ಮದುವೆ, ಮತಾಂತರಕ್ಕೆ ಒತ್ತಾಯ: ಹಿಂದು ಯುವತಿಯನ್ನು ಗುಂಡಿಕ್ಕಿ ಕೊಂದ ಮುಸ್ಲಿಂ ಯುವಕ

First Published 28, Oct 2020, 3:09 PM

ಮತಾಂತರವಾಗಲು ಹಿಂದು ಯುವತಿಯನ್ನು ಪೀಡಿಸುತ್ತಿದ್ದ ಮುಸ್ಲಿಂ ಯುವಕ | ಮದುವೆಗೂ ಒತ್ತಡ | ಹಾಡಹಗಲೇ ಯುವತಿನ ಅಪಹರಣಕ್ಕೆ ಯತ್ನ | ನಿರಾಕರಿಸಿದ ಯುವತಿಯ ದಾರುಣ ಅಂತ್ಯ

21 ವರ್ಷದ ಯುವತಿಯನ್ನು ಕಾಲೇಜು ಮುಂಭಾಗದಲ್ಲಿಯೇ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ಘಟನೆ ನಡೆದಿದ್ದು, ಯುವತಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳುವಾಗ ವಿರೋಧಿಸಿದವಳ ಮೇಲೆ ಶೂಟ್ ಮಾಡಲಾಗಿದೆ.

ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ತನ್ನನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸೋ ವ್ಯಕ್ತಿಯಿಂದ ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು, ಆತನನ್ನು ತಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಗುಂಡು ಹಾರಿಸೋ ಮೊದಲು ಯುವತಿ ತಪ್ಪಿಸಿಕೊಂಡು ಓಡಲು ಸಾಕಷ್ಟು ಪ್ರಯತ್ನ ಮಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಕೊಲೆಯಾದ ಯುವತಿಯನ್ನು ನಿಕಿತ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಕಾಲೇಜು ಹೊರಭಾಗದಲ್ಲಿ ನಿಂತುಕೊಂಡಿದ್ದಳು.

ಪರೀಕ್ಷೆ ಬರೆಯುವುದಕ್ಕಾಗಿ ಯುವತಿ ಕಾಲೆಜಿಗೆ ಹೋಗಿದ್ದಳು. ತೌಸೀಫ್ ಎಂಬಾತ ತನ್ನ ಗೆಳೆಯನೊಂದಿಗೆ ಆಕೆ ಹೊರಗೆ ಬರುವುದನ್ನು ಕಾದು ನಿಂತಿದ್ದ ಎಂದು ತಿಳಿದು ಬಂದಿದೆ.

ಯುವತಿ ಮತ ಬದಲಾಯಿಸಿಕೊಂಡು ಯುವಕನನ್ನು ಮದುವೆಯಾಗಲು ಆಕೆಯ ಮೇಲೆ ಒತ್ತಡವಿತ್ತು ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಯುವಕರು ನನ್ನ ಮಗಳಿಗೆ ತೊಂದರೆ ನೀಡುತ್ತಿದ್ದರು ಎಂದು ದೂರು ನೀಡಿದ್ದೆ, ಈಗ ಅವರು ನನ್ನ ಮಗಳನ್ನು ಕೊಂದೇ ಬಿಟ್ಟರು ಎಂದಿದ್ದಾರೆ ನಿಕಿತಾ ತಂದೆ.

ನಿಕಿತಾ ಮತ್ತು ತೌಫೀಖ್‌ಗೆ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

loader