪಾಯಿ ಆಗಿದೆ.
ಬೆಳ್ಳಿ ದದಲ್ಲೂ ಯಾವುದೇ ಬದಲಾವಣೆಯಾಗದೆ ಒಂದು ಕೆ. ಜಿ. ಬೆಳ್ಳಿ ದರ 66,900ರೂ ಆಗಿದೆ.
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ
ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ