News Hour: ನಾಳೆ ಮತ ಎಣಿಕೆ.. ಇಂದೇ ಟೆನ್ಷನ್..!
ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಯ ಫಲಿತಾಂಶವನ್ನು ಚುನಾವಣಾ ಆಯೋಗ ಶನಿವಾರ ಪ್ರಕಟಿಸಲಿದೆ.
ಬೆಂಗಳೂರು (ನ.22): ನಾಳೆ ಸಂಡೂರು,ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಬರಲಿದೆ. ರಾಜ್ಯದಲ್ಲಿ ಪಿ ಮಾರ್ಕ್ ನಡೆಸಿರುವ ಮತಗಟ್ಟೆ ಸಮೀಕ್ಷೆ ನಿಜವಾಗಲಿದೆಯೇ ಎನ್ನುವ ಕುತೂಹಲವಿದೆ. 3 ಪಕ್ಷದಲ್ಲೂ ಗೆಲುವಿನ ಉತ್ಸಾಹವಿದ್ದು ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಇನ್ನು ಮಹಾರಾಷ್ಟ್ರ INDIA ಮೈತ್ರಿಯಲ್ಲಿ ಗೆಲುವಿಗೆ ಮುನ್ನವೇ ಸಿಎಂ ಕುರ್ಚಿ ಫೈಟ್ ಶುರುವಾಗಿದೆ. ಕಾಂಗ್ರೆಸ್‌ಗೆ ಸಿಎಂ ಸ್ಥಾನ ಎಂದು ನಿತಿನ್ ರಾವತ್ ಹೇಳಿದ್ದಾರೆ. ಇದಕ್ಕೆ ಠಾಕ್ರೆ ಬಣದ ವಿರೋಧ ವ್ಯಕ್ತಪಡಿಸಿದ್ದು, ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ.
ಬುಮ್ರಾ ಕುಂ* ಸಖತ್ ಆಗಿದೆ ಎಂದು ಪೋಸ್ಟ್ ಮಾಡಿದ ಪತ್ನಿ ಸಂಜನಾ ಗಣೇಶನ್!
ಹಾಗೆಯೇ, ರಾಜ್ಯಾದ್ಯಂತ ವಕ್ಫ್ ವಿರುದ್ಧ ಬಿಜೆಪಿ ಪ್ರತಿಭಟನಾ ಸಮರ ಜೋರಾಗಿದೆ. ಬಣ ಬಡಿದಾಟದ ಮಧ್ಯೆ 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಕ್ರೋಶದ ಜ್ವಾಲೆ ಎದ್ದಿದೆ. ವಿಜಯೇಂದ್ರ ಕರೆ ನೀಡಿದ ಹೋರಾಟಕ್ಕೆ ಯತ್ನಾಳ್ ಬಣ ಗೈರಾಗಿದೆ.