ತುಮಕೂರು, (ನ.10):  ರಾಜರಾಜೇಶ್ವರಿನಗರದಲ್ಲಿ ಗೆದ್ದ ಬೆನ್ನಲ್ಲೇ ಶಿರಾ ಉಪ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಆರಂಭದಿಂದಲೂ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಅವರ ಅಲ್ಪ ಮತಗಳ ಮುನ್ನಡೆ ಸಾಧಿಸುತ್ತಾ ಬಂದರು. ಮ್ತೊಂದೆಡೆ ಕೆಲ ಸುತ್ತಿನಲ್ಲಿ ಕಾಂಗ್ರೆಸ್ ಟಿಬಿ ಜಯಚಂದ್ರ ಅವರೂ ಸಹ ಫುಲ್ ಫೈಟ್ ನೀಡಿದರು.

RR ನಗರದಲ್ಲಿ ಗೆಲುವು ಸಾಧಿಸಿದ ಮುನಿರತ್ನ: ಕಾಂಗ್ರೆಸ್ ತಂತ್ರಗಳು ಉಲ್ಟಾ..!

 ಹಣಾಹಣಿಯ ನಡುವೆಯೂ ಕೊನೆಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಗೆದ್ದು ಬೀಗಿದರು.  ಈ ಮೂಲಕ  ಶಿರಾದಲ್ಲಿ ಇದೇ ಬಿಜೆಪಿ ಗೆದ್ದು ಇತಿಹಾಸ  ನಿರ್ಮಿಸಿದೆ.

ವಿಜಯೇಂದ್ರನ ತಂತ್ರಗಾರಿಗೆ 
ಹೌದು...ಉಪಚುನಾವಣೆಯ ಸ್ಟಾರ್ ನಾಯಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಂಡ್ಯದ ಕೆ.ಆರ್.ಪೇಟೆ ಗೆಲುವಿನಂತೆಯೇ  ಶಿರಾ ವಿಧಾನಸಭಾ ಉಪಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 20ದಿನಗಳಿಂದ ಶಿರಾ ಕ್ಷೇತ್ರದಲ್ಲಿ ಮೊಕ್ಕಂ ಹೂಡಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕ್ಷೇತ್ರದಾದ್ಯಂತ ಸುತ್ತಾಡಿ ಬೂತ್ ಮಟ್ಟದಿಂದ ಪಕ್ಷವನ್ನ ಸಂಘಟಿಸಿದರು.ಅಲ್ಲದೇ ವಿವಿಧ ಜಾತಿಯ ಮಠಾಧೀಶರನ್ನ ಭೇಟಿ ಸೇರಿದಂತೆ ಹಲವು ಕಾರ್ಯತಂತ್ರಗಳನ್ನ ಹೆಣೆದು ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರನ್ನ ಗೆಲ್ಲಿಸಿಕೊಂಡು ಬಂದಿದ್ದಾರೆ.