ಭಾರತದಲ್ಲಿ ಹನುಮಾನ್ ಚಾಲೀಸ ಪಠಣ ಸಾಮಾನ್ಯ. ಆದರೆ ಇದೀಗ ವಿದೇಶಗಳಲ್ಲಿ ಭಾರತಕ್ಕಿಂತ ಹೆಚ್ಚು ಹನುಮಾನ್ ಚಾಲೀಸ ಪಠಣ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಪೈಕಿ ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೋದಲ್ಲಿ ಬರೋಬ್ಬರಿ 11,000 ಅನಿವಾಸಿ ಭಾರತೀಯರಿಂದ ಹನುಮಾನ್ ಚಾಲೀಸ ಪಠಿಸಿದ್ದಾರೆ. ಇವರಿಗೆ ಆಯೋಧ್ಯೆಯಿಂದ ತರಿಸಿದ ರಕ್ಷಾ ಸೂತ್ರ ನೀಡಲಾಗಿದೆ.
ಟ್ರಿನಿಡ್ಯಾಡ್ & ಟೊಬ್ಯಾಗೋ(ಏ.30) ವಿದೇಶದಲ್ಲಿ ನೆಲೆಸಿರುವ ಭಾರತೀಯರು ಈಗಾಗಲೇ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಗಮನಸೆಳೆದಿದ್ದಾರೆ. ಆಯೋಧ್ಯೆ ಪ್ರಾಣಪ್ರತಿಷ್ಠೆ ವೇಳೆ ವಿದೇಶದಲ್ಲಿ ಸಾಲು ಸಾಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೋದಲ್ಲಿ 11,000 ಭಾರತೀಯ ಅನಿವಾಸಿ ಭಾರತೀಯರು ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರೆ. ಟ್ರಿನಿಡ್ಯಾಡ್‌ನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡು ಹನುಮಾನ್ ಚಾಲೀಸ ಪಠಣ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟ್ರಿನಿಡ್ಯಾಡ್ ಭಾರತೀಯ ಹೈಕಮಿಷನ್, ರಾಜಸ್ಥಾನ ಅಸೋಸಿಯೇಶನ್ ಆಫ್ ನಾರ್ತ್ ಆಮೇರಿಕಾ ಸಂಘಟನೆ ಜಂಟಿಯಾಗಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನ್ಯಾಷನಲ್ ಕೌನ್ಸಿಲ್ ಆಫ್ ಇಂಡಿಯನ್ ಕಲ್ಚರ್ ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ಹೈಕಮಿಷನರ್ ಡಾ.ಪ್ರದೀಪ್ ರಾಜಪುರೋಹಿತ್ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಹನುಮಾನ್ ಚಾಲೀಸ ಕೇಳಿದರೂ ಹಲ್ಲೆ, ಕರ್ನಾಟಕ ಘಟನೆ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
ಹನುಮಾನ್ ಚಾಲೀಸ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು 11,000 ಅನಿವಾಸಿ ಭಾರತೀಯರಿಗೆ ಆಯೋಧ್ಯೆ ರಾಮ ಮಂದಿರದಿಂದ ತಂದ ರಕ್ಷಾ ಸೂತ್ರವನ್ನು ವಿತರಿಸಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಸೇರಿದ್ದಾರೆ. ಇದು ತೀವ್ರ ಸಂತಸ ತಂದಿದೆ. ಅತ್ಯಂತ ಶ್ರದ್ಧಾಪೂರ್ವಕ, ಭಕ್ತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿದೆ. ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೋದಲ್ಲಿನ ಭಾರತೀಯರು ಶ್ರೀರಾಮನಿಗೆ ಭಕ್ತಿಯಿಂದ ನಮಿಸಿದ್ದಾರೆ ಎಂದು ಪ್ರದೀಪ್ ರಾಜಪುರೋಹಿತ್ ಹೇಳಿದ್ದಾರೆ.
ಆಯೋಧ್ಯೆಯಿಂದ ತಂದ ರಕ್ಷಾ ಸೂತ್ರ ಹಾಗೂ ಪ್ರಸಾದವನ್ನು ಭಕ್ತರಿಗೆ ವಿತರಿಸಿದ ಭಾರತೀಯ ಹೈಕಮಿಷನರ್ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಮುಂದಿನ ದಿನಗಳಳಲ್ಲಿ ಮತ್ತಷ್ಟು ಕಾರ್ಯಕ್ರಮಗಳೊಂದಿಗೆ ಲೋಕ ಕಲ್ಯಾಣಕ್ಕೆ ನಮ್ಮ ಕೈಲಾದ ಪ್ರಯತ್ನ ಮಾಡೋಣ ಎಂದು ಡಾ. ಪ್ರದೀಪ್ ರಾಜಪುರೋಹಿತ್ ಹೇಳಿದ್ದಾರೆ.
ವಿದೇಶಗಳಲ್ಲಿ ಹುನುಮಾನ್ ಚಾಲೀಸ ಪಠಣ ಇದೇ ಮೊದಲ್ಲ. ಈಗಾಗಲೇ ಹಲವು ದೇಶಗಳಲ್ಲಿ ಅನಿವಾಸಿ ಭಾರತೀಯರು ಈ ರೀತಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಪೈಕಿ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಅತೀ ಹೆಚ್ಚು ಹಿಂದೂ ಧಾರ್ಮಿಕ ಕಾರ್ಯಕ್ರಮಗಳು ವಿದೇಶಗಳಲ್ಲಿ ನಡೆದಿದೆ. ಹನುಮಾನ್ ಚಾಲೀಸ ಪಠಣ, ಪೂಜೆ , ಬೈಕ್-ಕಾರು ರ್ಯಾಲಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ನಗರ್ತಪೇಟೆಯ ಹನುಮಾನ್ ಚಾಲೀಸಾ ಪ್ರಕರಣ, ಹಲ್ಲೆಗೊಳಗಾದ ಅಂಗಡಿ ಮಾಲೀಕನ ವಿರುದ್ಧವೇ ಎಫ್‌ಐಆರ್!
