Asianet Suvarna News Asianet Suvarna News

Tata Motors ಕಂಪನಿಗೆ ಮಾರುತಿ ಸುಜುಕಿಗಿಂತ ಹೆಚ್ಚು ಲಾಭ

  • ಪ್ರತಿ ಕಾರಿನ ಮಾರಾಟದ ಮೂಲಕ ಗಳಿಸುವ ಲಾಭದ ಪ್ರಮಾಣದಲ್ಲಿ ಟಾಟಾ ಮೋಟಾ​ರ್
  • ದಶಕದಲ್ಲೇ ಮೊದಲ ಬಾರಿಗೆ ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಝುಕಿ
Tata Motors Making More Money Per Car Than Maruti Suzuki  snr
Author
Bengaluru, First Published Nov 4, 2021, 11:17 AM IST
  • Facebook
  • Twitter
  • Whatsapp

ಮುಂಬೈ (ನ.04): ಪ್ರತಿ ಕಾರಿನ (Car) ಮಾರಾಟದ ಮೂಲಕ ಗಳಿಸುವ ಲಾಭದ (Lobby) ಪ್ರಮಾಣದಲ್ಲಿ ಟಾಟಾ ಮೋಟಾ​ರ್ (TATA Motor), ದಶಕದಲ್ಲೇ ಮೊದಲ ಬಾರಿಗೆ ದೇಶದ ನಂ.1 ಕಾರು ಉತ್ಪಾದನಾ ಕಂಪನಿಯಾದ ಮಾರುತಿ ಸುಝುಕಿಯನ್ನು (Maruthi SUZUKI) ಹಿಂದಿಕ್ಕಿದೆ.

ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾ​ರ್ ನ ಪ್ರತಿ ಕಾರಿನ ಮೇಲಿನ ನಿರ್ವಹಣಾ ಲಾಭವು 45810 ರು.ಗಳಿಗೆ ಏರಿದೆ. ಇದು ಮಾರುತಿಗಿಂತ ಡಬಲ್‌ ಎಂಬುದು ವಿಶೇಷ.

ಹೊಸ ಕಾರುಗಳಿಗೆ (New Car) ಹೆಚ್ಚಿದ ಬೇಡಿಕೆ, ಚಾಣಾಕ್ಷ ಉತ್ಪಾದನಾ ತಂತ್ರಗಾರಿಕೆ ಮತ್ತು ವಿತರಣಾ ವ್ಯವಸ್ಥೆ, ಬಹುಮಾದರಿ ಲಭ್ಯತೆಯ ವಿಷಯಗಳು ಟಾಟಾ ಮೋಟಾ​ರ್‍ಸ್ನ ನಿರ್ವಹಣಾ ಲಾಭ ಏರಿಕೆಗೆ ಕಾರಣವಾಗಿದೆ.

ಮತ್ತೊಂದೆಡೆ ಬಿಡಿಭಾಗ ವಿವಿಧ ಉತ್ಪನ್ನಗಳಿಗೆ ವಿದೇಶಗಳನ್ನು ಅವಲಂಬಿಸಿರುವ ಮಾರುತಿ ಸೇರಿದಂತೆ ಇತರೆ ಕಂಪನಿಗಳ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಉದಾಹರಣೆಗೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಟಾಟಾ ಮೋಟಾ​ರ್‍ಸ್ನ ಕಾರುಗಳ ಉತ್ಪಾದನೆ ಶೇ.53ರಷ್ಟುಏರಿಕೆ ಕಾಣುವ 84000ಕ್ಕೆ ತಲುಪಿದ್ದರೆ, ಇದೇ ಅವಧಿಯಲ್ಲಿ ಮಾರುತಿಯ ಉತ್ಪಾದನೆ ಶೇ.1.2ರಷ್ಟುಕಸಿತ ಕಂಡಿದೆ.

ಟಾಟಾ ಮೋಟಾರ್ಸ್ ಹೊಸ ಮೈಲಿಗಲ್ಲು

 

ಬೆಂಗಳೂರು(ಅ.29): ಭಾರತದ ಅತಿದೊಡ್ಡ  ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ  ಟಾಟಾ ಮೋಟರ್ಸ್(Tata Motors), 21  ಹೊಸ ವಾಣಿಜ್ಯ ವಾಹನ(Commercial Vehicle) ಅನಾವರಗೊಳಿಸಿದೆ.  ವೈವಿಧ್ಯತೆಯಿರುವ ವ್ಯಾಪಕವಾದ  ಮತ್ತು ಸಮಗ್ರ ಶ್ರೇಣಿಯನ್ನು ಅನಾವರಣಗೊಳಿಸುವ ಮೂಲಕ ಭಾರತದ ಆರ್ಥಿಕ ಬೆಳವಣಿಗೆಗೆ(Economic Growth) ಬೆಂಬಲ ಒದಗಿಸುವ  ತನ್ನ  ಬದ್ಧತೆಯನ್ನು ವರ್ಧಿಸಿಕೊಂಡಿದೆ. ವಿವಿಧ ವರ್ಗಗಳು ಹಾಗೂ ಅಪ್ಲಿಕೇಶನ್‍ಗಳಾದ್ಯಂತ ಇರುವ ಕಾರ್ಗೋ ಹಾಗೂ ಬೆಳೆಯುತ್ತಿರುವ  ಅಗತ್ಯವನ್ನು ಪೂರೈಸುವುದಕ್ಕಾಗಿ ಈ ಟ್ರಕ್ಸ್  ವಿನ್ಯಾಸಗೊಳಿಸಲಾಗಿದೆ.  ಅಧಿಕ ಉತ್ಪಾದಕತೆ ಮತ್ತು ಕಡಿಮೆ ಮಾಲೀಕತ್ವ ವೆಚ್ಚವನ್ನು(ಟಿಸಿಒ)  ಒದಗಿಸುತ್ತೆದೆ.

ಮಧ್ಯಮ & ಭಾರೀ ವಾಣಿಜ್ಯ ವಾಹನಗಳು
ಟಾಟಾ ಮೋಟರ್ಸ್‍ನ ಟ್ರಕ್‍ಗಳು 75ಕ್ಕಿಂತ ಹೆಚ್ಚಿನ ವರ್ಷಗಳಿಂದ ರಾಷ್ಟ್ರ ನಿರ್ಮಾಣದಲ್ಲಿ ನೆರವಾಗುತ್ತಿವೆ. ಭಾರತವು  ಬೆಳವಣಿಗೆ ಉನ್ನತಿಯಲ್ಲಿರುವಂತಹ ಸಮಯದಲ್ಲಿ, ಟಾಟಾ ಮೋಟರ್ಸ್, ನಾಳಿನ ಅಗತ್ಯಗಳನ್ನು ಇಂದೇ  ಪೂರೈಸುವುದಕ್ಕಾಗಿ ಸದಾ ಒಂದು ಹೆಜ್ಜೆ ಮುಂದಿದೆ. ನಿರ್ಮಾಣ ಮತ್ತು ಕಾರ್ಗೋ ಸಾರಿಗೆಯಲ್ಲಿ ನಿಸ್ಸಂದೇಹ ಮುಂದಾಳುವಾಗಿರುವ ಸಂಸ್ಥೆಯು, 1ಲಕ್ಷಕ್ಕಿಂತ ಹೆಚ್ಚಿನ ಬಿಎಸ್6 ವಾಹನಗಳೊಂದಿಗೆ ಇಲ್ಲಿಯವರೆಗೆ 25 ಲಕ್ಷಕ್ಕಿಂತ ಹೆಚ್ಚಿನ ಟ್ರಕ್‍ಗಳನ್ನು ಸರಬರಾಜು ಮಾಡಿದೆ.

ಮಧ್ಯಂತರ & ಹಗುರ ವಾಣಿಜ್ಯ ವಾಹನಗಳು

1986ರಲ್ಲಿ  ಭಾರತೀಯ ಮಾರುಕಟ್ಟೆಗಾಗಿ ಹಗುರ ಟ್ರಕ್‍ಗಳನ್ನು ಪರಿಕಲ್ಪಿಸಿದಾಗಿನಿಂದಲೂ ಟಾಟಾ  ಮೋಟರ್ಸ್‍ನ M&HCV  ಶ್ರೇಣಿಯು, ಗಾತ್ರದಲ್ಲಿ, ಪ್ರಮಾಣದಲ್ಲಿ, ಅಸ್ತಿತ್ವದಲ್ಲಿ  ಹಾಗೂ ಪ್ರಸಿದ್ಧಿಯಲ್ಲಿ ಮಹತ್ತರವಾಗಿ ಬೆಳೆದಿದೆ. ಡೀಸಲ್ ಹಾಗೂ ಸಿಎನ್‍ಜಿ ಪವರ್‍ಟ್ರೇನ್‍ಗ್‍ಳಲ್ಲಿ ಲಭ್ಯವಿರುವ, 50,000ಕ್ಕಿಂತ ಹೆಚ್ಚಿನ ಬಿಎಸ್6 I&LCVಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ.

ಸಣ್ಣ ವಾಣಿಜ್ಯ  ವಾಹನಗಳು  & ಪಿಕ್-ಅಪ್ಸ್

ಟಾಟಾ ಮೋಟರ್ಸ್‍ನ SCV & PU ಗಳು, ಸುಮಾರು 30 ಲಕ್ಷ ಭಾರತೀಯರಿಗೆ ಗೌರವಯುತವಾದ ಜೀವನೋಪಾಯ ಒದಗಿಸುವ  ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡಲ್ಲೂ ಸ್ವ-ಉದ್ಯೋಗವನ್ನು ವರ್ಧಿಸಿವೆ. SCV & PU ಪೋರ್ಟ್ ಪೋಲಿ, ಕಳೆದ 16ವರ್ಷಗಳಿಗಿಂತ  ಹೆಚ್ಚಿನ ಕಾಲದಿಂದ ಅಸ್ತಿತ್ವದಲ್ಲಿದ್ದು, ಕೊನೆಮೈಲಿ ಸಾರಿಗೆಯಲ್ಲಿ ಗ್ರಾಹಕರಿಗೆ ಸುರಕ್ಷಿತವಾದ, ಸ್ಮಾರ್ಟ್‍ಆದ, ಮತ್ತು ಮೌಲ್ಯ-ಸೃಷ್ಟಿಸುವ ಕೊಡುಗೆಗಳನ್ನು ನೀಡುವುದರ ಮೇಲೆ ಗಮನಕೇಂದ್ರೀಕರಿಸುತ್ತಿದೆ

ಪ್ರಯಾಣಿಕ ವಾಣಿಜ್ಯ ವಾಹನಗಳು
ಐವತ್ತಕ್ಕಿಂತ ಹೆಚ್ಚಿನ ವರ್ಷಗಳಿಂದ ಟಾಟಾ ಮೋಟರ್ಸ್  ಲಿ., ಭಾರತದಲ್ಲಿ ಜನರ ರಸ್ತೆ ಪ್ರಯಾಣವನ್ನು ನೋಡುವ ವಿಧಾನವನ್ನೇ ಬದಲಾಯಿಸುತ್ತಿದೆ. ನಗರಾಂತರ  ಶಾಲೆ ಅಥವಾ ಸಿಬ್ಬಂದಿಯ ಸಾಗಣೆಯಿಂದ ಹಿಡಿದು  ನಗರದೊಳಗಿನ ಪ್ರಯಾಣದವರೆಗಿನ ಅಪ್ಲಿಕೇಶನ್ ಶ್ರೇಣಿಗಳೊಂದಿಗೆ ಅದು ನಗರ ಸಾರ್ವಜನಿಕ ಸಾರಿಗೆಯ ಅಗತ್ಯಗಳನ್ನು ಪೂರೈಸುತ್ತಿದೆ.  ತನ್ನ ಎಲೆಕ್ಟ್ರಿಕ್ ಬಸ್‍ಗಳ ಮೂಲಕ ಅದು ಸಿಎನ್‍ಜಿ, ಎಲ್‍ಎನ್‍ಜಿ, ಹೈಡ್ರೋಜನ್  ಸೆಲ್  ಮುಂತಾದ ಪರಿಶುದ್ಧವಾದ ಹಸಿರು ತಂತ್ರಜ್ಞಾನಗಳನ್ನು ಒದಗಿಸುವ ಮೂಲಕ ಅದು ಮುಂದಿನಿಂದ ಸಾರಿಗೆ ಪರಿಹಾರಗಳನ್ನು ಒದಗಿಸುತ್ತಿದೆ.

ಭಾರತೀಯ ಆರ್ಥಿಕತೆಗೆ ಶಕ್ತಿ ನೀಡುತ್ತಿರುವ ಮೂಲಸೌಕರ್ಯ ಅಭಿವೃದ್ಧಿ, ಗ್ರಾಹಕ ಬಳಕೆ,ಮತ್ತುಇ-ವಾಣಿಜ್ಯದ ಇಂಜಿನ್‍ಗಳು ತಡೆರಹಿತವಾಗಿ ಓಡಬೇಕಾದರೆ  ಅವುಗಳಿಗೆ  ನಿರಂತರ ಸಾರಿಗೆ ಬೆಂಬಲ ಅಗತ್ಯವಾಗುತ್ತದೆ. ವಾಣಿಜ್ಯ ವಾಹನಗಳಲ್ಲಿ ಮುಂದಾಳು ಸಂಸ್ಥೆಯಾಗಿರುವ ನಾವು, ಹೆಚ್ಚು ಸ್ಮಾರ್ಟ್ ಆದ,ಭವಿಷ್ಯತ್ತು-ಸಿದ್ಧವಾದ ಉತ್ಪನ್ನಗಳು ಹಾಗೂ  ಸೇವೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಅತ್ಯುತ್ಕೃಷ್ಟ ಮೌಲ್ಯಪ್ರಯೋಜನವನ್ನು ಒದಗಿಸುತ್ತಾ ಬಂದಿದ್ದೇವೆ. ಇಂದು ನಾವು ಪರಿಚಯಿಸುತ್ತಿರುವ ಈ 21 ಅಂಶ-ಸಮೃದ್ಧವಾದ ವಾಹನಗಳು, ಭಾರತದ ಆರ್ಥಿಕತೆಯ ಹೆಚ್ಚುತ್ತಿರುವ ಅಗತ್ಯಗಳು  ಮತ್ತು ಸಮರ್ಥ ಸಾರಿಗೆಗೆ ಅದರ ಬೆಳೆಯುತ್ತಿರುವ  ಬೇಡಿಕೆಯನ್ನು ಪೂರೈಸುವುದಕ್ಕಾಗಿಯೇ ವಿನ್ಯಾಸಗೊಂಡಿವೆ. ಈ ವಾಹನಗಳ ಪ್ರತಿಯೊಂದು ಅಂಶವನ್ನೂ, ವಿವಿಧ ಕರ್ತವ್ಯ ಆವರ್ತನಗಳು, ಹಾಗೂ ವಿಶೇಷ ಅಪ್ಲಿಕೇಶನ್‍ಗಳೆರಡನ್ನೂ ಪೂರೈಸುವ ಸಲುವಾಗಿ ಉದ್ದೇಶಾತ್ಮಕವಾಗಿ ವರ್ಧಿಸಲಾಗಿದೆ. ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳು, ಸೂಕ್ಷ್ಮಗೊಂಡ ಪವರ್‍ಟ್ರೇನ್‍ಗಳು ಮತ್ತು ಆರಾಮ ಹಾಗೂ ಅನುಕೂಲತೆಯಲ್ಲಿ ನವೀಕರಣವನ್ನು ಅಳವಡಿಸಿಕೊಂಡಿರುವ ನಮ್ಮ ವಾಹನಗಳು, ಹೆಚ್ಚಿನ ಲಾಭ ತರುವುದಕ್ಕಾಗಿ, ಕಡಿಮೆ ವೆಚ್ಚಗಳೊಂದಿಗೆ ಹೆಚ್ಚು ಆದಾಯ  ತರುವುದಕ್ಕೆ ವಾಹನದ ಗರಿಷ್ಟ ಬಳಕೆಯ  ಅಗತ್ಯವನ್ನು ಪೂರೈಸಲು ಸೂಕ್ತವಾಗಿವೆ ಎಂದು  ಟಾಟಾ ಮೋಟರ್ಸ್‍ನ ಎಕ್ಸಿಕ್ಯೂಟಿವ್ ನಿರ್ದೇಶಕ  ಗಿರೀಶ್ ವಾಘ್ ಹೇಳಿದರು.

Follow Us:
Download App:
  • android
  • ios