Asianet Suvarna News Asianet Suvarna News

ರಾಬರ್ಟ್ ಸಿನಿ ತಾರೆ ಆಶಾ ಭಟ್ ಮದ್ವೆಯಾದ್ರಾ? ದಿಲ್ಲೀಲಿ ಸೆಟಲ್ ಆಗಿದ್ದಾರಾ?

ಆಶಾ ಭಟ್‌ ಅನ್ನೋ ಭದ್ರಾವತಿ ಹುಡುಗಿ ರಾಬರ್ಟ್‌ನಲ್ಲಿ ದರ್ಶನ್‌ ಜೊತೆಗೆ ಡ್ಯುಯೆಟ್‌ ಹಾಡಿದವರು. ಈ ಹೆಣ್ಣುಮಗಳು ಸಡನ್ನಾಗಿ ಸಿನಿಮಾ ಫೀಲ್ಡಿಂದ ನಾಪತ್ತೆ ಆಗಿದ್ಯಾಕೆ? ಈಗೆಲ್ಲಿದ್ದಾರೆ ಈ ಸುಂದ್ರಿ?

 

whereabouts of Asha Bhat of fame Kannu hodiyaaka song of darshan acted robert movie bni
Author
First Published Apr 30, 2024, 4:41 PM IST

ಆಶಾ ಭಟ್‌ ಅನ್ನೋ ಸುಂದರಿ ಸಡನ್ನಾಗಿ ಸುದ್ದಿಯಾದದ್ದು ಮಿಸ್‌ ಸುಪ್ರಾ ನ್ಯಾಶನಲ್‌ ಅನ್ನೋ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಾಗ. ಇದು ವಿಶ್ವ ಸುಂದರಿ ಸ್ಪರ್ಧೆಗೆ  ಸಮಾನವಾದ ಇನ್ನೊಂದು ಬ್ಯೂಟಿ ಪೇಜೆಂಟ್‌. ಅದಲ್ಲಿ ಈ ಹುಡುಗಿ ವಿಶ್ವ ಸುಂದರಿ ಕಿರೀಟ ಧರಿಸಿದಾಗ ಕನ್ನಡ ನಾಡು, ಕನ್ನಡ ಮಾಧ್ಯಮಗಳು ಈಕೆಯನ್ನು ಮುತ್ತಿಕೊಂಡು ಫೋಟೋ ಶೂಟ್ ಮಾಡಿದ್ದೇ ಮಾಡಿದ್ದು. ಈ ವೇಳೆ ಈಕೆಯ ಮಾರುಕಟ್ಟೆಯೂ ವಿಸ್ತರಿಸಿತು. ವಿಶ್ವಮಟ್ಟದಲ್ಲಿ ಒಂದಿಷ್ಟು ಸೋಷಿಯಲ್ ವರ್ಕ್‌ ಚಾರಿಟಿ ಇತ್ಯಾದಿಗಳಲ್ಲಿ ತೊಡಗಿಸಿಕೊಂಡರು. ಆಮೇಲೆ ಬಾಲಿವುಡ್‌ ಸಿನಿಮಾದಲ್ಲಿ ಕಾಣಿಸಿಕೊಂಡರು. ಸರಿ ಹೋಯ್ತು, ದೀಪಿಕಾ ಪಡುಕೋಣೆಯಂತೆ ಈಕೆಯೂ ಬಾಲಿವುಡ್‌ನಲ್ಲಿ ಸೆಟಲ್‌ ಆಗ್ತಾರೆ. ಕನ್ನಡಕ್ಕೆ ಸಿಗಬೇಕಿದ್ದ ಹೀರೋಯಿನ್‌ ಅನ್ಯಾಯವಾಗಿ ಅನ್ಯಭಾಷೆ ಪಾಲಾದ್ರು ಅಂತ ಇಂಡಸ್ಟ್ರಿಯ ಕೆಲವು ಮಂದಿ ಮಾತಾಡಿದ್ದೂ ಆಯ್ತು. ಆದರೆ ಈಕೆ ನಾಯಕಿಯಾಗಿ ನಟಿಸಿದ್ದ 'ಜಂಗ್ಲಿ' ಸಿನಿಮಾ ತೋಪಾಯ್ತು.

 

 
 
 
 
 
 
 
 
 
 
 
 
 
 
 

A post shared by Asha Bhat (@asha.bhat)

ಜಂಗ್ಲಿ ಸಿನಿಮಾ ಅಂಥಾ ಸುದ್ದಿ ಮಾಡದ ಕಾರಣ ಬಾಲಿವುಡ್‌ನವರೇನೂ ಈ ಹುಡುಗಿ ನಟನೆಯನ್ನು ಮೆಚ್ಚಿಕೊಂಡು ಒಳಗೆ ಕರ್ಕೊಳ್ಳಲಿಲ್ಲ. ಅದೇ ಹೊತ್ತಿಗೆ ಕನ್ನಡದ ದರ್ಶನ್‌ ಸಿನಿಮಾಗೆ ಈಕೆಯನ್ನು ಯಾಕೆ ಕರೆತರಬಾರದು ಅನ್ನೋ ಮಾತು ಬಂತು. ಸರಿ, ಆಹ್ವಾನ ಹೋಯಿತು. ಕನ್ನಡ ಮೂಲಕದ ಬಾಲಿವುಡ್‌ (Bollywood) ಸಿನಿಮಾಗಳಲ್ಲಿ ನಟಿಸಿರೋ ನಟಿ ಅನ್ನೋ ವಿಶೇಷತೆ ಜೊತೆ ಆಶಾ ಕನ್ನಡ ಇಂಡಸ್ಟ್ರಿಗೆ (Kannada Movie Industry) ಬಲಗಾಲಿಟ್ಟು ಬಂದರು. ರಾಬರ್ಟ್ ಸಿನಿಮಾ ಹಿಟ್‌ ಆಯ್ತೋ ಇಲ್ವೋ ಗೊತ್ತಿಲ್ಲ. ಆದರೆ ಈ ಸಿನಿಮಾದ ಹಾಡುಗಳು ಮಾತ್ರ ಸಖತ್ತಾಗಿ ಕ್ಲಿಕ್ ಆದವು. ಕನ್ನಡದ 'ಕಣ್ಣು ಹೊಡಿಯಾಕ..' ಹಾಡು ಮಿಲಿಯನ್‌ ಗಟ್ಟಲೆ ವ್ಯೂಸ್ ದಾಖಲಿಸಿದರೆ ತೆಲುಗಿನಲ್ಲಿ 'ಕಣ್ಣೆ ಅದಿರಿಂದಿ..' ಎಂದು ಬೇಸ್ ವಾಯ್ಸ್‌ನಲ್ಲಿ ಹಾಡಿದ ಹಾಡು ಯದ್ವಾ ತದ್ವಾ ಕ್ಲಿಕ್ ಆಯ್ತು. ರಾತ್ರೋ ರಾತ್ರಿ ಮಂಗ್ಲಿ ಅನ್ನೋ ಗಾಯಕಿ ಸೌತ್‌ ಇಂಡಿಯನ್‌ (South Indian Cinema) ಲೆವೆಲ್‌ನಲ್ಲಿ ನಂ.1 ಸ್ಥಾನಕ್ಕೆ ಏರಿದರು.

ನಟಿ ಗೀತಾ ನೆನಪಿದ್ಯಲ್ಲ ನಿಮಗೆ? ಅಮೆರಿಕಾದಿಂದ ಬಂದು ಈಗ ಮತ್ತೆ ಸಿನಿಮಾದಲ್ಲಿ ನಟಿಸ್ತಿರೋದ್ಯಾಕೆ..?

ರಾಬರ್ಟ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಆಶಾ ಭಟ್ ಕೂಡ ಜನಪ್ರಿಯ ಹೀರೋಯಿನ್‌ ಆಗಬಹುದು ಅಂದುಕೊಂಡದ್ದೇ ಬಂತು, ಆದರೆ ರಾಬರ್ಟ್‌ ನಂತರ ಯಾವ ಸಿನಿಮಾದಲ್ಲೂ ಆಶಾ ಭಟ್‌ ಕಾಣಿಸಿಕೊಳ್ಳಲಿಲ್ಲ. ಈ ಬಗ್ಗೆ ಈಕೆಯನ್ನು ಪ್ರತೀ ಬಾರಿ ಪ್ರಶ್ನಿಸಿದಾಗಲೂ 'ಸ್ಕ್ರಿಪ್ಟ್‌ ಬರ್ತಿದೆ. ಇನ್ನೂ ಓಕೆ ಆಗಿಲ್ಲ' ಎಂಬ ಮಾತುಗಳನ್ನು ಹೇಳಿದರು. ನಂತರ 'ಕೋವಿಡ್‌' ರೀಸನ್‌ ಕೊಟ್ಟರು. ಆಮೇಲೆ ಯಾಕೋ ಇಂಡಸ್ಟ್ರಿಯವರಿಗೂ ಮಾಧ್ಯಮದವರಿಗೂ ಈಕೆಯ ಬಗ್ಗೆ ಆಸಕ್ತಿ ಕಡಿಮೆಯಾಯಿತೋ ಏನೋ? ಹೊಸ ಸಿನಿಮಾದಲ್ಲಿ ಆಶಾ ಭಟ್‌ ಕಾಣಿಸಲಿಲ್ಲ. ಆಕೆಯ ಬಗ್ಗೆ ಸುದ್ದಿಯೂ ಕೇಳಲಿಲ್ಲ. ನಡುವೆ ಒಂದು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡರೂ ಸದ್ದು ಮಾಡಲಿಲ್ಲ.

ಅಷ್ಟಕ್ಕೂ ಈಕೆ ಈಗ ಎಲ್ಲಿದ್ದಾರೆ? ಮದುವೆ ಆದ್ರಾ? ಸಿನಿಮಾ ಮಾಡ್ತಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸದೇ ದೆಹಲಿಯ ರಾಷ್ಟ್ರಪತಿ ಭವನದ ಮುಂದೆ ವಾಕಿಂಗ್ ಮಾಡೋ ಫೋಟೋ ಹಾಕ್ಕೊಂಡಿದ್ದಾರೆ. ಅಂದ್ರೆ ಈ ಸುಂದ್ರಿ ಡೆಲ್ಲಿಯಲ್ಲಿದ್ದಾರೆ ಅಂತಾಯ್ತು? ಅಲ್ಲೇನ್ ಮಾಡ್ತಿದ್ದೀರಾ ಮೇಡಂ ಅಂತ ನೆಟ್ಟಿಗರು ಕೇಳಿದ್ರೆ ಅದಕ್ಕೆಲ್ಲ ಆಶಾ ರಿಪ್ಲೈ ಮಾಡಿಲ್ಲ.

ಆಶಾ ಭಟ್‌ ಸೌಂದರ್ಯವತಿ ಅನ್ನೋದಕ್ಕೆ ಆಕೆ ವಿಶ್ವ ಸುಂದರಿ ಕಿರೀಟ ತೊಟ್ಟದ್ದಕ್ಕಿಂತ ದೊಡ್ಡ ಸಾಕ್ಷಿ ಬೇಡ. ಆಕ್ಟಿಂಗ್‌ನಲ್ಲೂ ಕಡಿಮೆ ಇಲ್ಲ ಅಂತ ತೋರಿಸಿದ್ದಾರೆ. ಸ್ಕ್ರೀನ್ ಪ್ರೆಸೆನ್ಸ್‌ ಚೆನ್ನಾಗಿದೆ. ಆದರೂ ಅವಕಾಶ ಯಾಕೆ ಬರ್ತಿಲ್ಲ ಅನ್ನೋದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ.

ನೀತೂ ಮನದಾಳದ ಮಾತು, ಏನ್ ಹೇಳಿದ್ರು ಅನ್ನೋದಕ್ಕಿಂತ ಯಾಕ್ ಹೇಳಿದ್ರು ಅಂತ ಯೋಚಿಸಿ!
 

Latest Videos
Follow Us:
Download App:
  • android
  • ios