Asianet Suvarna News Asianet Suvarna News

ಬ್ರಾಡ್‌ಬ್ಯಾಂಡ್‌ ಮಾರುಕಟ್ಟೆಗೆ ಜಿಯೋ ದಾಳಿ; ಉಚಿತ ಟಿವಿ ಕೂಡಾ ತಗೊಳ್ಳಿ!

ಸೆಟ್‌ಟಾಪ್‌ ಬಾಕ್ಸ್‌ ಮೂಲಕ ಇಂಟರ್ನೆಟ್‌, ಡಿಟಿಎಚ್‌, ಕರೆ ಸೌಲಭ್ಯ; ಮೂರು ತಿಂಗಳು ಉಚಿತ; ವಿಶ್ವದಲ್ಲೇ ವೇಗದ ಇಂಟರ್ನೆಟ್‌
 

Reliance jio Fiber Broadband Internet Plan Price Details
Author
Bengaluru, First Published Sep 6, 2019, 3:23 PM IST

ನವದೆಹಲಿ (ಸೆ.06): ಕಡಿಮೆ ದರದಲ್ಲಿ 4G ಇಂಟರ್‌ನೆಟ್‌ ನೀಡುವ ಮೂಲಕ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಜಿಯೋ, ಈಗ ಅಗ್ಗದ ದರದಲ್ಲಿ ಬ್ರಾಡ್‌ಬ್ಯಾಂಡ್‌, ಕೇಬಲ್‌ ಟೀವಿ, ದೂರವಾಣಿ ಕರೆ, ಇ-ಕಾಮರ್ಸ ಖರೀದಿ ವೇದಿಕೆ ಎಲ್ಲವನ್ನೂ ಒಳಗೊಂಡ ಜಿಯೋ ಗಿಗಾ ಫೈಬರ್‌ ಸೇವೆಯನ್ನು ಪರಿಚಯಿಸಿದೆ.

ಮಾಸಿಕ 699 ರು. ಗೆ 100 MB ಹಾಗೂ ಮಾಸಿಕ 8499 ರು. ಗೆ 1 Gbps ವೇಗದ ಇಂಟರ್ನೆಟ್‌ ನೀಡುವ ಈ ಸೇವೆ ಇದಾಗಿದ್ದು, ಇದರ ಜತೆಗೆ ಜೀವಮಾನವಿಡೀ ಅನಿಯಮಿತ ಡೇಟಾ, ಅನಿಯಮಿತ ಕರೆ ಹಾಗೂ ವಿಡಿಯೋ ಕರೆ ಸೌಲಭ್ಯ ಕೂಡ ನೀಡಲಾಗಿದೆ. ಇದು ಬ್ರಾಡ್‌ಬ್ಯಾಂಡ್‌ ಹಾಗೂ ಇ-ಕಾಮರ್ಸ್‌ ಕ್ಷೇತ್ರದಲ್ಲಿ ಭಾರೀ ಕ್ರಾಂತಿಗೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.

ಮಾಸಿಕ 1299 ರಿಂದ 8,499 ರು. ಪ್ಲಾನ್‌ ಆಯ್ಕೆ ಮಾಡಿಕೊಂಡರೆ ಉಚಿತ ಟಿವಿ ಕೂಡ ಸಿಗಲಿದೆ. ಟೆಲಿಕಾಂ ಕ್ಷೇತ್ರದಲ್ಲಿ ಮಾಡಿದ ಮ್ಯಾಜಿಕ್‌ ಇಲ್ಲೂ ಮುಂದುವರಿದರೆ ಡಿಟಿಎಚ್‌, ಬ್ರಾಡ್‌ಬ್ಯಾಂಡ್‌ ಹಾಗೂ ಕೇಬಲ್‌ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದೆ ಎನ್ನಲಾಗಿದೆ. ಇದು ಇತರೆ ಬ್ರಾಡ್‌ಬ್ಯಾಂಡ್‌ ಸೇವೆಗಳಿಗಿಂತ ಶೇ.35-ಶೇ.45ರಷ್ಟುಅಗ್ಗವಾಗಿರಲಿದೆ. ಸೇವೆ ಪಡೆದುಕೊಳ್ಳಲು 1000ರು. ಅಳವಡಿಕೆ ಶುಲ್ಕ ಹಾಗೂ 1500 ರು. ಮಾರುಪಾವತಿ ಶುಲ್ಕ ಪಾವತಿ ಮಾಡಬೇಕು.

ಇದನ್ನೂ ಓದಿ | 40 ಕೋಟಿ ಫೇಸ್‌ಬುಕ್‌ ಬಳಕೆದಾರರ ಮೊಬೈಲ್‌ ನಂಬರ್‌ ಸೋರಿಕೆ!

ಮೂರು ತಿಂಗಳು ಉಚಿತ:

ಒಟ್ಟು ಆರು ಪ್ಲಾನ್‌ಗಳನ್ನು ಘೋಷಣೆ ಮಾಡಲಾಗಿದ್ದು, ಎಲ್ಲಾ ಪ್ಲಾನ್‌ಗಳ ಸೇವೆ ಮೊದಲ ಮೂರು ತಿಂಗಳು ಎಲ್ಲಾ ಸೇವೆಗಳು ಸಂಪೂರ್ಣ ಉಚಿತವಾಗಿರಲಿದೆ.

ವಿಶ್ವದಲ್ಲೇ ಅತೀ ವೇಗದ ಇಂಟರ್ನೆಟ್‌:

ಸದ್ಯ ಅಮೆರಿಕದಲ್ಲಿ ಗರಿಷ್ಠ ಇಂಟರ್ನೆಟ್‌ ವೇಗ 90 Mbps ಇದ್ದು, ಭಾರತದಲ್ಲಿ 24.56 Mbps ಇದೆ. ಈ ಯೋಜನೆ ಬಳಿಕ ಭಾರತದಲ್ಲಿ ಗರಿಷ್ಠ ಇಂಟರ್ನೆಟ್‌ ವೇಗ 1 Gbpsಗೆ ಏರಿಕೆಯಾಗಲಿದೆ. ಅಲ್ಲದೇ ವಿಡಿಯೋ ಹಾಗೂ ಆಡಿಯೋ ಕರೆಗಳ ಶೇ.90 ರಷ್ಟುಅಗ್ಗವಾಗಲಿದೆ. ಸದ್ಯ ಭಾರತದ ಮೆಟ್ರೋ ನಗರಗಳು ಸೇರಿದಂತೆ 1600 ನಗರಗಳಲ್ಲಿ ಈ ಸೇವೆಯನ್ನು ಪರಿಚಯಿಲಾಗಿದೆ.

ಯಾವೆಲ್ಲಾ ಪ್ಲಾನ್‌ಗಳಿವೆ?

ಈ ಯೋಜನೆಯಡಿ ಒಟ್ಟು ಆರು ಪ್ಲಾನ್‌ಗಳನ್ನು ಘೋಷಣೆ ಮಾಡಲಾಗಿದ್ದು, ಮಾಸಿಕ ಯಾವುದೇ ಪ್ಲಾನ್‌ ಆಯ್ಕೆ ಮಾಡಿಕೊಂಡರೆ 5000 ರು. ಮೌಲ್ಯದ ಉಚಿತ ಸೆಟ್‌ಟಾಪ್‌ ಬಾಕ್ಸ್‌ ದೊರೆಯಲಿದೆ.

1. ಟೈಟಾನಿಯಂ ಪ್ಲಾನ್‌: ಮಾಸಿಕ 8499ರು. ಮೌಲ್ಯದ ಪ್ಲಾನ್‌ ಇದಾಗಿದ್ದು, 1 Gbps ವೇಗದ ಇಂಟರ್‌ನೆಟ್‌ ಸಿಗಲಿದೆ. ಅನಿಯಮಿತ ಹೈಸ್ಪೀಡ್‌ ಡೇಟಾ, ಉಚಿತ ಆಡಿಯೋ ಹಾಗೂ ವಿಡಿಯೋ ಕರೆ, ಗೇಮಿಂಗ್‌, ಥಿಯೇಟರ್‌ ಅನುಭವ ನೀಡುವ ವಿಆರ್‌ ಹೆಡ್‌ ಸೆಟ್‌, ಫಸ್ಟ್‌ ಡೇ ಫಸ್ಟ್‌ ಶೋ ಸಿನೆಮಾ, 43 ಇಂಚಿನ 4ಕೆ ಟಿವಿ ಉಚಿತವಾಗಿ ಸಿಗಲಿದೆ.

2. ಪ್ಲಾಟಿನಂ ಪ್ಲಾನ್‌: 3999ರು.ಗೆ 1Gbps ವೇಗದ ಇಂಟರ್ನೆಟ್‌, ಅನಿಯಮಿತ ಹೈಸ್ಪೀಡ್‌ ಡೇಟಾ, ವಿಡಿಯೋ ಹಾಗೂ ಆಡಿಯೋ ಕಾಲಿಂಗ್‌, ಗೇಮಿಂಗ್‌, ಥಿಯೇಟರ್‌ ಅನುಭವ ನೀಡುವ ವಿಆರ್‌ ಹೆಡ್‌ ಸೆಟ್‌, ಫಸ್ಟ್‌ ಡೇ ಫಸ್ಟ್‌ ಶೋ ಸಿನೆಮಾ, 32 ಇಂಚಿನ 4ಕೆ ಟಿವಿ ಉಚಿತವಾಗಿ ಸಿಗಲಿದೆ.

ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ; ಇನ್ಮುಂದೆ ಆ್ಯಪಲ್ ಫೋನ್ ಖರೀದಿ ಸುಲಭ!

3. ಡೈಮಂಡ್‌ ಪ್ಲಾನ್‌: ಮಾಸಿಕ 2499 ರು.ಗೆ 500 Mbps ವೇಗದ ಇಂಟರ್ನೆಟ್‌, ಅನಿಯಮಿತ ಹೈಸ್ಪೀಡ್‌ ಡೇಟಾ, ಉಚಿತ ಆಡಿಯೋ ಹಾಗೂ ವಿಡಿಯೋ ಕರೆ, ಗೇಮಿಂಗ್‌, ಥಿಯೇಟರ್‌ ಅನುಭವ ನೀಡುವ ವಿಆರ್‌ ಹೆಡ್‌ ಸೆಟ್‌, ಫಸ್ಟ್‌ ಡೇ ಫಸ್ಟ್‌ ಶೋ ಸಿನೆಮಾ, 24 ಇಂಚಿನ ಎಚ್‌ಡಿ ಟಿವಿ ಉಚಿತವಾಗಿ ಸಿಗಲಿದೆ.

4. ಗೋಲ್ಡ್‌ ಪ್ಲಾನ್‌: ಮಾಸಿಕ 1299ರು. ಗೆ, 250 ಎಂಬಿಪಿಎಸ್‌ ವೇಗದ ಇಂಟರ್‌ನೆಟ್‌, ಅನಿಯಮಿತ ಹೈಸ್ಪೀಡ್‌ ಡೇಟಾ, ಉಚಿತ ಆಡಿಯೋ ಹಾಗೂ ವಿಡಿಯೋ ಕರೆ, ಗೇಮಿಂಗ್‌, 24 ಇಂಚಿನ ಎಚ್‌ಡಿ ಟಿವಿ ಉಚಿತವಾಗಿ ಸಿಗಲಿದೆ.

5. ಸಿಲ್ವರ್‌ ಪ್ಲಾನ್‌: ಮಾಸಿಕ 849ರು. ಗೆ, 100 Mbps ವೇಗದ ಇಂಟರ್‌ನೆಟ್‌, ಅನಿಯಮಿತ ಹೈಸ್ಪೀಡ್‌ ಡೇಟಾ, ಉಚಿತ ಆಡಿಯೋ ಹಾಗೂ ವಿಡಿಯೋ ಕರೆ, ಗೇಮಿಂಗ್‌, 12 ವ್ಯಾಟ್ಸ್‌ ಸಾಮರ್ಥ್ಯದ 2 ಸ್ಪೀಕರ್‌ ಉಚಿತವಾಗಿ ಸಿಗಲಿದೆ.

6. ಬ್ರೋನ್ಝ್ ಪ್ಲಾನ್‌: ಮಾಸಿಕ 699ರು. ಗೆ, 100 Mbps ವೇಗದ ಇಂಟರ್‌ನೆಟ್‌, ಅನಿಯಮಿತ ಹೈಸ್ಪೀಡ್‌ ಡೇಟಾ, ಉಚಿತ ಆಡಿಯೋ ಹಾಗೂ ವಿಡಿಯೋ ಕರೆ, ಗೇಮಿಂಗ್‌, 6 ವ್ಯಾಟ್ಸ್‌ ಸಾಮರ್ಥ್ಯದ ಸ್ಪೀಕರ್‌ ಉಚಿತವಾಗಿ ಸಿಗಲಿದೆ.

Follow Us:
Download App:
  • android
  • ios