Asianet Suvarna News Asianet Suvarna News

'ಕಾಂಗ್ರೆಸ್‌ ಐವರು ಶಾಸಕರು ಬಿಜೆಪಿಗೆ ಬರೋದು ಫಿಕ್ಸ್? ಕಮಲಕ್ಕೆ ಮತ್ತಿಬ್ಬರು ಹೊಸ ಶಾಸಕರು'

ಐವರು ಶಾಸಕರ ಕಾಂಗ್ರೆಸ್‌ಗೆ ಬರೋದು ಫಿಕ್ಸ್ ಆಗಿದ್ದು ಇದರ ಜೊತೆ ಮತ್ತಿಬ್ಬರು ಸೇರ್ಪಡೆಯಾಗ್ತಾರೆ ಎನ್ನಲಾಗಿದೆ.

BJP Will Win in Karnataka By Election Says Renukacharya snr
Author
Bengaluru, First Published Oct 28, 2020, 9:40 AM IST

ತುಮಕೂರು (ಅ.28): ಐವರು ಕಾಂಗ್ರೆಸ್‌ ಶಾಸಕರು ಬಿಜೆಪಿ ಬರುತ್ತಾರೆಂಬ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅವರಿಗೆ ಈ ಬಗ್ಗೆ ಮಾಹಿತಿ ಇರುತ್ತದೆ ಎಂದರು. 

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಬಿಜೆಪಿ ಪಕ್ಷ ಸವಾಲಾಗಿ ಸ್ವೀಕರಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಬಾರಿ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಗೆಲುವು ಸಾಧಿಸಿದ್ದರೂ ಅಭಿವೃದ್ಧಿ ಎಂಬುದು ಕುಂಠಿತವಾಗಿದೆ ಎಂದು ಹೇಳಿದರು.

'ಯತ್ನಾಳ್‌ ತಿರುಕನ ಕನಸು ಕಾಣಬೇಡಿ, ಸವಾಲ್‌ ಹಾಕ್ತೇನೆ, ನೀವು ಸಿಎಂ ಆಗೋದಿಲ್ಲ' ..

ಕುಡಿಯುವ ನೀರು, ರಸ್ತೆಯಂತಹ ಮೂಲಭೂತ ಸೌಕರ್ಯಗಳು ಇಂದಿಗೂ ಮರೀಚಿಕೆಯಾಗಿವೆ. ಹಾಗಾಗಿ ಜನತೆ ಬದಲಾವಣೆ ಬಯಸಿದ್ದು, ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜೇಶಗೌಡ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಲಿದೆ ಎಂದರು.

Follow Us:
Download App:
  • android
  • ios