ಎಚ್ಚರ... 1 ವರ್ಷದೊಳಗಿನ ಮಗುವಿಗೆ ಹಸುವಿನ ಹಾಲು ಕೊಟ್ಟರೆ ಅಪಾಯ ತಪ್ಪಿದ್ದಲ್ಲ!
ಪುಟ್ಟ ಕಂದಮ್ಮನಿಗೆ ಪ್ಯಾಕೆಟ್ ಹಸುವಿನ ಹಾಲು ಕೊಡುವ ಮುನ್ನ 10 ಸಲ ಯೋಚಿಸಬೇಕು.....ವೈದ್ಯರ ಸಲಹೆ ಕೇಳಬೇಕು......
ಎರಡು ಮೂರು ವರ್ಷಗಳ ಕಾಲ ಪುಟ್ಟ ಮಕ್ಕಳಿಗೆ ತಾಯಿಯ ಎದೆ ಹಾಲು ತುಂಬಾನೇ ಮುಖ್ಯವಾಗುತ್ತದೆ. ಎದೆ ಹಾಲು ಸಾಕಾಗದಿದ್ದರೆ ಕೆಲವು ವೈದ್ಯರ ಸಲಹೆ ಮೇಲೆ ಫಾರ್ಮುಲಾ ಹಾಲನ್ನು ಬಳಸುತ್ತಾರೆ.
ಫಾರ್ಮುಲಾ ಹಾಲಿನ ಬಗ್ಗೆ ಹೆಚ್ಚಿನ ಅರಿವು ಇಲ್ಲದವರು ಹಸುವಿನ ಪ್ಯಾಕೆಟ್ ಹಾಲು ಕೊಡಲು ಆರಂಭಿಸುತ್ತಾರೆ. ಒಂದು ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲು ಕೊಡಬಾರದು ಎಂದು ವೈದ್ಯರು ಸೂಚಿಸುತ್ತಾರೆ.
ಮಕ್ಕಳಿಗೆ ವಿಟಮಿಡ್ ಡಿ ಮತ್ತು ಕ್ಯಾಲ್ಸಿಯಂ ಜೀವಸತ್ವಗಳು ಸಿಗುವುದು ಹಾಲಿನಲ್ಲಿ. ಆದರೆ ಹಸುವಿನ ಹಾಲನ್ನು ಶಿಶುಗಳು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ ಅದರಲ್ಲೂ ಒಂದು ವರ್ಷದೊಳಗಿನ ಮಕ್ಕಳಿಗೆ ಹಸುವಿನ ಹಾಲು ಸೂಕ್ತವಲ್ಲ.
ಹಸುವಿನ ಹಾಲು ಕೊಡುವುದರಿಂದ ಮಗುವಿಗೆ ಕರಳಿನಲ್ಲಿ ರಕ್ತಸ್ರಾವದ ಅಪಾಯ ಉಂಟು ಮಾಡಬಹುದು. ಹೆಚ್ಚಾಗಿ ಮೂತ್ರಪಿಂಡಗಳಿಗೆ ಒತ್ತಡ ಹೇರುತ್ತದೆ.
ಒಂದು ವೇಳೆ ಶಿಶುವಿಗೆ ಹಸುವಿನ ಹಾಲು ಹಿಡಿಸಿಲ್ಲ ಅಂದರೆ ಸೂಚನೆಗಳಾಗಿ ವಾಕರಿಕೆ, ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ಟ್ರಿಕ್ ಕಾಣಿಸಿಕೊಳ್ಳುತ್ತದೆ.
ಮಕ್ಕಳು ಓಡಾಡಲು ಅಥವಾ ಆಟಗಳಲ್ಲಿ ತೊಡಗಿಸಿಕೊಳ್ಳಲು ಶುರು ಮಾಡಿದಾಗ ಹಸುವಿನ ಹಾಲು ಕೊಟ್ಟರೆ ಸುಲಭವಾಗಿ ಜೀರ್ಣ ಮಾಡಿಕೊಳ್ಳುತ್ತದೆ. ಮಕ್ಕಳಿಗೆ ರುಚಿಯಿಲ್ಲದ, ಸಿಹಿಗೊಳಿಸದ ಹಸುವಿನ ಹಾಲನ್ನು ಕಡಿಯಲು ಕೊಡಬಹುದು.
ಮನೆಯಲ್ಲಿ ಹಸು ಅಥವಾ ಮೇಕೆ ಸಾಕಿರುವವರು ಹಸಿಯಾಗಿರುವ ಹಾಲನ್ನು ಕುಡಿಲು ಕೊಡುತ್ತಾರೆ. ಹಸಿ ಹಾಲಿನಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳು ಇರುತ್ತದೆ. ಇದರಿಂದ ಮಕ್ಕಳಿಗೆ ಅನಾರೋಗ್ಯ ಉಂಟು ಮಾಡಬಹುದು.