ಪಾಟ್ನಾ(ಅ.28): ಬಿಹಾರದಲ್ಲಿ 71 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಆದರೀಗ ಅದಕ್ಕೂ ಮುನ್ನ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಮಾಡಿ, ಬಿಹಾರ ಜನರ ಬಳಿ ಮತ ನಿಡುವಂತೆ ಮನವಿ ಮಾಡಿದ್ದಾರೆ. ಆದರೆ ಇದಾದ ಬಳಿಕ ಬಿಜೆಪಿ ಅವರ ವಿರುದ್ಧ ಕಿಡಿ ಕಾರಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರಿದೆ.

'ಈ ಬಾರಿ ನ್ಯಾಯ, ಉದ್ಯೋಗ, ರೈತರು ಹಾಗೂ ಕಾರ್ಮಿಕರಿಗೆ. ನಿಮ್ಮ ಮತ ಕೇವಲ ಮಹಾ ಘಟಬಂಧನಕ್ಕೆ ನೀಡಿ. ಬಿಹಾರದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸುವ ನಿಮಗೆಲ್ಲರಿಗೂ ಶುಭವಾಗಲಿ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಬಿಜೆಪಿಯು ರಾಹುಲ್ ಗಾಂಧಿ ಮಾಡಿದ ಈ ದೂರಿನ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ. ಮತದಾನದ ವೇಳೆ ಪಕ್ಷವೊಂದಕ್ಕೆ ಮತ ಹಾಕಿ ಎನ್ನುವುದು ಚುನಾವಣಾ ಸಂಹಿತೆಯನ್ನು ಉಲ್ಲಂಘಿಸಿದಂತೆ.

71 ಕ್ಷೇತ್ರಗಳಲ್ಲಿ ಮತದಾನ

ಬಿಹಾರದಲ್ಲಿ ಅಕ್ಟೋಬರ್ 28ರಂದು 16 ಜಿಲ್ಲೆಗಳ 11 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಒಂದು ಸಾವಿರದ 66 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇವರಲ್ಲಿ  952 ಮಂದಿ ಪುರುಷರು ಹಾಗೂ  114  ಮಂದಿ ಮಹಿಳೆಯರು. ಎರಡನೇ ಹಂತದ ಮತದಾನ ನವೆಂಬರ್ 3 ಹಾಗೂ ನವೆಂಬರ್ 7 ರಂದು ನಡೆಯಲಿದೆ. ಫಲಿತಾಂಶ 10 ನವೆಂಬರ್‌ನಂದು ಹೊರ ಬೀಳಲಿದೆ.