ತೆಲುಗು, ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಇಲಿಯಾನ ಡಿಸೋಜಾ ಇನ್ಸ್ಟಾಗ್ರಾಮ್ ನಲ್ಲಿ 'Ask me Anything' ಎಂದು ಅಭಿಮಾನಿಗಳಲ್ಲಿ ಕೇಳಿದ್ದರು. ಆಗ ಅಭಿಮಾನಿಯೊಬ್ಬ ಅಶ್ಲೀಲವಾಗಿ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ಇಲಿಯಾನ ಕೊಟ್ಟ ಉತ್ತರ ಮುಟ್ಟಿ ನೋಡುಕೊಳ್ಳುವಂತಿದೆ. 

ಮಕ್ಕಳೇ ಬೇಡ ಎಂದ 'ಯೂ ಟರ್ನ್’ ನಟಿ ಶ್ರದ್ಧಾ

ನಿಮ್ಮ ಕನ್ಯತ್ವವನ್ನು ಮೊದಲ ಬಾರಿ ಕಳೆದುಕೊಂಡಿದ್ದು ಯಾವಾಗ ಎಂದು ಪ್ರಶ್ನಿಸುತ್ತಾನೆ. ಕೂಡಲೇ ಇಲಿಯಾನ, ನೀನು ತುಂಬಾ ಉದ್ಧಟತನ ತೋರಿಸುತ್ತಿದ್ದೀಯಾ? ನಿನ್ನ ತಾಯಿಯನ್ನು ಒಮ್ಮೆ ಕೇಳು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. 

ಇಲಿಯಾನ ಉತ್ತರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. 

ಕೆಲದಿನಗಳ ಹಿಂದೆ ನಟ ಟೈಗರ್ ಶ್ರಾಫ್ ಕೂಡಾ ಇದೇ ರೀತಿ ಪ್ರಶ್ನೆಯನ್ನು ಎದುರಿಸಿದ್ದರು. ಅಭಿಮಾನಿಯೊಬ್ಬ, ನೀವು ವರ್ಜಿನ್ನಾ? ಎಂದು ಪ್ರಶ್ನಿಸಿದ್ದರು. ಆಗ Shameless, ನನ್ನ ತಂದೆ-ತಾಯಿ ನನ್ನನ್ನು ಫಾಲೋ ಮಾಡ್ತಾ ಇದ್ದಾರೆ ಎಂದು ಉತ್ತರಿಸಿದ್ದರು.

ಬಾಲಿವುಡ್‌ನಿಂದ ಹಾರಿ ’ರಾಬರ್ಟ್’ ಗಾಗಿ ಹಾರಿ ಬಂದ ಭದ್ರಾವತಿ ಹುಡುಗಿ! 

ಇದೇ ಸಂದರ್ಭದಲ್ಲಿ ಇಲಿಯಾನ, ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅನಿಲ್ ಕಪೂರ್, ಜಾನ್ ಅಬ್ರಾಹಿಂ, ಕೃತಿ ಕರಬಂಧ, ಪುಲ್ಕಿತ್ ಸಾಮ್ರಾಟ್ ಜೊತೆ ’ಅನೀಜ್ ಬಸ್ಮೀಸ್’ ಎನ್ನುವ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದಾರೆ. ನವೆಂಬರ್ 08 ಕ್ಕೆ ಇದು ತೆರೆಗೆ ಬರಲಿದೆ.