Sara Ali Khan: 'ನೀನು ಮುಸ್ಲಿಂ', ಕೇದಾರನಾಥ್‌ಗೆ ಹೋದ ಸಾರಾ ಅಲಿ ಖಾನ್ ಟ್ರೋಲ್
Kedarnath: ಕೇದಾರನಾಥಕ್ಕೆ ಭೇಟಿ ಕೊಟ್ಟ ನಟಿ ಟ್ರೋಲ್ ನೀನು ಮುಸ್ಲಿಂ ಎಂದು ಸಾರಾ ಅಲಿ(Sara Ali Khan) ಖಾನ್‌ನನ್ನು ಟ್ರೋಲ್ ಮಾಡಿದ ನೆಟ್ಟಿಗರು
- FB
- TW
- Linkdin
Follow Us
)
ಒಟ್ಟಿಗೆ ವರ್ಕೌಟ್ ಮಾಡಿ ಫಿಟ್ನೆಸ್ ಗೋಲ್ಸ್ ನೀಡಿದ ನಂತರ ಬಾಲಿವುಡ್(Bollyood) ನಟಿಯರಾದ ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್(Sara Ali Khan) ಇತ್ತೀಚೆಗೆ ಟ್ರಾವೆಲ್ ಗೋಲ್ಸ್ ಕೂಡಾ ಶೇರ್ ಮಾಡಿದ್ದಾರೆ. ಕ್ಯೂಟ್ ಫ್ರೆಂಡ್ಸ್ ಒಟ್ಟಿಗೆ ಯಾತ್ರೆ ಕೈಗೊಂಡಿದ್ದಾರೆ.
ಕೇದಾರನಾಥ ದೇವಾಲಯದಲ್ಲಿ ಇಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ಹಲವಾರು ಫೊಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಒಂದು ಚಿತ್ರದಲ್ಲಿ, ಜಾನ್ವಿ ಮತ್ತು ಸಾರಾ ಅವರು ಮೆಟ್ಟಿಲುಗಳ ಮೇಲೆ ಕುಳಿತುಕೊಂಡು, ಪಫರ್ ಜಾಕೆಟ್‌ಗಳು ಮತ್ತು ಶಾಲುಗಳನ್ನು ಧರಿಸಿ ನಗುತ್ತಿರುವುದನ್ನು ಕಾಣಬಹುದು.
ಅನೇಕ ಅಭಿಮಾನಿಗಳು ಸಾರಾ ಮತ್ತು ಜಾನ್ವಿಯನ್ನು ಶ್ಲಾಘಿಸಿದ್ದಾರೆ. ಕೆಲವರು ಅವರು ಹಂಚಿಕೊಂಡ ಫೊಟೋಗಳನ್ನು ನೋಡಿ ಖುಷಿಪಟ್ಟರೆ ಇತರ ಬಳಕೆದಾರರು ಸಾರಾ ಅವರು ಪವಿತ್ರ ದೇಗುಲವಾದ ಕೇದಾರನಾಥಕ್ಕೆ(Kedarnath) ಭೇಟಿ ನೀಡಿದ್ದಕ್ಕಾಗಿ ಟ್ರೋಲ್ ಮಾಡಿದ್ದಾರೆ.
ಒಬ್ಬ ಬಳಕೆದಾರರು ನೀವು ಮುಸ್ಲಿಂ, ಆದ್ದರಿಂದ ನೀವು ಏನು ಮಾಡುತ್ತಿದ್ದೀರಿ ಎಂದು ಬರೆದರೆ, ಇನ್‌ಸ್ಟಾಗ್ರಾಮ್(Instagram) ಬಳಕೆದಾರರು ನೀವು ಹೇಗೆ ಮುಸ್ಲಿಂ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇಬ್ಬರು ನಟಿಯರು ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಮಾಡುವುದನ್ನು ನೋಡಿದ ಅನೇಕ ಅಭಿಮಾನಿಗಳು ಸಾಕಷ್ಟು ಪ್ರಭಾವಿತರಾಗಿದ್ದಾರೆ. ವಾವ್ ಇದನ್ನು ಸಂಸ್ಕಾರ ಎಂದು ಕರೆಯಲಾಗುತ್ತದೆ. ನೀವಿಬ್ಬರೂ ನಿಜವಾಗಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಜಾನ್ವಿ ಮತ್ತು ಸಾರಾ! ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ! ಅವರು ಕೇದಾರನಾಥ ಧಾಮನಲ್ಲಿದ್ದಾರೆ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ, ಅಕ್ಟೋಬರ್ 22 ರಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಕ್ಕಾಗಿ ಸಾರಾ ಟ್ರೋಲ್ ಆಗಿದ್ದರು. ಆ ಸಮಯದಲ್ಲಿ, ಟ್ವಿಟರ್ ಬಳಕೆದಾರರು ಅವರನ್ನು ಟ್ರೋಲ್ ಮಾಡಿದ್ದರು.
ಪ್ರವಾಸದ ಮೊದಲು, ಜಾನ್ವಿ ಮತ್ತು ಸಾರಾ ರಣವೀರ್ ಸಿಂಗ್ ಅವರ ಟಿವಿ ಶೋ 'ದಿ ಬಿಗ್ ಪಿಕ್ಚರ್' ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆನಂದ್ ಎಲ್ ರೈ ಅವರ 'ಅಟ್ರಾಂಗಿ ರೇ' ಚಿತ್ರದಲ್ಲಿ ಸಾರಾ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಧನುಷ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಹಿಂದೆ ಸಾರಾ ಹಾಗೂ ಜಾಹ್ಮವಿ ಜೊತೆಯಾಗಿ ವರ್ಕೌಟ್ ಮಾಡಿದ ವಿಡಿಯೋ ಹಾಗು ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು