Asianet Suvarna News Asianet Suvarna News

ನೆರೆ ರಾಷ್ಟ್ರಗಳು ಭಾರತವನ್ನು ನಂಬುತ್ತೆ, ಚೀನಾವನ್ನಲ್ಲ: ನಿತಿನ್ ಗಡ್ಕರಿ

ನೆರೆ ರಾಷ್ಟ್ರಗಳು ಭಾರತವನ್ನು ನಂಬುತ್ತೆ ಎಂದ ಕೇಂದ್ರ ಸಚಿವ | ಚೀನಾದ ಬಗ್ಗೆ ನೆರೆ ರಾಷ್ಟ್ರಗಳಿಗೆ ಬಂಬಿಕೆ ಇಲ್ಲ

 

Neighbours would trust India not China: Nitin Gadkari dpl
Author
Bangalore, First Published Oct 28, 2020, 3:47 PM IST

ನಾಗ್ಪುರ(ಅ.28): ಭಾರತದ ಸಂಸ್ಕೃತಿ ಮತ್ತು ಹಿಂದೂ ಸಂಸ್ಕೃತಿ ದೇಶ ಮತ್ತಷ್ಟು ವಿಸ್ತಾರ ಮಾಡಿಕೊಳ್ಳೋ ಸಂಸ್ಕೃತಿ ಅಲ್ಲ. ನೆರೆಯ ರಾಷ್ಟ್ರಗಳಿಗೆ ಭಾರತ ಎಂದೂ ಬೆದರಿಸಲ್ಲ, ಅವುಗಳು ಬೆದರಿಕೆ ಎದಿರಿಸಿಲ್ಲ. ಆದರೆ ನೆರೆ ರಾಷ್ಟ್ರಗಳಿಗೆ ಚೀನಾ ಬಗ್ಗೆ ಈ ಭಾವನೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಭಾರತ ಜಗತ್ತಿನ ಸುಖವನ್ನು ಬಯಸುತ್ತದೆ. ಚೀನಾ ತನ್ನ ಪ್ರಭಾವ ವಿಸ್ತರಿಸುವುದನ್ನು ನಂಬುತ್ತದೆ. ಅವರಿಗೆ ಈ ಸಂಸ್ಕೃತಿಯೇ ಆಧಾರ ಎಂದು ಹೇಳಿದ್ದಾರೆ. ಈಶಾನ್ಯ ಲಡಾಖ್ ಘಟನೆ ಬೆನ್ನಲ್ಲೇ ಸಚಿವ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.

ಭಾರತದ ನೌಕಾದಳಕ್ಕೆ F-18 ಫೈಟರ್ಸ್ ಜೆಟ್ ನೀಡಲು ಮುಂದಾದ ಅಮೆರಿಕ

ಭೂತಾನ್, ನೇಪಾಳ, ಶ್ರೀಲಂಕಾ, ಬಂಗ್ಲಾದೇಶ ಭಾರತ ಅವುಗಳ ಮೇಲೆ ಆಕ್ರಮಿಸುತ್ತದೆ ಎಂದು ಹೆದರುವುದಿಲ್ಲ. ಆದರೆ ಚೀನಾದಲ್ಲಿ ಈ ನಂಬಿಕೆ ಇಲ್ಲ, ಅವರು ಇನ್ನೊಂದು ದೇಶ ಆಕ್ರಮಿಸುವ ಸಂಸ್ಕೃತಿಯವರು ಎಂದಿದ್ದಾರೆ.

Follow Us:
Download App:
  • android
  • ios