ತಮಿಳು ನಿರ್ದೇಶಕ  ಅಜಯ್ ಜ್ಞಾನಮುತ್ತು ಅವರು ಇರ್ಫಾನ್ ಪಠಾಣ್ 36ನೇ ಹುಟ್ಟು ಹಬ್ಬದ ಪ್ರಯುಕ್ತ ನಿರ್ದೇಶಕ ಸರ್ಪ್ರೈಸ್‌ವೊಂದನ್ನು ರಿವೀಲ್ ಮಾಡಿದ್ದಾರೆ.  ಅದುವೇ ತಮ್ಮ ಮುಂದಿನ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಇಂಟರ್‌ಪೋಲ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿರುವುದು.

ಪಾಯಲ್ ಘೋಷ್‌ಗೆ ಪ್ರೀತಿಯಲ್ಲಿ ಮೋಸ ಮಾಡಿದ್ದರಂತೆ ಕ್ರಿಕೆಟಿಗ ಇರ್ಫಾನ್ ಪಠಾಣ್ ! 

'ಹುಟ್ಟು ಹಬ್ಬದ ಶುಭಾಶಯಗಳು ಇರ್ಫಾನ್. ನಿಮ್ಮನ್ನು ಭೇಟಿ ಮಾಡಿದ ಖುಷಿ ಹಾಗೂ ನಿಮ್ಮ ಜೊತೆ ಕೆಲಸ ಮಾಡಿದ ಕ್ಷಣಗಳು ಎಂದೆಂದೂ ಅಮೋಘ. ನೀವು ತುಂಬಾ ಕೇರಿಂಗ್ ವ್ಯಕ್ತಿ. ಮುಂಬರುವ ದಿನಗಳ ಅದ್ಭುತವಾಗಿರಲಿ,' ಎಂದು ವಿಶ್ ಮಾಡುತ್ತೇನೆ.  

 

ಕೋಬ್ರಾ ಚಿತ್ರ ನಟ ವಿಕ್ರಮ್ ಬರೋಬ್ಬರಿ 20 ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಿತ್ರದ ಮುಖ್ಯ ಸನ್ನಿವೇಶಗಳನ್ನು ರಷ್ಯಾದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆದರೆ ಕೊರೋನಾ ಕಾಟದಿಂದ ಭಾರತಕ್ಕೆ ಹಿಂದಿರುಗಿದ್ದರು. ಚೆನ್ನೈನಲ್ಲಿಯೇ ರಷ್ಯಾದ ಭಾಗದಂತೆ ಕಾಣಿಸುವ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಇರ್ಫಾನ್‌ ಲುಕ್‌ ಮಾತ್ರ ಹಾಗೂ ಪಾತ್ರ ಯಾವುದು ಎಂಬುದರ ಮಾಹಿತಿ ಮಾತ್ರ ಲಭ್ಯವಿದ್ದು. ಸಿನಿ ಹಾಗೂ ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಚಿತ್ರ ಮಂದಿರದಲ್ಲಿ ಕೋಬ್ರಾ  ತೆರೆ ಕಾಣಲಿದೆ ಎನ್ನಲಾಗಿದೆ.

ಅಪರೂಪಕ್ಕೆ ಕೀಪಿಂಗ್‌ ಅಭ್ಯಾಸ ನಡೆಸಿದ ಎಂ ಎಸ್ ಧೋನಿ!

ಇನ್ನು ವಿಕ್ರಮ್ ಹಾಗೂ ಇರ್ಫಾನ್‌ ಜೊತೆಯಾಗಿ ನಟ ರವಿಕುಮಾರ್, ಶ್ರೀನಿಧಿ ಶೆಟ್ಟಿ, ಮೃಣಾಲಿನಿ, ಕನಿಕಾ ಹಾಗೂ ಬಾಬು ಆಂಟೋನಿ ಕಾಣಿಸಿಕೊಳ್ಳಲಿದ್ದಾರೆ.