ದಂಡ ನೋಡಿ ಬೈಕ್ ಸುಟ್ಟ, ನಟಿಗೆ ಪ್ರಶ್ನೆ ಕೇಳಿ ಅಭಿಮಾನಿ ಕೆಟ್ಟ; ಇಲ್ಲಿವೆ ಸೆ.06ರ ಟಾಪ್ 10 ಸುದ್ದಿ ಇಲ್ಲಿವೆ!
ರಾಜ್ಯ ಹಾಗೂ ರಾಷ್ಟ್ರ ರಾಜಕೀಯಕ್ಕಿಂತ ಇದೀಗ ಟ್ರಾಫಿಕ್ ನಿಯಮ ಹಾಗೂ ದಂಡವೇ ಹೆಚ್ಚು ಸದ್ದು ಮಾಡುತ್ತಿದೆ. ದಂಡ ಮೊತ್ತ ಕೇಳಿ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದ್ದರೆ, ದಂಡ ತಪ್ಪಿಸಿಕೊಳ್ಳಲು ಸವಾರರ ನಾನಾ ಉಪಾಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಹೊರತು ಪಡಿಸಿದರೆ, ರಷ್ಯಾಗೆ ತೆರಳಿದ ಪ್ರಧಾನಿ ಮೋದಿ ಸೋಫಾದಿಂದ ದಿಢೀರ್ ಎದ್ದು ವಿಶ್ವದ ಗಮನಸೆಳೆದಿದ್ದಾರೆ. ಇತ್ತ ಅಭಿಮಾನಿಯೊರ್ವ ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್ ನೀಡಿದ್ದರೆ, ನಟಿ ಇಲಿಯಾನ ಅಭಿಮಾನಿಗೆ ಹಿಗ್ಗಾ ಮುಗ್ಗಾ ಜಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯನ ಮೇಲೆ ಕೊಲೆ ಬೆದರಿಕೆ ಆರೋಪ ಕ್ರಿಕೆಟ್ ವಲಯವನ್ನೇ ಬೆಚ್ಚಿ ಬೀಳಿಸಿದೆ. ಸೆ.06 ರಲ್ಲಿ ರಾಜ್ಯ ಹಾಗೂ ದೇಶದಲ್ಲಿ ಸಂಚಲನ ಮೂಡಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ.
1 ಮೋದಿಯಿಂದ ಫೋಟೋ ಸೆಷನ್ ಲೇಟ್: ಪ್ರಧಾನಿ ಸೋಫಾದಿಂದ ಎದ್ದಿದ್ದೇಕೆ?
2 ಡಿಕೆಶಿಗಿಲ್ಲ ಕೈ ನಾಯಕರ ಬೆಂಬಲ? ಹಿಂದೇಟು ಹಾಕಲು ಇದೇ ಕಾರಣ!
3 ಮಂಗಳೂರು: IAS ಸಸಿಕಾಂತ್ ಸೆಂಥಿಲ್ ರಾಜೀನಾಮೆ
4 ಮೈಸೂರು ರಾಜರ ಬೆಂಗಳೂರು ಅರಮನೆ ಈ ವಿಷ್ಯ ನಿಮ್ಗೆ ಗೊತ್ತಿರ್ಲಿಕ್ಕಿಲ್ಲ!
5 ಕ್ರಿಕೆಟ್ ಮುಖ್ಯಸ್ಥನಿಗೆ ಜೀವ ಬೆದರಿಕೆ; 2011ರ ವಿಶ್ವಕಪ್ ತಂಡದ ಕ್ರಿಕೆಟಿಗನ ಮೇಲೆ ಆರೋಪ!
6 ಇದೇನು ಅಭಿಮಾನ! ಕಿಚ್ಚ ಸುದೀಪ್ ಗಾಗಿ ಲೈಬ್ರರಿ ಕಟ್ಟಿಸಿದ ಅಭಿಮಾನಿ!
7 'ನೀವು ಕನ್ಯತ್ವ ಕಳೆದುಕೊಂಡಿದ್ದು ಯಾವಾಗ'? ಎಂದವನಿಗೆ ಚಳಿ ಬಿಡಿಸಿದ ಇಲಿಯಾನ!
8 ಬ್ರಾಡ್‌ಬ್ಯಾಂಡ್ ಮಾರುಕಟ್ಟೆಗೆ ಜಿಯೋ ದಾಳಿ; ಉಚಿತ ಟಿವಿ ಕೂಡಾ ತಗೊಳ್ಳಿ!
9 ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!
10 ಹೊಸ ಟ್ರಾಫಿಕ್ ರೂಲ್ಸ್: ವಾಹನ ಸವಾರರ ಐಡಿಯಾಗೆ ಪೊಲೀಸರೇ ದಂಗು!