
ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!

ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್‌ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕ್ಯಾತೆ ತೆಗೆದಿದ್ದಾರೆ!
ಕೆಆರ್ ನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದ ವಿಜಯೇಂದ್ರ, ಇದೀಗ ಶಿರಾದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಹೆಚ್ಚಾಗಿದೆ ಅವರ ಡಿಮ್ಯಾಂಡ್

ಕುಸುಮಾ ಹೇಳಿಕೆ
ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ನಾನು ಜೀವನದಲ್ಲೇ ಸೋತಿದ್ದವಳು. ಈಗ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದೆ ಕ್ಷೇತ್ರದ ಜನರ ಜೊತೆ ಇದ್ದು ಕೆಲಸ ಮಾಡುತ್ತೇನೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿರುತ್ತೇನೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಪತಿ ಪ್ರಸಾದಿ ನೀಡಿ, ಕಾಲು ಮುಟ್ಟಿ ನಮಸ್ಕರಿಸಿ ಆಶಿರ್ವಾದ ಪಡೆದ ರಾರಾ ನಗರ ಶಾಸಕ ಮುನಿರತ್ನ."

ಶಿರಾದಲ್ಲಿ ಬಿಜೆಪಿ ಬಹುತೇಕ ಗೆಲುವು ಖಚಿತ. 20ನೇ ಸುತ್ತಿನ ಮತ ಎಣಿಕೆ ಮುಕ್ತಾಯ. 10,380 ಮತಗಳ ಅಂತರ ದಿಂದ ಬಿಜೆಪಿ ಮುನ್ನಡೆ..
ಬಿಜೆಪಿ ರಾಜೇಶ್ ಗೌಡ- 63,294
ಕಾಂಗ್ರೆಸ್ ಜಯಚಂದ್ರ- 52,914
ಜೆಡಿಎಸ್ ಅಮ್ಮಾಜಮ್ಮ- 29166
ಮುನಿರತ್ನ ಹೇಳಿಕೆ
ಕೈಮುಗಿದು ಹೇಳುತ್ತೇನೆ, ಇಡೀ ಕ್ಷೇತ್ರ ಅಭಿವೃದ್ದಿ ಆಗಬೇಕು. ಇನ್ನಷ್ಟು ಅಭಿವೃದ್ದಿ ಮಾಡುವ ಗುರಿ. ಸಿಎಂ ನನ್ನ ಮೇಲೆ ಇಟ್ಟಿರೋ ಭರವಸೆ ಉಳಿಸಿಕೊಳ್ತೀನಿ
ದಿನಕ್ಕೆ 22 ಗಂಟೆ ಕೆಲ್ಸ ಮಾಡ್ತೀನಿ, ಕಳೆದ ಬಾರಿಗಿಂತ ಹೆಚ್ಚು ಲೀಡ್ ಬಂದಿದೆ.
ಮತದಾರರು ನನ್ನ ಮೇಲೆ ಇಟ್ಟಿರೋ ನಂಬಿಕೆ. ಮತದಾರರ ಖುಣ ತೀರಿಸಲು ಸಾಧ್ಯವಿಲ್ಲ. ಗೆಲುವಿಗೆ ಪಕ್ಷ, ಮುಖಂಡರು ಕಾರಣಗೆಲುವನ್ನ ಪಕ್ಷದ ಮುಖಂಡರಿಗೆ ಅರ್ಪಣೆ.
ಪ್ರತಿಸ್ಪರ್ಧಿಗೆ ಸತ್ಯ ಮಾತನಾಡುವಂತೆ ಮನವಿ ಮಾಡ್ತೀನಿ. ನಾನು ಬಳಸದ ಪದ ಹೇಳಿದ್ದೀನಿ ಅಂತ ಅವ್ರು ಹೇಳಿದ್ದೀರಿ. ನನ್ನ ಜೀವನದಲ್ಲಿ ನಾನು ಯಾವ ಹೆಣ್ಣು ಮಗಳಿಗೂ ಮುಂಡೆ ಅಂತ ಹೇಳಲ್ಲ.
