ರೇಣುಕಾಸ್ವಾಮಿ ಕಿಡ್ನಾಪ್ ಆಗಿಯೇ ಇಲ್ಲ, ದರ್ಶನ್ ಕೃತ್ಯದಲ್ಲಿ ಭಾಗಿಯಾಗಿಲ್ಲ; ವಕೀಲ ಸಿ.ವಿ. ನಾಗೇಶ್ ವಾದ
ನಟ ದರ್ಶನ್ ತೂಗುದೀಪ ಹಾಗೂ ಅವರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ. ರೇಣುಕಾಸ್ವಾಮಿ ಸ್ವ-ಇಚ್ಛೆಯಿಂದ ಬಂದಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಕಿಡ್ನಾಪ್ ಆಗಿಲ್ಲ ಎಂಬುದಕ್ಕೆ ಸಾಕ್ಷಿಗಳನ್ನು ಮಂಡಿಸಿದ್ದಾರೆ.
ಬೆಂಗಳೂರು (ನ.26): ನಟ ದರ್ಶನ ತೂಗುದೀಪ ಹಾಗೂ ಅವರ ಗ್ಯಾಂಗ್‌ನಿಂದ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಯೇ ಇಲ್ಲ. ಇಲ್ಲಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಕೆ ಮಾಡುವಾಗ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಥಳಿಸಿ ಕೊಲೆ ಮಾಡಲಾಗಿದೆ ಎಂದು ನಟ ದರ್ಶನ್ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.
ನಟ ದರ್ಶನ್ ತೂಗುದೀಪ, ನಟಿ ಪವಿತ್ರಾಗೌಡ ಸೇರಿದಂತೆ 6 ಜನರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್‌ನಲ್ಲಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡನೆ ಆರಂಭಿಸಿ ರೇಣುಕಾಸ್ವಾಮಿ ಕಿಡ್ನಾಪ್ ಮಾಡುವುದರಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಕಿಡ್ನಾಪ್ ಆಗಬೇಕಾದರೆ ಕಾನೂನು ಬದ್ದ ಪೋಷಕರಿಂದ ಕರೆದೊಯ್ಯುವುದು. ಅಥವಾ ವಿದೇಶಕ್ಕೆ ಕರೆದೊಯ್ದು ಒತ್ತೆಯಾಳಾಗಿ ಇಡುವುದು. ಆದರೆ, ಈ ಕೇಸಲ್ಲಿ ಇದ್ಯಾವುದು ನಡೆದಿಲ್ಲ. ಹೀಗಾಗಿ ಕಿಡ್ನಾಪ್ ಮಾಡಿಲ್ಲ, ಆತನ ಕರೆದೊಯ್ಯಲು ಯಾವುದೇ ಬಲಪ್ರಯೋಗ ಇಲ್ಲ. ರೇಣುಕಾಸ್ವಾಮಿ ಕರೆದುಕೊಂಡು ಬಂದಾಗ ಯಾವುದೇ ಬಲಪ್ರಯೋಗ ಮಾಡಿಲ್ಲ. ರೇಣುಕಾಸ್ವಾಮಿ ಸ್ವ-ಇಚ್ಛೆಯಿಂದ ಬಂದಿದ್ದಾನೆ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಹೇಳಿಕೆ ಆಧರಿಸಿ ವಾದ ಮಂಡಿಸುತ್ತಾ, ಜೂನ್ 8 ರಂದು ಬೆಳಗ್ಗೆ 8.30ಕ್ಕೆ ಕೆಲಸಕ್ಕೆ ಹೋಗಿದ್ದಾನೆ. ಮಧ್ಯಾಹ್ನ ಊಟಕ್ಕೆ ಬರದಿದ್ದಾಗ ಆತನ ತಾಯಿ ಕರೆಮಾಡಿದಾಗ ಸ್ನೇಹಿತರ ಜೊತೆ ಊಟಕ್ಕೆ ಹೊರಗೆ ಹೋಗಿದ್ದು ಸಂಜೆ ಬರುವುದಾಗಿ ಹೇಳಿದ್ದಾನೆ. ಪ್ರತಿನಿತ್ಯದಂತೆ ಫಾರ್ಮಸಿ ಯೂನಿಫಾರ್ಮ್ ಧರಿಸದೇ ಹೋಗಿದ್ದನು. ಇದನ್ನ ನೋಡಿದರೆ ಕಿಡ್ನಾಪ್ ಮಾಡಿಲ್ಲ ಅನ್ನೋದು ಗೊತ್ತಾಗತ್ತದೆ. ಇನ್ನು ಚಿತ್ರದುರ್ಗ ದಿಂದ ಬರುವಾಗ ಮಾರ್ಗ ಮಧ್ಯೆಯ ದುರ್ಗಾ ಬಾರ್ ರೆಸ್ಟೋರೆಂಟ್ ಮ್ಯಾನೇಜರ್ ಹೇಳಿಕೆ ಪಡೆಯಲಾಗಿದೆ.
ಇದನ್ನೂ ಓದಿ: ಬಾಗಲಕೋಟೆ ಹೇರ್ ಡ್ರೈಯರ್ ಸ್ಫೋಟ: ಮಹಿಳೆ ಕೈ ಕಳೆದುಕೊಂಡ ಕೇಸಲ್ಲಿ ಎರಡೆರಡು ಟ್ವಿಸ್ಟ್
ಬಾರ್ ಮ್ಯಾನೇಜರ್ ಮಂಜುನಾಥ್ ಅವರಿಂದ ಹೇಳಿಕೆ ದಾಖಲಿಸಲಾಗಿದೆ. ಜೂನ್ 19 ರಂದು ಕಾಮಾಕ್ಷಿಪಾಳ್ಯ ಪಿಎಸ್ಐ ಅವರಿಂದ ಬಾರ್ ನಲ್ಲಿ ತನಿಖೆ ಮಾಡಲಾಗಿದೆ. ಜೂನ್ 8 ಬೆಳಗ್ಗೆ 11.30ಕ್ಕೆ ನಾಲ್ಕು ಜನ ಮದ್ಯ ಖರಿದಿ ಮಾಡಿದ್ದು ರೇಣುಕಾಸ್ವಾಮಿ 640 ರೂ. ಪೋನ್ ಮಾಡಿರುತ್ತಾರೆ. ಮ್ಯಾನೆಜರ್ ಮಂಜುನಾಥ್ ಸಿಸಿಟಿವಿ ನೋಡಿ ಹೇಳಿಕೆ ನೀಡಿದ್ದಾನೆ. ಇಲ್ಲಿ ಕಿಡ್ನಾಪ್ ಮಾಡಿದ್ದರೆ ಬಾರ್ ಗೆ ಬಂದು ಪೋನ್ ಪೇ ಮಾಡಲು ಸಾಧ್ಯವೇ? ಎಂದು ವಾದ ಮಂಡಿಸಿದ್ದಾರೆ.
ರೇಣುಕಾಸ್ವಾಮಿ ಅವರ ತಂದೆ, ತಾಯಿ ಹಾಗೂ ಬಾರ್ ಮೇನೇಜರ್ ಹೇಳಿಕೆಯಲ್ಲಿ ಎಲ್ಲಿಯೂ ಕಿಡ್ನಾಪ್ ಎಂದು ಹೇಳಿಲ್ಲ. ಇದೇಲ್ಲಾ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿಯೇ ಇರುವ ಮಾಹಿತಿ ಅಷ್ಟೇ. ಮುಂದೆ ಏನಾಯ್ತೋ, ಆದರೆ ಅವರಿಗೆ ಕಿಡ್ನಾಪ್ ಮತ್ತು ಮುಂದಿನ ಯಾವುದೇ ಉದ್ದೇಶ ಇರಲಿಲ್ಲ. ಮೃತದೇಹವನ್ನ ಒಂದು ಕಡೆಯಿಂದ ಮತ್ತೊಂದು ಕಡೆ ಶಿಫ್ಟ್ ಮಾಡುವುದು ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಒಂದು ವೇಳೆ ದೇಹವನ್ನು ಹೂತು ಹಾಕಿದ್ದರೆ, ಸುಟ್ಟು ಹಾಕಿದ್ದರೆ ಅಥವಾ ಬಚ್ಚಿಟ್ಟಿದ್ದರೆ ಮಾತ್ರ ಸಾಕ್ಷಿ ನಾಶ ಆಗುತ್ತದೆ. ಇಲ್ಲಿ ಯಾವುದೇ ಸಾಕ್ಷಿ ನಾಶ ಆಗಿಲ್ಲ ಎಂದು ವಾದ ಮಂಡನೆ ಮಾಡಿದ್ದಾರೆ. ಈ ಮೂಲಕ ಅಪರಾಧದಲ್ಲಿ ದರ್ಶನ್ ಕೈವಾಡ ಕಡಿಮೆ ಇದೆ ಎಂಬುದನ್ನು ಸಾಬೀತುಪಡಿಸಿ ಜಾಮೀನಿನ ಮೇಲೆ ಹೊರಗೆ ಕರೆತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 'ಮಕ್ಕಳ ಕತ್ತು ಹಿಸುಕುವಾಗಲೂ ಮನಸ್ಸು ಕರಗಲಿಲ್ಲವಾ..' ಗಂಡನ ಮೇಲಿನ ಅನುಮಾನಕ್ಕೆ ಮಕ್ಕಳನ್ನು ಕೊಂದ ಪಾಪಿ ತಾಯಿ!