ಹೊಸ ಟ್ರಾಫಿಕ್ ರೂಲ್ಸ್: ವಾಹನ ಸವಾರರ ಐಡಿಯಾಗೆ ಪೊಲೀಸರೇ ದಂಗು!

ಹೊಸ ಟ್ರಾಫಿಕ್ ನಿಯಮ ಹಾಗೂ ದಂಡದಿಂದ ತಪ್ಪಿಸಿಕೊಂಡರೆ ಹೊಸ ವಾಹನವೇ ಖರೀದಿಸಬಹುದು ಅನ್ನೋ ಮಾತು ಸದ್ಯ ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ನೂತನ ಫೈನ್‌ನಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಹೊಸ ಉಪಾಯ ಮಾಡಿದ್ದಾರೆ. ಸವಾರರ ಐಡಿಯಾಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

Viral video Avoid traffic fine bikers walk with two wheelers in front of cops

ನವದೆಹಲಿ(ಸೆ.06): ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಇದೀಗ ಭಾರಿ ಚರ್ಚಗೆ ಗ್ರಾಸವಾಗಿದೆ. ಒಂದೆಡೆ ಹೊಸ ನಿಯಮಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ದಂಡ ಮೊತ್ತ ಹೆಚ್ಚಾಯಿತು, ತಕ್ಷಣವೇ ನಿಯಮ ಹಿಂಪಡೆಯುವಂತೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಭಾರಿ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಉಪಾಯಗಳನ್ನು ಕಂಡುಹಿಡಿಯುತ್ತಿದ್ದಾರೆ. ಇದೀಗ ದ್ವಿಚಕ್ರ ವಾಹನ ಸವಾರರ ಹೊಸ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ದಂಡದ ಸಂಪೂರ್ಣ ವಿವರ ಇಲ್ಲಿದೆ!

ಹೆಲ್ಮೆಟ್ ರಹಿತ ಚಾಲನೆಗೆ ಸದ್ಯ ದುಬಾರಿ ದಂಡ  ಪಾವತಿಸಬೇಕು. ಇದನ್ನು ತಪ್ಪಿಸಲು  ದ್ವಿಚಕ್ರ ವಾಹನ ಸವಾರರು ಪೊಲೀಸರ ಮುಂದೆ ದ್ವಿಚಕ್ರವಾಹನದಿಂದ ಇಳಿದು ತಳ್ಳುತ್ತಾ ಸಾಗುವು ವಿಡೀಯೋ ಸಂಚಲನ ಸೃಷ್ಟಿಸಿದೆ. ಒಂದಲ್ಲ, ಎರಡಲ್ಲ ಸುಮಾರ 50ಕ್ಕೂ ಹೆಚ್ಚಿನ ಸವಾರರು ಈ ರೀತಿ ಬೈಕ್ ತಳ್ಳುತ್ತಾ ಸಾಗುತ್ತಿರುವ ದೃಶ್ಯ ಬಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದರೆ ಡಬಲ್‌ ದಂಡ!

ಪೊಲೀಸರು ಎದುರಿಗೆ ಕಾಣುವ ತನಕ ದ್ವಿಚಕ್ರ ವಾಹನ ಓಡಿಸುತ್ತಾ ಬಂದು, ಪೊಲೀಸರು ಕಂಡ ತಕ್ಷಣ ಬೈಕ್‌ನಿಂದ ಇಳಿದು ತಳ್ಳುತ್ತಾ ಸಾಗುತ್ತಾರೆ. ಈ ವಿಡೀಯೋವನ್ನು ಐಪಿಎಸ್ ಅಧಿಕಾರಿ ಪಂಕಜ್ ನೈನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಇದು ಹಳೆಯ ವಿಡಿಯೋ ಆಗಿದ್ದು, ಸದ್ಯದ ಸಂದರ್ಭಕ್ಕೆ ಸೂಕ್ತವಾಗಿದೆ ಅನ್ನೋ ಕಾರಣಕ್ಕೆ ಐಪಿಎಸ್ ಅಧಿಕಾರಿ ಶೇರ್ ಮಾಡಿದ್ದಾರೆ. ಇಷ್ಟೇ ಅಲ್ಲ ಟ್ರಾಫಿಕ್ ನಿಯಮ ಪಾಲಿಸಿ ಎಂದು ಕಿವಿ ಮಾತು ಹೇಳಿದ್ದಾರೆ. ಆದರೆ ಈ ಹಳೇ ವಿಡೀಯೋ ಸದ್ಯ ವೈರಲ್ ಆಗಿದೆ. 

ಇದನ್ನೂ ಓದಿ: ಜಾರಿಯಾಯ್ತು ಹೊಸ ರೂಲ್ಸ್; ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ!

 

Latest Videos
Follow Us:
Download App:
  • android
  • ios