ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸೋಜುಗಾದ ಸೂಜು ಮಲ್ಲಿಗೆ ಖ್ಯಾತಿಯ ಗಾಯಕಿ ಅನನ್ಯಾ ಭಟ್ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 20ರದಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಂಭೀರ ತನಿಖೆ ಮಾಡಿ ಸತ್ಯ ಬಯಲು ಮಾಡಿದ್ದಾರೆ.

ಥಣಿಸಂದ್ರದ ಇಬ್ಬರು ಶಂಕಿತ ಉಗ್ರರ ಮನೆ ಮೇಲೆ NIA ದಾಳಿ 

ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್(52) ಇಬ್ಬರಿಗೆ ಸುಫಾರಿ ನೀಡಿ, ಈ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ. ನಿವೃತ್ತ ಫ್ರೊಫೆಸರ್‌ ಪರಶಿವಮೂರ್ತಿ ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದರು. ಪ್ರತಿ ತಿಂಗಳು ಕಮಿಷನ್‌ಗಾಗಿ ಪೀಡಿಸುತ್ತಿದ್ದರಲ್ಲದೇ, ಅವಾಚ್ಯ ಪದಗಳನ್ನು ಬಳಸಿ ನಿಂದಿಸುತ್ತಿದ್ದ ಕಾರಣ ವಿಶ್ವನಾಥ್ ಭಟ್ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ.

ಮೈಸೂರು ನಿವೇದಿತಾ ನಗರದಲ್ಲಿ ನಡೆದ ಕೊಲೆಗೆ ವಿಶ್ವನಾಥ್‌ ಬರೋಬ್ಬರಿ 7 ಲಕ್ಷ ರೂ.ಯನ್ನು ಸುಪಾರಿಯಾಗಿ ನಿರಂಜನ್ ಹಾಗೂ ನಾಗೇಶ್‌ ಎಂಬುವವರಿಗೆ ನೀಡಿದ್ದರು ಎನ್ನಲಾಗಿದೆ. ಈ ಪ್ರಕರಣವನ್ನು ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಅನನ್ಯಾ ಭಟ್‌ ಹಾಗೂ  ಪತ್ನಿಯನ್ನು ಬಿಟ್ಟು ಬೇರೆಯಾಗಿ ವಾಸವಿದ್ದಾರೆ ಆರೋಪಿ ವಿಶ್ವನಾಥ್ ಭಟ್.

"