Asianet Suvarna News Asianet Suvarna News

ಯೋಧರ ಜೊತೆ ಮೋದಿ ದೀಪವಾಳಿ ಸಡಗರ, 8 ರಾಜ್ಯದಲ್ಲಿ ಇಳಿಕೆಯಾಯ್ತು ತೈಲ ದರ; ನ.4ರ Top 10 News!

ಸೈನಿಕರಿಗೆ  ಸಿಹಿ ತಿನಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ. ಕೇಂದ್ರದ ಬೆನ್ನಲ್ಲೇ, 8 ಬಿಜೆಪಿ  ಆಡಳಿತಾರೂಢ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಇಳಿಕೆ ಮಾಡಲಾಗಿದೆ. ಬೆಳಕಿನ ಹಬ್ಬಕ್ಕೆ ಯುವರಾಜ್ ಸೇರಿದಂತೆ ಕ್ರಿಕೆಟಿಗರ ವಿಶ್,  ಪುನೀತ್ ರಾಜ್‌ಕುಮಾರ್ ಸಾವಿನ ರಹಸ್ಯ, ಅತ್ಯಂತ ಕಡಿಮೆ ದರದ ಟಚ್ ಸ್ಕ್ರೀನ್ ಫೋನ್ ಬಿಡುಗಡೆ ಮಾಡಿದ ಜಿಯೋ ಸೇರಿದಂತೆ ನವೆಂಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

PM Modi celebrate diwali with Soliders to Petrol Diesel Price top 10 News of November 4 ckm
Author
Bengaluru, First Published Nov 4, 2021, 5:37 PM IST
  • Facebook
  • Twitter
  • Whatsapp

ನಮ್ಮ ಸೈನಿಕರು ಭಾರತ ಮಾತೆಯ ರಕ್ಷಾ ಕವಚ : ಯೋಧರೊಂದಿಗೆ ಮೋದಿ ದೀಪಾವಳಿ ಸಂಭ್ರಮ!

PM Modi celebrate diwali with Soliders to Petrol Diesel Price top 10 News of November 4 ckm

ಸೈನಿಕರಿಗೆ  ಸಿಹಿ ತಿನಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ "ನಮ್ಮ ಸೈನಿಕರು ಭಾರತ ಮಾತೆಯ ಸುರಕ್ಷಾ ಕವಚ" ಎಂದು ಹೇಳಿದ್ದಾರೆ. ಯೋಧರೊಂದಿಗೆ ಮೋದಿ ದೀಪಾವಳಿ ಆಚರಿಸಿದ ಫೋಟೋಗಳು ಇಲ್ಲಿವೆ ನೋಡಿ...!

ದೀಪಾವಳಿ ಗಿಫ್ಟ್ : 8 ಬಿಜೆಪಿ ರಾಜ್ಯಗಳಲ್ಲಿ ತೈಲ ದರ ಇಳಿಕೆ

PM Modi celebrate diwali with Soliders to Petrol Diesel Price top 10 News of November 4 ckm

 ಕೇಂದ್ರ ಸರ್ಕಾರ  ಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ಮೇಲಿನ ಅಬಕಾರಿ ಸುಂಕ (tax) ಇಳಿಸಿದ ಬೆನ್ನಲ್ಲೇ, 8 ಬಿಜೆಪಿ (BJP) ಆಡಳಿತಾರೂಢ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯ ವರ್ಧಿತ ತೆರಿಗೆಗಳನ್ನು ಇಳಿಕೆ ಮಾಡಲಾಗಿದೆ.

T20 World Cup: Deepavali ಹಬ್ಬಕ್ಕೆ ಶುಭಕೋರಿದ ವಿರಾಟ್, ವಾರ್ನರ್‌ ಸೇರಿದಂತೆ ಹಲವು ಕ್ರೀಡಾತಾರೆಯರು..!

PM Modi celebrate diwali with Soliders to Petrol Diesel Price top 10 News of November 4 ckm

ಬೆಳಕಿನ ಹಬ್ಬ ದೀಪಾವಳಿ (Deepavali)ಯನ್ನು ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಅದ್ದೂರಿಯಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮಿಯರ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ದೀಪಾವಳಿಯೂ ಒಂದು ಪ್ರಮುಖ ಹಬ್ಬವಾಗಿದೆ. ದೀಪಾವಳಿ ಹಬ್ಬವನ್ನು ಟೀಂ ಇಂಡಿಯಾ ಕ್ರಿಕೆಟಿಗರು ಸಹ ಅದ್ದೂರಿಯಿಂದ ಆಚರಿಸುತ್ತಾರೆ.

46ರ ಅಂಕಿಯಲ್ಲಿದೆ ಪುನೀತ್ ರಾಜ್‌ಕುಮಾರ್ ಸಾವಿನ ರಹಸ್ಯ

PM Modi celebrate diwali with Soliders to Petrol Diesel Price top 10 News of November 4 ckm

ಸ್ಯಾಂಡಲ್‌ವುಡ್‌ ಕಂಡ ಅದ್ಭುತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹೃದಯಘಾತದಿಂದ ಇಹಲೋಕ ತ್ಯಜಿಸಿರುವ ವಿಚಾರ ಕೇಳಿ ಇಡೀ ಕರ್ನಾಟಕವೇ ಶೋಕ ಸಾಗರದಲ್ಲಿ ಮುಳುಗಿದೆ. ಕನ್ನಡ ಚಿತ್ರರಂಗದ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪುನೀತ್ ಅಗಲಿಕೆ ಬಗ್ಗೆ ಇಂದಿಗೂ ನೋವನ್ನು ಹೊರಹಾಕುತ್ತಿದ್ದಾರೆ. 

Ayushmann Khurrana: ಎದೆ ಹಾಲು ಕುಡಿದ ಗಂಡನ ಕುರಿತು ಆಯುಷ್ಮಾನ್ ಪತ್ನಿ ಮಾತು: ಸೀಕ್ರೆಟ್ ಹೇಳಿದ ತಾಹಿರಾ

PM Modi celebrate diwali with Soliders to Petrol Diesel Price top 10 News of November 4 ckm

ಆಯುಷ್ಮಾನ್ ಖುರಾನಾ(Ayushmann Khurrana) ಅವರ ಪತ್ನಿ ತಾಹಿರಾ(Tahira) ಅವರು ತಮ್ಮ ಬ್ಯಾಂಕಾಕ್ ಪ್ರವಾಸದ ಸಮಯದಲ್ಲಿ ನಟ ತನ್ನ ಎದೆಹಾಲು ಕುಡಿದ ಬಗ್ಗೆ ಬಹಿರಂಗಪಡಿಸಿದ್ದಾರೆ. ತಾಹಿರಾ ತನ್ನ ಪುಸ್ತಕದ ಆಯ್ದ ಭಾಗವನ್ನು ಹಂಚಿಕೊಂಡಿದ್ದಾರೆ.

ಅತ್ಯಂತ ಕಡಿಮೆ ದರದ ಟಚ್ ಸ್ಕ್ರೀನ್ ಫೋನ್ ಬಿಡುಗಡೆ ಮಾಡಿದ ಜಿಯೋ!

PM Modi celebrate diwali with Soliders to Petrol Diesel Price top 10 News of November 4 ckm

:ರಿಲಯನ್ಸ್‌ ಜಿಯೋ (Reliance Jio)  ಭಾರತೀಯ ಸೆಲ್ಯೂರಾರ್‌ (Cellular) ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಅತಿ ಕಡಿಮೆ ಬೆಲೆಯ ಜಿಯೋಪೋನ್ ನೆಕ್ಸ್ಟ್‌ (JioPhone Next) ಟಚ್‌ ಸ್ಕ್ರೀನ್ ಮೊಬೈಲ್‌ ಮಾರುಕಟ್ಟಗೆ ಬಿಡುಗಡೆ ಮಾಡಿದೆ. ದೇಶಾದ್ಯಂತ ಇರುವ ಎಲ್ಲಾ ಜಿಯೋ (Jio) ಡಿಜಿಟಲ್‌ ರಿಟೇಲ್‌ (Digital shops) ಮಳಿಗೆಗಳಲ್ಲಿ ಈ ಫೋನ್‌ ಲಭ್ಯವಿರಲಿದೆ.‌ 

Tata Motors ಕಂಪನಿಗೆ ಮಾರುತಿ ಸುಜುಕಿಗಿಂತ ಹೆಚ್ಚು ಲಾಭ

PM Modi celebrate diwali with Soliders to Petrol Diesel Price top 10 News of November 4 ckm

ಪ್ರತಿ ಕಾರಿನ (Car) ಮಾರಾಟದ ಮೂಲಕ ಗಳಿಸುವ ಲಾಭದ (Lobby) ಪ್ರಮಾಣದಲ್ಲಿ ಟಾಟಾ ಮೋಟಾ​ರ್ (TATA Motor), ದಶಕದಲ್ಲೇ ಮೊದಲ ಬಾರಿಗೆ ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಝುಕಿಯನ್ನು (Maruthi SUZUKI) ಹಿಂದಿಕ್ಕಿದೆ.

Sara Ali Khan: 'ನೀನು ಮುಸ್ಲಿಂ', ಕೇದಾರನಾಥ್‌ಗೆ ಹೋದ ಸಾರಾ ಅಲಿ ಖಾನ್ ಟ್ರೋಲ್

PM Modi celebrate diwali with Soliders to Petrol Diesel Price top 10 News of November 4 ckm

ಒಟ್ಟಿಗೆ ವರ್ಕೌಟ್ ಮಾಡಿ ಫಿಟ್ನೆಸ್ ಗೋಲ್ಸ್ ನೀಡಿದ ನಂತರ ಬಾಲಿವುಡ್ ನಟಿಯರಾದ ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಇತ್ತೀಚೆಗೆ ಟ್ರಾವೆಲ್ ಗೋಲ್ಸ್ ಕೂಡಾ ಶೇರ್ ಮಾಡಿದ್ದಾರೆ. ಕ್ಯೂಟ್ ಫ್ರೆಂಡ್ಸ್‌ ಒಟ್ಟಿಗೆ ಯಾತ್ರೆ ಕೈಗೊಂಡಿದ್ದಾರೆ.

Follow Us:
Download App:
  • android
  • ios