ಬಡವರಿಗೆ ಅರ್ಹವಾಗಿ ಸಿಗಬೇಕಾಗಿದ್ದ ಮೀಸಲಾತಿಯನ್ನ ಮುಸ್ಲಿಮರಿಗೆ ನೀಡಬೇಕೆನ್ನುವ ಹಾಗೂ ಪಿತ್ರಾರ್ಜಿತ ತೆರಿಗೆಯ ಕಾಂಗ್ರೆಸ್‌ ಅಜೆಂಡಾವನ್ನು ಎಲ್ಲೆಡೆ ತಿಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ನವದೆಹಲಿ (ಏ.30): ಮೂರನೇ ಹಂತದ ಚುನಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಂಬಾ ಗಂಭೀರವಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಅಜೆಂಡಾವಾಗಿರುವ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವುದು ಹಾಗೂ ಪಿತ್ರಾರ್ಜಿತ ತೆರಿಗೆ ವಿಚಾರವನ್ನು ಸಾರ್ವಜನಿಕರಿಗೆ ಅರ್ಥವಾಗುವಂತೆ ತಿಳಿಸಿ. ಕಾಂಗ್ರೆಸ್‌ನ ಈ ಅಜೆಂಡಾ ಬಗ್ಗೆ ಸಾಮಾನ್ಯ ಜನರಿಗೆ ಎಚ್ಚರಿಕೆ ನೀಡಿ ಎಂದು ತಮ್ಮ ಅಭ್ಯರ್ಥಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ವಿಶೇಷವೆಂದರೆ, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ನ ಪಿತ್ರಾರ್ಜಿತ ತೆರಿಗೆ ಅಜೆಂಡಾವನ್ನು ಸಾರ್ವಜನಿಕರಿಗೆ ತಿಳಿಸುವಂತೆ ಪ್ರಧಾನಿ ಮೋದಿ ಅನೇಕ ದೊಡ್ಡ ನಾಯಕರಿಗೆ ವೈಯಕ್ತಿಕ ಪತ್ರವನ್ನು ನೀಡಿದ್ದಾರೆ. ಕಾಂಗ್ರೆಸ್‌ನ ಅಪಾಯಕಾರಿ ವಿಚಾರಗಳನ್ನು ದೇಶದ ಜನತೆಯ ಮುಂದಿಡಬೇಕು ಎನ್ನುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಲೋಕಸಭೆ ಚುನಾವಣೆಯ ಮೂರನೇ ಹಂತದ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದಾರೆ. 

ಈ ಪತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ನಿರ್ದಿಷ್ಟ ವಿಷಯದ ಕುರಿತು ಸಾರ್ವಜನಿಕರ ಮಧ್ಯೆ ತೆರಳಿ ಪ್ರಚಾರ ಮಾಡಬೇಕು. ಪ್ರಧಾನಿ ಮೋದಿ ಅವರು ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದಿದ್ದು, ಮೂರನೇ ಹಂತದ ಪ್ರಚಾರದ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ. ಇದರೊಂದಿಗೆ ಪ್ರಧಾನಿ ಮೋದಿ ಅವರು ಅಮಿತ್ ಶಾ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಚುನಾವಣಾ ಪ್ರಚಾರದ ಹೊಸ ತಂತ್ರವನ್ನು ವಿವರಿಸಿದ್ದಾರೆ.

ಕಾಂಗ್ರೆಸ್ ಎಸ್‌ಸಿ/ಎಸ್‌ಟಿ/ಒಬಿಸಿಯಿಂದ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುವ ಇರಾದೆಯಲ್ಲಿದೆ. ಮುಸ್ಲಿಮರಿಗೆ ಮೀಸಲಾತಿ ನೀಡುವ ಸಲುವಾಗಿ ಬಡ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿ ತೆಗೆಯುವ ಕಾಂಗ್ರೆಸ್‌ನ ಉದ್ದೇಶದ ಬಗ್ಗೆ ವಿಶೇಷವಾಗಿ ಸಾರ್ವಜನಿಕರಿಗೆ ತಿಳಿಸುವಂತೆ ಪ್ರಧಾನಿಯವರ ಪತ್ರದಲ್ಲಿ ಅಭ್ಯರ್ಥಿಗಳಿಗೆ ಒತ್ತಾಯಿಸಿದ್ದಾರೆ. ಅಂದರೆ ದೀನ ದಲಿತರಿಗೆ ಬದಲಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಬಯಸುತ್ತದೆ ಎಂದು ತಿಳಿಸಿದ್ದಾರೆ.

'ನಮ್ಮ ಅಭಿಪ್ರಾಯಕ್ಕೂ ಮೋದಿ ಪ್ರಾಮುಖ್ಯತೆ ನೀಡ್ತಿದ್ರು..' ಗುಜರಾತ್‌ ವಿರೋಧ ಪಕ್ಷದ ಮಾಜಿ ನಾಯಕನ ಮಾತು ವೈರಲ್‌!

ಎಲ್ಲಾ ಅಭ್ಯರ್ಥಿಗಳು ಪ್ರಚಾರದ ಸಮಯದಲ್ಲಿ ಕಾಂಗ್ರೆಸ್‌ನ ಪಿತ್ರಾರ್ಜಿತ ತೆರಿಗೆಯ ಅಜೆಂಡಾವನ್ನು ಮಹತ್ವವಾಗಿ ತಿಳಿಸಬೇಕು ಎಂದು ಪ್ರಧಾನಿ ಮೋದಿಯವರ ಪತ್ರದಲ್ಲಿ ಹೇಳಲಾಗಿದೆ. ಪಿತ್ರಾರ್ಜಿತ ತೆರಿಗೆಯನ್ನು ಪರಿಚಯಿಸುವ ಮೂಲಕ ಕಾಂಗ್ರೆಸ್ ಪಕ್ಷವು ಜನರ ಪೂರ್ವಜರ ಆಸ್ತಿಯನ್ನು ಹೇಗೆ ನಿಯಂತ್ರಿಸಲು ಬಯಸುತ್ತದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ. ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್‌ನ ಈ ಉದ್ದೇಶವನ್ನು ಸಾರ್ವಜನಿಕರ ಮುಂದೆ ಮಂಡಿಸಬೇಕು ಎಂದಿದ್ದಾರೆ.

ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ನಾನೂ ನೋಡಿದ್ದೇನೆ, ತಾಯಿ ವಯಸ್ಸಿನವರೊಂದಿಗೆ ಅಸಹ್ಯ ನೋಡೋಕಾಗ್ಲಿಲ್ಲ; ಡಿ.ಕೆ. ಸುರೇಶ್

Scroll to load tweet…