* ದೇಶಾದ್ಯಂತ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಣೆ* ಬೆಳಕಿನ ಹಬ್ಬಕ್ಕೆ ಶುಭ ಕೋರಿದ ಕ್ರೀಡಾತಾರೆಯರು* ಟೀಂ ಇಂಡಿಯಾ ಆಟಗಾರರು ಮಾತ್ರವಲ್ಲ ವಿದೇಶಿ ಆಟಗಾರರಿಂದಲೂ ಶುಭ ಹಾರೈಕೆ

ಬೆಂಗಳೂರು(ನ.04): ಬೆಳಕಿನ ಹಬ್ಬ ದೀಪಾವಳಿ (Deepavali)ಯನ್ನು ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಅದ್ದೂರಿಯಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮಿಯರ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ದೀಪಾವಳಿಯೂ ಒಂದು ಪ್ರಮುಖ ಹಬ್ಬವಾಗಿದೆ. ದೀಪಾವಳಿ ಹಬ್ಬವನ್ನು ಟೀಂ ಇಂಡಿಯಾ ಕ್ರಿಕೆಟಿಗರು ಸಹ ಅದ್ದೂರಿಯಿಂದ ಆಚರಿಸುತ್ತಾರೆ.

ಸದ್ಯ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಪಾಲ್ಗೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ (Team India)) ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನ ಆಫ್ಘಾನಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಕ್ರಿಕೆಟ್‌ ಅಭಿಮಾನಿಗಳಿಗೆ ಸ್ಮರಣೀಯ ಉಡುಗೊರೆ ನೀಡಿದೆ. ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಹ ಆಟಗಾರ ಮಯಾಂಕ್ ಅಗರ್‌ವಾಲ್‌ (Mayank Agarwal), ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ವಿದೇಶಿ ಕ್ರಿಕೆಟಿಗರಾದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್‌ ಸೇರಿದಂತೆ ಹಲವು ಕ್ರೀಡಾತಾರೆಯರು ಬೆಳಕಿನ ಹಬ್ಬ ದೀಪಾವಳಿಯಂದು ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಬನ್ನಿ ಯಾರೆಲ್ಲಾ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆಂದು ನೋಡೋಣ.

ರಜೌರಿ ಹಾಗೂ ನೌಶೇರಾ ಗಡಿಯಲ್ಲಿ ಯೋಧರೊಂದಿಗೆ ಮೋದಿ ದೀಪಾವಳಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ, ಬೆಳಕಿನ ಹಬ್ಬ ದೀಪಾವಳಿಯು ನಿಮ್ಮ ಜೀವನದಲ್ಲಿ ಹೊಸ ಬೆಳಕು ಹಾಗೂ ಖುಷಿಯಿಂದ ಕೂಡಿರಲಿ. ನಿಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ಕಿಂಗ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಯುಎಇನಲ್ಲಿದ್ದು, ಆಫ್ಘಾನ್ ತಂಡದ ಎದುರು ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿ, ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದಾರೆ.

Scroll to load tweet…

ಇನ್ನು ಟೀಂ ಇಂಡಿಯಾ ಮತ್ತೋರ್ವ ಕ್ರಿಕೆಟಿಗ, ಕನ್ನಡಿಗ ಮಯಾಂಕ್ ಅಗರ್‌ವಾಲ್ ತಮ್ಮ ಕುಟುಂದೊಟ್ಟಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಎಲ್ಲರೂ ಸಂತೋಷದಿಂದ ಹಾಗೂ ಸುರಕ್ಷಿತವಾಗಿ ದೀಪಾವಳಿ ಹಬ್ಬವನ್ನು ಆಚರಿಸಿ. ಈ ವರ್ಷ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಮಯಾಂಕ್‌ ಅಗರ್‌ವಾಲ್ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನಾಡಲು ಕರ್ನಾಟಕ ತಂಡದೊಟ್ಟಿಗೆ ಗುವಾಹಟಿಯಲ್ಲಿದ್ದಾರೆ.

Scroll to load tweet…

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಿಕ್ಸರ್‌ ಕಿಂಗ್‌ ಖ್ಯಾತಿಯ ಯುವರಾಜ್ ಸಿಂಗ್ (Yuvraj Singh) ಈಗಾಗಲೇ ನಿವೃತ್ತಿ ವಾಪಾಸ್ ಪಡೆದು ಕ್ರಿಕೆಟ್‌ಗೆ ಮರಳುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣವೊಂದರಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನನ್ನ ಕಡೆಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಎಲ್ಲರ ಬದುಕಿನಲ್ಲಿ ಖುಷಿ ನಳನಳಿಸಲಿ, ಕತ್ತಲು ದೂರವಾಗಲಿ ಎಂದು ಯುವಿ ಶುಭ ಹಾರೈಸಿದ್ದಾರೆ.

View post on Instagram

ಇನ್ನು ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (Sachin Tendulkar) ಸಹಾ ಟ್ವೀಟ್‌ ಮೂಲಕ ದೀಪಾವಳಿ ಹಬ್ಬದ ಶುಭಕೋರಿದ್ದಾರೆ. ದೀಪಾವಳಿ ಬೆಳಕಿನ ಹಬ್ಬ. ಎಲ್ಲಾ ಮಕ್ಕಳಿಗೂ ಇದರ ಅನುಭವವಾಗಬೇಕಿದೆ. ಮುಕುಂದ ಆಸ್ಪತ್ರೆಯಲ್ಲಿ ಮಕ್ಕಳಿಗೆ ದೃಷ್ಠಿ ಭಾಗ್ಯ ಸಿಗುತ್ತಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Scroll to load tweet…

ಇದಷ್ಟೇ ಅಲ್ಲದೇ ಡೇವಿಡ್ ವಾರ್ನರ್, ಸ್ಯಾಮ್ ಬಿಲ್ಲಿಂಗ್ಸ್, ಡೇವಿಡ್‌ ಮಿಲ್ಲರ್ ಸೇರಿದಂತೆ ಹಲವು ವಿದೇಶಿ ಆಟಗಾರರು ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆ.

View post on Instagram
Scroll to load tweet…
Scroll to load tweet…