Asianet Suvarna News Asianet Suvarna News

ರಾಹುಲ್‌ಗೆ ಟ್ವೀಟ್ ಸಂಕಷ್ಟ, ಟೀಂ ಇಂಡಿಯಾ ಕ್ರಿಕೆಟಿಗನಿಗೆ ಸಿನ್ಮಾ ಅವಕಾಶ; ಅ.28ರ ಟಾಪ್ 10 ಸುದ್ದಿ!

ಬಿಹಾರ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಮಾಡಿದ ಟ್ವೀಟ್ ಇದೀಗ ಸಂಕಷ್ಟ ತಂದೊಡ್ಡಿದೆ.  ಬಿಜೆಪಿ ಬರಲು  ಕಾಂಗ್ರೆಸ್‌ನ ಐವರು ಶಾಸಕರು ಸಜ್ಜಾಗಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಇದೀಗ ಸಿನಿಮಾ ಲೋಕಕ್ಕೆ ಕಾಲಿಡುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ಬಂಧನಕ್ಕೊಳಗಾಗಿದ್ದಾರೆ. ದೀಪಿಕಾ ಪಡುಕೋಣೆ ಮ್ಯಾನೇಜರ್ ಮನೆಯಲ್ಲಿ ಸಿಕ್ತು ಗಾಂಜಾ ಎಣ್ಣೆ, ನವರಾತ್ರಿ ಹಬ್ಬದಲ್ಲಿ ದಾಖಲೆ ಕಾರು ಮಾರಾಟ ಸೇರಿದಂತೆ ಅಕ್ಟೋಬರ್ 28 ರ ಟಾಪ್ 10 ಸುದ್ದಿ ವಿವರ ಇಲ್ಲಿವೆ

Rahul Gandhi tweet to Team India top 10 News of october 28 ckm
Author
Bengaluru, First Published Oct 28, 2020, 5:08 PM IST

ನೆರೆ ರಾಷ್ಟ್ರಗಳು ಭಾರತವನ್ನು ನಂಬುತ್ತೆ, ಚೀನಾವನ್ನಲ್ಲ: ನಿತಿನ್ ಗಡ್ಕರಿ...

Rahul Gandhi tweet to Team India top 10 News of october 28 ckm

ಭಾರತದ ಸಂಸ್ಕೃತಿ ಮತ್ತು ಹಿಂದೂ ಸಂಸ್ಕೃತಿ ದೇಶ ಮತ್ತಷ್ಟು ವಿಸ್ತಾರ ಮಾಡಿಕೊಳ್ಳೋ ಸಂಸ್ಕೃತಿ ಅಲ್ಲ. ನೆರೆಯ ರಾಷ್ಟ್ರಗಳಿಗೆ ಭಾರತ ಎಂದೂ ಬೆದರಿಸಲ್ಲ, ಅವುಗಳು ಬೆದರಿಕೆ ಎದಿರಿಸಿಲ್ಲ. ಆದರೆ ನೆರೆ ರಾಷ್ಟ್ರಗಳಿಗೆ ಚೀನಾ ಬಗ್ಗೆ ಈ ಭಾವನೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮದುವೆ, ಮತಾಂತರಕ್ಕೆ ಒತ್ತಾಯ: ಹಿಂದು ಯುವತಿಯನ್ನು ಗುಂಡಿಕ್ಕಿ ಕೊಂದ ಮುಸ್ಲಿಂ ಯುವಕ...

Rahul Gandhi tweet to Team India top 10 News of october 28 ckm

21 ವರ್ಷದ ಯುವತಿಯನ್ನು ಕಾಲೇಜು ಮುಂಭಾಗದಲ್ಲಿಯೇ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ಘಟನೆ ನಡೆದಿದ್ದು, ಯುವತಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳುವಾಗ ವಿರೋಧಿಸಿದವಳ ಮೇಲೆ ಶೂಟ್ ಮಾಡಲಾಗಿದೆ.

ಬಿಹಾರ ಚುನಾವಣೆ: ಟ್ವೀಟ್ ಮಾಡಿದ ರಾಹುಲ್‌ ಗಾಂಧಿಗೆ ಹೊಸ ಸಂಕಷ್ಟ!...

Rahul Gandhi tweet to Team India top 10 News of october 28 ckm

ಬಿಹಾರದಲ್ಲಿ 71 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆದರೀಗ ಅದಕ್ಕೂ ಮುನ್ನ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಮಾಡಿ, ಬಿಹಾರ ಜನರ ಬಳಿ ಮತ ನಿಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಾದ ಬಳಿಕ ಬಿಜೆಪಿ ಅವರ ವಿರುದ್ಧ ಕಿಡಿ ಕಾರಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರಿದೆ.

'ಕಾಂಗ್ರೆಸ್‌ ಐವರು ಶಾಸಕರು ಬಿಜೆಪಿಗೆ ಬರೋದು ಫಿಕ್ಸ್? ಕಮಲಕ್ಕೆ ಮತ್ತಿಬ್ಬರು ಹೊಸ ಶಾಸಕರು'...

Rahul Gandhi tweet to Team India top 10 News of october 28 ckm

ಐವರು ಕಾಂಗ್ರೆಸ್‌ ಶಾಸಕರು ಬಿಜೆಪಿ ಬರುತ್ತಾರೆಂಬ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರಿಗೆ ಈ ಬಗ್ಗೆ ಮಾಹಿತಿ ಇರುತ್ತದೆ ಎಂದರು. 

ಬಣ್ಣದ ಲೋಕಕ್ಕೆ ಕ್ರಿಕೆಟರ್‌ ಇರ್ಫಾನ್‌; 'ಕೋಬ್ರಾ'ದಲ್ಲಿ ಇಂಟರ್‌ಪೋಲ್ ಆಫೀಸರ್!...

Rahul Gandhi tweet to Team India top 10 News of october 28 ckm

ತಮಿಳು ನಿರ್ದೇಶಕ  ಅಜಯ್ ಜ್ಞಾನಮುತ್ತು ಅವರು ಇರ್ಫಾನ್ ಪಠಾಣ್ 36ನೇ ಹುಟ್ಟು ಹಬ್ಬದ ಪ್ರಯುಕ್ತ ನಿರ್ದೇಶಕ ಸರ್ಪ್ರೈಸ್‌ವೊಂದನ್ನು ರಿವೀಲ್ ಮಾಡಿದ್ದಾರೆ.  ಅದುವೇ ತಮ್ಮ ಮುಂದಿನ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಇಂಟರ್‌ಪೋಲ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿರುವುದು.

ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ಬಂಧನ!...

Rahul Gandhi tweet to Team India top 10 News of october 28 ckm

ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ...

Rahul Gandhi tweet to Team India top 10 News of october 28 ckm

ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿರುವ ರಿಯಲ್‌ಮೀ ಸಿ17 ಫೋನ್ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಭಾರತದಲ್ಲಿ ಸಿಗಲಿದೆ

ದಕ್ಷಿಣ ಭಾರತದ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸಿದ್ದಾರೆ ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ..!...

Rahul Gandhi tweet to Team India top 10 News of october 28 ckm

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ ಕೋಲ್ಕತ ನೈಟ್‌ ರೈಡರ್ಸ್ ಸ್ಪಿನ್ನರ್ ವರಣ್ ಚಕ್ರವರ್ತಿ. ಚೆನ್ನೈ ಮೂಲದ ಮಾಂತ್ರಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಮಿಂಚಿನ ಪ್ರದರ್ಶನಕ್ಕೆ ಮನಸೋತಿರುವ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೇ ವರುಣ್ ಚಕ್ರವರ್ತಿ ಈ ಹಿಂದೆ ಸಿನಿಮಾವೊಂದರಲ್ಲಿ ನಟಿಸಿದ್ದರು ಎನ್ನುವುದು ಸಾಕಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.

ಭಾರತೀಯ ಆಟೋಮೊಬೈಲ್‌ಗೆ ನಗು ತಂದ ನವರಾತ್ರಿ, 9 ದಿನದಲ್ಲಿ ದಾಖಲೆ ಕಾರು ಮಾರಾಟ!...

Rahul Gandhi tweet to Team India top 10 News of october 28 ckm

ಕೊರೋನಾ ವೈರಸ್ ಕಾರಣ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಭಾರತೀಯ ಆಟೋ ಇಂಡಸ್ಟ್ರಿಗೆ ನವರಾತ್ರಿ ಹಬ್ಬ ಸಿಹಿ ನೀಡಿದೆ.  10 ದಿನದ ಹಬ್ಬ ಕಾರು ಮಾರಟದ ಗಣನೀಯ ಏರಿಕೆ ಮಾಡಿದೆ. ನಷ್ಟದಿಂದ ಸೊರಗಿದ್ದ ಕಂಪನಿಗಳು ಇದೀಗ ಚೇತರಿಸಿಕೊಳ್ಳುತ್ತಿದೆ. ಈ ನವರಾತ್ರಿ ಹಬ್ಬದ ದಿನಗಳಲ್ಲಿ ಭಾರತದಲ್ಲಿ ಮಾರಾಟವಾದ ಕಾರುಗಳ ವಿವರ ಇಲ್ಲಿವೆ.

ಡ್ರಗ್ಸ್ ಘಾಟು: ದೀಪಿಕಾ ಮ್ಯಾನೇಜರ್ ಮನೆಯಲ್ಲಿ ಸಿಕ್ತು ಗಾಂಜಾ ಎಣ್ಣೆ...

Rahul Gandhi tweet to Team India top 10 News of october 28 ckm

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಮನೆಯಲ್ಲಿ ಚರಸ್ ಹಗೂ ಗಾಂಜಾ ತೈಲ ಸಿಕ್ಕಿದೆ.

Follow Us:
Download App:
  • android
  • ios