ಇರಾನ್-ಇಸ್ರೇಲ್ ಯುದ್ಧದ ನಡುವೆಯೂ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಅಚ್ಚರಿಯ ಇಳಿಕೆ!
ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿವೆ. ದೆಹಲಿ, ಕೋಲ್ಕತ್ತಾ, ಮುಂಬೈ, ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ದರಗಳು ಕಡಿಮೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.

ಎಲ್‌ಪಿಜಿ ಬೆಲೆ
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಶುರುವಾಗಿದ್ದು, ಅಕ್ಷರಶಃ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲಾ ಸನ್ನಿವೇಶ ಜಾಗತೀಕ ಮಾರುಕಟ್ಟೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಬೆಳವಣಿಗೆ ನಡುವೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿಂದು ಇಳಿಕೆಯಾಗಿದೆ. ಎಲ್‌ಪಿಜಿ ಬೆಲೆಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ನಂತಹ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನಿರ್ಧರಿಸುತ್ತವೆ.
ಹೊಸ ದರಗಳು ಇಂದಿನಿಂದಲೇ ಜಾರಿಗೆ
ತೈಲ ಕಂಪನಿಗಳು ಪ್ರತಿ ತಿಂಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಇಂದು ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್ ಬೆಲೆಯಲ್ಲಿ 28 ರಿಂದ 31 ರೂ.ಗಳಷ್ಟು ಕಡಿಮೆಯಾಗಿದೆ. ಈ ಬೆಲೆಗಳು ನಗರದಿಂದ ನಗರಕ್ಕೆ ವ್ಯತ್ಯಾಸವಾಗಿರುತ್ತದೆ. ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ದೆಹಲಿಯಲ್ಲಿ ಬೆಲೆ ಎಷ್ಟು?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 28 ರೂ.ಗಳಷ್ಟು ಕಡಿಮಯಾಗಿದೆ. ಫೆಬ್ರವರಿಯಲ್ಲಿ 1768.5 ರೂ.ಗಳಿಗೆ ಸಿಗ್ತಿದ್ದ ಕಮರ್ಷಿಯಲ್ ಸಿಲಿಂಡರ್ ಈ ತಿಂಗಳು 1740.5 ರೂ.ಗಳಿಗೆ ಸಿಗುತ್ತದೆ. ಫೆಬ್ರವರಿಯಲ್ಲಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಕೊಂಚ ಏರಿಕೆಯಾಗಿತ್ತು.
ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ
ಇನ್ನು ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 31 ರೂ.ಗಳಷ್ಟು ಇಳಿಕೆಯಾಗಿದೆ. 1875.5 ರೂ.ಗಳಿಗೆ ಸಿಗುತ್ತಿದ್ದ ಎಲ್‌ಪಿಜಿ ಸಿಲಿಂಡರ್ 1844.5 ರೂ.ಗೆ ಲಭ್ಯವಾಗಲಿದೆ. ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 28.5 ಮತ್ತು 29.5 ರೂ.ಗಳಷ್ಟು ಕುಸಿತವಾಗಿದೆ.
ಇದನ್ನೂ ಓದಿ: ಅಮೆರಿಕ ಇರಾನ್ ದಾಳಿಯಿಂದ ಭಾರತೀಯರಿಗೆ ಮತ್ತೊಂದು ಶಾಕ್, ಮಾ.1ರಿಂದ ಚಿನ್ನ ಬೆಳ್ಳಿ ಬೆಲೆ ದುಬಾರಿ
ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ
ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ: 855 ರೂಪಾಯಿ
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ: 1841 ರೂಪಾಯಿ
5 ಕೆಜಿ ಸಿಲಿಂಡರ್ ಬೆಲೆ: 318.50 ರೂಪಾಯಿ
47.5 ಕೆಜಿ ಸಿಲಿಂಡರ್ ಬೆಲೆ: 4,532 ರೂಪಾಯಿ
ಇದನ್ನೂ ಓದಿ: ಮಾರ್ಚ್ 2026: ನಾಳೆಯಿಂದ ಹೊಸ ಆಪ್ ಜೊತೆ ಬದಲಾಗಲಿವೆ ನಾಲ್ಕು ಪ್ರಮುಖ ನಿಯಮಗಳು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

